ಕೆಂಭಾವಿ: “ಬದ್ಮಾಷ ಭಾಡ್ಯಾಗೊಳ್” ಎಂಬ ಕನ್ನಡ ಯುಟ್ಯೂಬ್ ಚಾನೆಲ್ 1ಸಾವಿರ ಚಂದಾದಾರರು ಹೊಂದಿದ ಹಾಗೂ ಚಾನೆಲ್ ಮಾನಿಟೈಜ ಆದ ಪ್ರಯುಕ್ತ ಪಟ್ಟಣದ ಬಾಲಕಿಯರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾನೆಲ್ ಕಲಾವಿದರಿಂದ ಗಿಡ ನೆಡೆವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತದನಂತರ ಸಸಿಗೆ ನೀರುಣಿಸುವ ಮೂಲಕ ಮಾತನಾಡಿದ ಚಲನಚಿತ್ರದ ನಿರ್ದೇಶಕ ಲೆಮನ್ ಪರಶುರಾಮ ಇಂದಿನ ಯುವಕರು ಹುಟ್ಟುಹಬ್ಬ, ಮದುವೆ ಸಮಾರಂಭ, ತಾವು ಮಾಡುವಂತಹ ಕೆಲಸಗಳಲ್ಲಿ ಯಶಸ್ಸು ಕಂಡಾಗ ಪಾರ್ಟಿ ಪಬ್ಬು, ಅಂತ ತಮ್ಮ ಸಮಾರಂಭಗಳು ಮಾಡಿ ಖುಷಿ ಪಡುವುದಕ್ಕಿಂತ, ಸಸಿ ನೆಡಿಸುವ ಮೂಲಕ ಆಚರಣೆ, ಸಮಾರಂಭಗಳನ್ನು ಮಾಡಿದಾಗ ಒಂದು ಉತ್ತಮ ಸಮಾಜ ಹಾಗೂ ಪರಿಸರ ನಿರ್ಮಾಣ ಮಾಡಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಚಲನಚಿತ್ರದ ನಾಯಕ ನಟ ರಾಘವೇಂದ್ರ ಮಾಚಗುಂಡಾಳ ಮಾತನಾಡಿ, ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ಕಲಾವಿದರು ಇದ್ದಾರೆ, ತಮ್ಮಲ್ಲಿ ಇರುವ ಕಲೆಯನ್ನು ಹೊರ ಹಾಕಲು ಯೌಟ್ಯೂಬ್ ಒಂದು ಒಳ್ಳೆಯ ವೇದಿಕೆಯಾಗಿದೆ, ನಾವು ಸರಿಯಾಗಿ ಯೌಟ್ಯೂಬ್ ವನ್ನು ಸದ್ಭಳಕೆ ಮಾಡಿ ನಮ್ಮಲ್ಲಿರುವ ಕಲೆಯನ್ನು ಹೊರ ಹಾಕಬಹುದು, ಎಂದು ಅಭಿಪ್ರಾಯಪಟ್ಟರು.
ಈ ಸಂಧರ್ಭದಲ್ಲಿ ಪ್ರಧಾನ ಗುರುಗಳಾದ ಸಿದ್ದನಗೌಡ, ಶಾಲಾ ಶಿಕ್ಷಕರಾದ ರಾಜ ಅಹ್ಮದ, ಸುಶೀಲಾಬಾಯಿ ಬಿರಾದಾರ್, ಭಾರತಿಬಾಯಿ ಪಾಸೋಡಿ, ತಾರಾಮತಿ ಕಾಸರ, ರಾಜೇಶ್ವರಿ ಹಿರೇಮಠ್, ಶಾರದಾ ಸಜ್ಜನ್, ಸಿದ್ದಾರ್ಥ್ ಜೋಸಿ, ಫಿರೋಜ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

