ವಿಜಯಪುರ: ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ಎರಡು ಫಾರ್ಮಸಿ ಕಾಲೇಜುಗಳ ಐದು ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಡಿ. ಫಾರ್ಮ್ ಅಂತಿಮ ವರ್ಷದ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಐದು ರ್ಯಾಂಕ್ ಗಳನ್ನು ಪಡೆಯುವ ಮೂಲಕ ಗಮನ ಸಂಸ್ಥೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬಸವನ ಬಾಗೇವಾಡಿ ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜಿನ ಅಕ್ಷತಾ ವಿರುಪಾಕ್ಷಿ ಮನಗೂಳಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರೆ, ಇದೇ ಕಾಲೇಜಿನ ಪವಿತ್ರ ಜಗದೀಶ ನಿಡಗುಂದಿ 7ನೇ ಹಾಗೂ ಲಕ್ಷ್ಮಿ ಯಶವಂತ ಬಿರಾದಾರ 8ನೇ ರ್ಯಾಂಕ್ ಪಡೆದಿದ್ದಾರೆ.
ವಿಜಯಪುರ ನಗರದಲ್ಲಿರುವ ಎಸ್.ಎಸ್.ಎಂ ಕಾಲೇಜ್ ಆಫ್ ಫಾರ್ಮಸಿ ಆ್ಯಂಡ್ ರಿಸರ್ಚ್ ಸೆಂಟರ್ ನ ಮೇಘಶ್ರೀ ಹಟ್ಟಿ ರಾಜ್ಯಕ್ಕೆ 4ನೇ ರ್ಯಾಂಕ್ ಗಳಿಸಿದ್ದರೆ, ವಿನೀತಾ ಉಳ್ಳಾಗಡ್ಡಿ 5ನೇ ರ್ಯಾಕ್ ಪಡೆದಿದ್ದಾರೆ.
ಫಾರ್ಮಸಿ ಬೋರ್ಡ್ ಘೋಷಿಸುವ 10 ರ್ಯಾಂಕ್ ಗಳಲ್ಲಿ ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು 5 ರ್ಯಾಂಕುಗಳನ್ನು ಗಳಿಸುವ ಮೂಲಕ ಸಂಸ್ಥೆ ಮತ್ತು ಜಿಲ್ಲೆಗೆ ಹೆಮ್ಮೆ ತಂದಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಜಿ. ಕೆ. ಪಾಟೀಲ, ಮುಖ್ಯ ಸಲಹೆಗಾರ ಹಾಗೂ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಬಸವನ ಬಾಗೇವಾಡಿ ಕಾಲೇಜಿನ ಪ್ರಾಚಾರ್ಯ ಪ್ರೊ. ಸಿ. ಸಿ. ಸಿಂಪಿ ಹಾಗೂ ವಿಜಯಪುರ ಕಾಲೇಜಿನ ಪ್ರಾಚಾರ್ಯ ಪ್ರೊ. ಸಿ. ಮಲ್ಲಿಕಾರ್ಜುನ ಶೆಟ್ಟಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೇ, ಕಾಲೇಜಿನ ಸಿಬ್ಬಂದಿಗೂ ಅಭಿನಂದನೆ ಸಲ್ಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
ರಾಜ್ಯ ಮಟ್ಟದ ರ್‍ಯಾಂಕ್ ಪಡೆದ ಬಿಎಲ್ಡಿಇ ಸಂಸ್ಥೆ ಫಾರ್ಮಸಿ ಕಾಲೇಜ್ ವಿದ್ಯಾರ್ಥಿಗಳು
Related Posts
Add A Comment

