ವಿಜಯಪುರದ ಫ್ರೆಂಡ್ಸ್ ಟೆನಿಕಾಯಿಟ್ ಅಸೋಸಿಯೇಷನ್ ಕ್ಲಬ್ ಆಯೋಜನೆ
ವಿಜಯಪುರ: ಜಿಲ್ಲಾ ಯುವಜನ ಕ್ರೀಡಾ ಇಲಾಖೆ ಸಹಯೋಗದೊಂದಿಗೆ ರಾಜ್ಯಮಟ್ಟದ ಡಬಲ್ಸ್ ಟೆನಿಕ್ವೈಟ್ ಪಂದ್ಯಾವಳಿಯು ನಗರದ ಡಾ. ಬಿ ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜು.7 ರಂದು ರವಿವಾರ ನಡೆಯಿತು.
ನಗರದ ಫ್ರೆಂಡ್ಸ್ ಟೆನಿಕಾಯಿಟ್ ಅಸೋಸಿಯೇಷನ್ ಕ್ಲಬ್ ಸಂಘಟಿಸಿದ ಈ ಪಂದ್ಯಾವಳಿಯಲ್ಲಿ ಗುಳೇದ್ಗುಡ್ಡ, ಕೋಲಾರ್, ಮುದ್ದೇಬಿಹಾಳ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪ್ರಖ್ಯಾತ ಕ್ರೀಡಾಪಟುಗಳ ಒಟ್ಟು 36 ತಂಡಗಳು ಭಾಗವಹಿಸಿದ್ದವು.
ಪಂದ್ಯಾವಳಿಯಲ್ಲಿ ಅಂತಿಮವಾಗಿ ರಾಮ್ ಮತ್ತು ಅಬ್ದುಲ್ ರಜಾಕ್ ಪೆಂಡಾರಿ ಗುಳೇದಗುಡ್ ಪ್ರಥಮ ಸ್ಥಾನ, ಚಂದ್ರಶೇಖರ್ ಖಂಡೆಕರ್ ಮತ್ತು ಪರಶುರಾಮ ಜಿಲ್ಲಾ ಕ್ರೀಡಾಂಗಣ ವಿಜಯಪುರ ದ್ವಿತೀಯ ಸ್ಥಾನ, ನಮ್ಮ ವಿಜಯಪುರದ ಹೆಮ್ಮೆಯ ಐಶ್ವರ್ಯ ನಗರದ ವರದಾಂಜನೇಯ ದೇವಸ್ಥಾನದ ಉದ್ಯಾನವನದ ತಂಡದ ಪ್ರಕಾಶ್ ಕೋರಳ್ಳಿ ಹಾಗೂ ಡಾ. ದರ್ಶನ್ ಧರಿ ರೋಮಾಂಚನವಾಗಿ ಆಟವಾಡಿ ವಿರೋಚಿತ ಪ್ರದರ್ಶನದೊಂದಿಗೆ ತೃತೀಯ ಸ್ಥಾನ ಗಿಟ್ಟಿಸಿಕೊಂಡು ಪಾರಿತೋಷಕ ಹಾಗೂ ನಗದು ಬಹುಮಾನ ಸ್ವೀಕರಿಸಿದರು.
ಅಧಿಕ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಪಾಲ್ಗೊಂಡು ಪಂದ್ಯಾವಳಿಯನ್ನು ಕಣ್ತುಂಬಿಕೊಂಡರು.

