Author: editor.udayarashmi@gmail.com

ಮುದ್ದೇಬಿಹಾಳ: ಪಟ್ಟಣದ ಸಂಗಮೆಶ್ವರ ನಗರದಲ್ಲಿ ಶರಣ ಬೆಳಗು ಕಾರ್ಯಕ್ರಮ ನೆರವೇರಿತು.ಈ ವೇಳೆ ಕಾಶಿಬಾಯಿ ರಾಂಪೂರ, ಮಹಾದೇವಿ ಕಂಠಿ, ಸರೋಜಾ ಕುರಿ, ವಿಜಯಲಕ್ಷ್ಮಿ ಬಿದರಕುಂದಿ, ಅನ್ನಪೂರ್ಣ ಕಿತ್ತೂರ, ಬಸವರಾಜ ನಾಲತವಾಡ, ರುದ್ರೇಶ ಕಿತ್ತೂರ, ಬಾಪುಗೌಡ ಪಾಟೀಲ ಸೇರಿದಂತೆ ಮಹಾಮನೆ ಬಳಗದ ಸದಸ್ಯರು, ಕದಳಿ ಘಟಕದ ಸದಸ್ಯರು ಭಾಗಿಯಾಗಿದ್ದರು.

Read More

ಸಿಂದಗಿಯಲ್ಲಿ ಬಿಜೆಪಿ ರೋಡ್ ಶೋ & ಬಹಿರಂಗ ಸಭೆಯಲ್ಲಿ ಶಾಸಕ ಬಸನಗೌಡ ಯತ್ನಾಳ ಸವಾಲು ಸಿಂದಗಿ: ಮೋದಿಯವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪ ಕಾಂಗ್ರೆಸ್ ಮಾಡಿ ತೋರಿಸಲಿ, ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಕಾಂಗ್ರೆಸ್ಸಿಗರ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಎಸೆದರು.ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ವಿಜಯಪುರ ಲೋಕಸಭಾ ಚುನಾವಣೆ ಪ್ರಚಾರದ ಪ್ರಯುಕ್ತವಾಗಿ ಹಮ್ಮಿಕೊಂಡ ರೋಡ್ ಶೋ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಹೇಳುತ್ತಾರೆ ಬಿಜೆಪಿ ಚೆಂಬು ಕೊಟ್ಟಿದ್ದಾರೆ ಎಂದು ಆದರೆ ೧೦ವರ್ಷದಲ್ಲಿ ಭಾರತಕ್ಕೆ ಮೋದಿಯವರು ಅಕ್ಷಯ ಪಾತ್ರೆಯನ್ನು ನೀಡಿದ್ದಾರೆ. ಕರೋನಾ ಲಸಿಕೆ ನಮ್ಮವರಿಗಲ್ಲದೇ ಹೋರಗಿನವರಿಗೂ ಮಾನವೀಯತೆಯ ದೃಷ್ಠಿಯಿಂದ ಕೊಟ್ಟಿದ್ದೇವೆ. ಜನಧನ ಯೋಜನೆಯಿಂದ ರೈತರ ಖಾತೆಗೆ ಹಣ ನೇರವಾಗಿ ಜಮಾವಾಗುತ್ತದೆ. ಆದರೆ ರಾಜೀವ ಗಾಂಧಿ ಪ್ರಧಾನಮಂತ್ರಿ ಇದ್ದಾಗ ದೆಹಲಿಯಿಂದ ೧೦೦ ಹೊರಟರೆ ನಮಗೆ ಬಂದು ತಲುಪಬೇಕಾದರೆ ೧೦ರೂ. ಬಂದು ತಲುಪುತಿತ್ತು. ಮೋದಿಯವರು ಬಂದ ಕಾರಣ ಡಿಜಿಟಲ್ ಇಂಡಿಯಾ ಸಹಕಾರಿಯಾಗಿದೆ. ಯಾರ…

Read More

ಹುಬ್ಬಳ್ಳಿಯ ‘ಸೆನ್ಸ್ ಎಸೆನ್ಸ್’ ಸಂಸ್ಥೆಯಿಂದ ಅಂಧರಿಗಾಗಿ ಸಿದ್ಧಪಡಿಸಿದ ಪುಸ್ತಕ ಬೆಂಗಳೂರು: ದೇಶದ ಏಳು ಕೋಟಿ ಅಂಧರು, ದೃಷ್ಟಿದೋಷವಿದ್ದವರು ಪ್ರಧಾನಿ ನರೇಂದ್ರ ಮೋದಿಯವರ ಜೀವನ, ಕಾರ್ಯ ಮತ್ತು ನಾಯಕತ್ವದ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಹುಬ್ಬಳ್ಳಿ ಮೂಲದ ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯು ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿದ ‘ಎ ಪ್ರಾಮಿಸ್ಡ್ ನೇಷನ್ ಹಾನರೇಬಲ್ ಶ್ರೀ ನರೇಂದ್ರ ಮೋದಿ – ದ ಮೇಕರ್ ಆಫ್ ನ್ಯೂ ಇಂಡಿಯಾ’ ಎಂಬ ಪುಸ್ತಕವನ್ನು ಇತ್ತೀಚೆಗೆ ಪ್ರಧಾನಿಯವರಿಗೆ ಅರ್ಪಿಸಲಾಯಿತು.ಸೆನ್ಸ್ ಎಸೆನ್ಸ್ ಸಂಸ್ಥೆಯ ರುಷಾಲಿ ಭಂಡಾರಿ ಮತ್ತು ಯಶ್ವಿ ಭಂಡಾರಿ ಅವರು ಅತ್ಯಂತ ಕಾಳಜಿಯಿಂದ ಸಿದ್ಧಪಡಿಸಿದ ಈ ವಿಶೇಷ ಪುಸ್ತಕವನ್ನು ವಿಆರ್‌ಎಲ್ ಸಮೂಹ ಸಂಸ್ಥೆಯ ಸಹಯೋಗ ಮತ್ತು ಪ್ರಾಯೋಜಕತ್ವದಲ್ಲಿ ಹೊರತರಲಾಗಿದೆ. ದೇಶದ ಎರಡೂವರೆ ಲಕ್ಷ ಅಂಧ ಮಕ್ಕಳು ಹಾಗೂ ಕಣ್ಣಿನ ಸಮಸ್ಯೆ ಎದುರಿಸುತ್ತಿರುವ 7 ಕೋಟಿ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈ ಪುಸ್ತಕದಿಂದ ಸಾಕಷ್ಟು ಮಾಹಿತಿ ಪಡೆದುಕೊಳ್ಳಬಹುದು.ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು…

Read More

ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮದ ಶಿಕ್ಷಕ ಮುಕುಂದ ಅಡಕೆ ಅವರ ಸುಪುತ್ರ ಆನಂದ ಅಡಕೆ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಚಡಚಣದ ಸಂಗಮೇಶ್ವರ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.೯೮.೭ ಅಂಕಗಳನ್ನು ಪಡೆದು ತಾಲೂಕು ಹಾಗೂ ಕಾಲೇಜಿಗೆ ಪ್ರಥಮ ಸ್ಥಾನವನ್ನು ಗಳಿಸಿ ಉತ್ತೀಣನಾಗಿ ಗ್ರಾಮದ ಕೀರ್ತಿಯನ್ನು ಹಿಚ್ಚಿಸಿದ ಪ್ರಯುಕ್ತ ಗ್ರಾಮದ ಪಿಕೆಪಿಎಸ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಕೋಳಿ, ಅಮಸಿದ್ದ ಹಿರೇಕುರುಬರ, ನಿಂಗಪ್ಪ ಮೇತ್ರೆ, ಸಂತೋಷ ಕುಂಬಾರ, ಮಲ್ಲಿಕಾರ್ಜುನ ತಳ್ಳೆಯವರುಗಳು ವಿದ್ಯಾರ್ಥಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಈ ವೇಳೆಯಲ್ಲಿ ಮಾತನಾಡಿದ ಪಿಕೆಪಿಎಸ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಕೋಳಿಯವರು. ಸದಾ ಏಕಾಗ್ರತೆಯಿಂದ ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ. ನಿರಂತರವಾದ ಅಭ್ಯಾಸದಿಂದ ಉತ್ತಮ ಸಾಧನೆ ಮಾಡಲು ಸಾಧ್ಯ. ಯಾವುದೇ ವಿಷಯವನ್ನು ಕಷ್ಟಪಟ್ಟು ಅಧ್ಯಯನ ಮಾಡದೇ ಇಷ್ಟಪಟ್ಟು ಅಧ್ಯಯನ ಮಾಡಬೇಕು ಎಂದು ಹೇಳಿದರು.

Read More

ಢವಳಗಿ: ಸಮೀಪದ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರರ ಜಾತ್ರಾ ನಿಮಿತ್ತ ಬುಧವಾರದಂದು ಅದ್ದೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.ನಿಡಗುಂದಿ ಗ್ರಾಮದಿಂದ ತೇರಿನ ಕಳಸ ಮತ್ತು ಬೆಳ್ಳಿಯ ಛತ್ರಿ ಆಗಮನ, ಕಾಶಿನಕುಂಟಿ ಗ್ರಾಮದಿಂದ ಪಲ್ಲಕ್ಕಿ ಆಗಮನ ಮತ್ತು ರೂಡಗಿ ಗ್ರಾಮದಿಂದ ತೇರಿನ ಮಣಿಯನ್ನು ಮೆರವಣಿಗೆಯ ಮುಖಾಂತರ ಸ್ವಾಗತಿಸಿಕೊಳ್ಳಲಾಯಿತು. ಮೂರು ಲಿಂಗದ ದೇವಸ್ಥಾನದಿಂದ ಪವಾಡ ಬಸವೇಶ್ವರರ ದೇವಸ್ಥಾನದವರೆಗೆ ಕಲಶದ ಮೆರವಣಿಗೆ ನಡೆಯಿತು. ಸಂಜೆ ರಥದ ಶಿಖರಕ್ಕೆ ಕಲಶ ಎರಿಸಿದ ನಂತರ ಬಳಿಕ ಮಹಾ ರಥೋತ್ಸವ ನೆರವೇರಿತು.ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಸಿ ಎಸ್ ನಾಡಗೌಡ ಮತ್ತು ದೇವಸ್ಥಾನದ ಕಮೀಟಿ ಅಧ್ಯಕ್ಷರಾದ ಕೆ ವಾಯ್ ಬಿರಾದಾರ, ಮತ್ತು ಜಾತ್ರಾ ಕಮೀಟಿ ಅಧ್ಯಕ್ಷರಾದ ಶ್ರೀಶೈಲ ಸೂಳಿಭಾವಿ ಹಾಗೂ ರೂಡಗಿ ಗ್ರಾಮದ ಶ್ರೀ ಯಲ್ಲಾಲಿಂಗ ಮಹಾರಾಜರು ಬುಧವಾರ ಸಂಜೆ 5-50 ನಿಮಿಷಕ್ಕೆ ರಥೋತ್ಸವಕ್ಕೆ ಚಾಲನೆ ನೀಡಿದರು.ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.ಮಹಾರಥೋತ್ಸವವು ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಪಾದಗಟ್ಟಿಯವರೆಗೆ ಹೋಗಿಬಂದಿತು.

Read More

ತಾಳಿಕೋಟಿ: ಸಂಸದ ಮತ್ತು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏ.26 ಶುಕ್ರವಾರ ರಂದು ವಿಜಯಪುರ ಪ್ರವಾಸ ಕೈಗೊಂಡು ಅಭ್ಯರ್ಥಿ ರಾಜು ಆಲಗೂರ ಪರ ಪ್ರಚಾರ ನಡೆಸಲಿದ್ದಾರೆ. ಈ ಸಮಾವೇಶದಲ್ಲಿ ಮುದ್ದೇಬಿಹಾಳ ಮತ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ಹಾಗೂ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಅಂದು ಮುಂಜಾನೆ 11:00 ಗಂಟೆಗೆ ನಗರದ ಸೋಲಾಪೂರ ರಸ್ತೆಯಲ್ಲಿರುವ ಬಿ ಎಲ್ ಡಿಇ ನೂತನ ಕ್ಯಾಂಪಸ್ ನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು ರಾಹುಲ್ ಗಾಂಧಿಯವರೊಂದಿಗೆ ಎ ಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ ಹಾಗೂ ಸಚಿವರಾದ ಎಂ ಬಿ ಪಾಟೀಲ ಶಿವಾನಂದ ಪಾಟೀಲ ಜಿಲ್ಲೆಯ ಶಾಸಕರಾದ ಯಶವಂತರಾಯ ಗೌಡ ಪಾಟೀಲ ವಿಠ್ಠಲ ಕಟಕದೊಂಡ ಅಶೋಕ ಮನಗೂಳಿ ವಿಧಾನ ಪರಿಷತ್ ಸದಸ್ಯ ಸುನಿಲ್ ಗೌಡ ಪಾಟೀಲ ಪಕ್ಷದ…

Read More

ದೇವರಹಿಪ್ಪರಗಿ: ಸಿಡಿಲಿನ ಹೊಡೆತಕ್ಕೆ ೧೦ ಕುರಿಗಳು ಬಲಿಯಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕರೂಗಿ ಗ್ರಾಮದಲ್ಲಿ ಜರುಗಿದೆ.ತಾಲ್ಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಬುಧವಾರ ಸಾಯಂಕಾಲ ಈ ಘಟನೆ ಜರುಗಿದ್ದು, ಗ್ರಾಮದ ಸುಬ್ರಾಯ್ ನಾಟೀಕಾರ ಎಂಬುವವರಿಗೆ ಸೇರಿದ ಕುರಿಗಳು ಮಳೆ ಬರುವ ಸಂದರ್ಭದಲ್ಲಿ ಮರದ ಕೆಳಗಡೆ ನಿಂತ ಸಂದರ್ಭದಲ್ಲಿ ಸಿಡಿಲಿನ ಹೊಡೆತಕ್ಕೆ ಬಲಿಯಾಗಿವೆ.ಗ್ರಾಮದಲ್ಲಿ ಒಂದು ಗಂಟೆಗಳ ಕಾಲ ಸುರಿದ ಮಳೆ ಗ್ರಾಮಸ್ಥರಿಗೆ ಒಂದೇಡೆ ಸಂತಸ ತಂದರೆ, ಇನ್ನೊಂದೆಡೆ ಗುಡುಗಿಗೆ ಸುಮಾರು ಅಂದಾಜು ೨ ಲಕ್ಷ ಮೌಲ್ಯದ ಕುರಿಗಳು ಜೀವ ಕಳೆದುಕೊಂಡಿದ್ದು ನಿರಾಶೆಯನ್ನುಂಟುಮಾಡಿದೆ.

Read More

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಎಂದಿಗೂ ಲಂಬಾಣಿ ಸಮಾಜವನ್ನು ಅವಹೇಳನ ಮಾಡಿಲ್ಲ, ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಾ ನೋಡ್ತಾ ಬಂದವರು. ಲಂಬಾಣಿ ಸಮಾಜದ ವಿರುದ್ಧ ಹೇಳಿಕೆ ನೀಡಿಲ್ಲ, ಕೆಲ ಕಾಂಗ್ರೆಸ್ ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದು ಅದರ ಬಗ್ಗೆ ಲಂಬಾಣಿ ಸಮಾಜದ ಮುಖಂಡರು ತಪ್ಪು ಭಾವಿಸಬೇಡಿ ಎಂದು ಬಿಜೆಪಿ ಮುಖಂಡ ಮಹೇಂದ್ರ ನಾಯಕ ಹೇಳಿದರು.ಲೋಕಸಭಾ ಚುನಾವಣೆ ನಿಮಿತ್ಯ ರೇವತಗಾವ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ಏನ್ ಡಿ ಎ ಅಭ್ಯರ್ಥಿಯ ರಮೇಶ ಜಿಗಜಿಣಗಿ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಸಂಜೀವ ಐಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಗೆ ರಮೇಶ ಜಿಗಜೀವಣಗಿ ಸಾಹೇಬರು ೧ ಲಕ್ಷ ಕೋಟಿ ರೂ. ಅನುದಾನ ತಂದು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ, ಮತ್ತೊಮ್ಮೆ ರಮೇಶ ಜಿಗಜಿಣಗಿರನ್ನು ಲೋಕಸಭೆ ಗೆ ಕಳುಹಿಸಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯನ್ನಾಗಿಸಲು ಮನವಿ ಮಾಡಿದರು.ಚಿದಾನಂದ ಛಲವಾದಿ ಮಾತನಾಡಿ, ಅಂಬೇಡ್ಕರ್ ತೀರಿಕೊಂಡಾಗ ಅವರ ಅಂತಿಮ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಇಂತಹ ನೀಚ ಸರಕಾರಕ್ಕೆ ಮತ ಹಾಕಿದ್ದಲ್ಲಿ…

Read More

ಚಿಮ್ಮಡ: ಬಾವಿ ಗೌರಮ್ಮಎಂದೇ ರಾಜ್ಯದಾದ್ಯಂತ ಖ್ಯಾತಳಾದ ಸಿರಸಿಯ ಶ್ರೀಮತಿ ಗೌರಿ ಸಿ. ನಾಯ್ಕ ಅವರಿಗೆ ಚಿಮ್ಮಡ ಗ್ರಾಮದ ವಿರಕ್ತಮಠದಿಂದ ‘ಅಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಏಕಾಂಗಿಯಾಗಿ ೫ ಬಾವಿಗಳನ್ನು ತೋಡಿ ಮನೆಗಳಿಗೆ, ಅಂಗನವಾಡಿ ಮಕ್ಕಳಿಗೆ ನೀರಿನ ಆಸರೆಯಾಗಿ ನಿಂತ ೫೭ ವರ್ಷ ವಯಸ್ಸಿನ ಗೌರಮ್ಮಳ ಏಕಾಂಗಿ ಸಾಹಸಕ್ಕೆ ಚಿಮ್ಮಡ ಗ್ರಾಮದಲ್ಲಿ ಮಂಗಳವಾರ ನಡೆದ ಶ್ರೀ ವಿರಕ್ತಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಅಕ್ಕ ಮಹಾದೇವಿ ಜಯಂತಿ ಮಹೋತ್ಸವದ ಬ್ರಹತ್ ಕಾರ್ಯಕ್ರಮದಲ್ಲಿ ಪಂಚಶ್ರೀಗಳ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

Read More