ಕಳೆದ ವರ್ಷ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ
ಮುದ್ದೇಬಿಹಾಳ : ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ತಾಲೂಕಿನ ಢವಳಗಿ ಗ್ರಾಮದ ಎಂಬಿಪಿ ಪರೀಕ್ಷಾ ಕೇಂದ್ರವನ್ನು ರದ್ದು ಪಡಿಸಿ ಮೊದಲ ಹಂತದ ಕ್ರಮವನ್ನು, ವರ್ಷದ ಬಳಿಕ ಕೈಗೊಂಡAತಾಗಿದೆ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಸಭೆಯಲ್ಲಿ ಮಾತನಾಡುವಾಗ ಬಿಇಓ ಎಸ್.ಜೆ.ನಾಯಕ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ರಾಜ್ಯಮಟ್ಟದಲ್ಲಿ ತಾಲೂಕಿನ ಹೆಸರಿಗೆ ಕಳಂಕ ಬಂದಿದ್ದರಿAದ ಈ ವರ್ಷ ಢವಳಗಿಯ ಎಂಬಿಪಿ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿಸಿ ತಾಲೂಕಿನ ಬಸರಕೋಡದಲ್ಲಿ ಹೊಸ ಸೆಂಟರ್ ತೆರೆಯಲಾಗಿದೆ. ಢವಳಗಿ ಭಾಗದ ವಿದ್ಯಾರ್ಥಿಗಳು ಇಂಗಳಗೇರಿಯ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಸಂಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಬಾರಿ ತಾಲೂಕಿನಲ್ಲಿ ಒಟ್ಟು ೨೦ ಪರೀಕ್ಷಾ ಕೇಂದ್ರಗಳಿದ್ದು ೬೨೪೬ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊAಡಿರುವದಾಗಿ ಮಾಹಿತಿ ನೀಡಿದರು.
ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಗೂ ಪರೀಕ್ಷೆಯ ಅಧ್ಯಕ್ಷರೂ ಆಗಿರುವ ತಹಶೀಲ್ದಾರ ರೇಖಾ.ಟಿ ಮಾತನಾಡಿ, ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಪಾರದರ್ಶಕ ಹಾಗೂ ಕಟ್ಟುನಿಟ್ಟಾಗಿ ಜರುಗಿಸಲು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದಲ್ಲಿ ನಿಗಾವಹಿಸಲು ನಿಯೋಜಿಸಲಾಗಿದೆ. ಪರೀಕ್ಷೆ ಸುಗಮವಾಗಿ ವ್ಯವಸ್ಥಿತವಾಗಿ ನಡೆಯಲು ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಲಾಗಿದ್ದು ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ ಎಂದರು.
ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಮಾತನಾಡಿದರು.
ನೋಡಲ್ ಅಧಿಕಾರಿ ಎಚ್.ಎ.ಮೇಟಿ, ತಾಳಿಕೋಟಿ ತಾಪಂ ಪ್ರಭಾರಿ ಇಓ ಸಾವಿತ್ರಿ ಬಿರಾದಾರ, ಮುದ್ದೇಬಿಹಾಳ ತಾಪಂ ಪ್ರಭಾರ ಯೋಜನಾಧಿಕಾರಿ ಖೂಭಾಸಿಂಗ ಜಾಧವ, ತಾಳಿಕೋಟಿ ಶಿರಸ್ತೇದಾರ ಜೈನಾಪೂರ ಸೇರಿದಂತೆ ಮುಖ್ಯ ಅಧೀಕ್ಷಕರುಗಳು ಇದ್ದರು.
ಮಾಧ್ಯಮದವರ ಪ್ರಶ್ನೆಗೆ ತಡವರಿಸಿದ ಬಿಇಓ.
ಕಳೆದ ಬಾರಿಯ ಢವಳಗಿಯ ಎಂಬಿಪಿ ಸೆಂಟರ್ ನಲ್ಲಿನ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬAಧಿಸಿದAತೆ ವರ್ಷಗಳು ಕಳೆದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲದಿರುವ ಕುರಿತು ಕಾರಣ ಕೇಳಿದ ಮಾಧ್ಯಮದವರಿಗೆ ಉತ್ತರಿಸಲು ಬಿಇಓ ಎಸ್.ಜೆ.ನಾಯಕ ತಡವರಿಸಿದ ಘಟನೆ ನಡೆಯಿತು. ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ ಬಿಇಓ ಒಂದು ವರ್ಷದವರೆಗೂ ನಿಮ್ಮ ಮೇಲಾಧಿಕಾರಿಗಳು ಮಾರ್ಗದರ್ಶನ ನೀಡಲೇ ಇಲ್ಲವೇ ಅಥವಾ ಕ್ರಮ ಕೈಗೊಳ್ಳದಿರುವಂತೆ ಸೂಚಿಸಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಸ್ಪಷ್ಠ ಉತ್ತರ ಬರಲಿಲ್ಲ.