ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ಎಸ್.ಎಸ್.ಎಂ ಕಾಲೇಜ ಆಫ್ ಫಾರ್ಮಸಿ ಆ್ಯಂಡ್ ರಿಸರ್ಚ್ ಕಾಲೇಜು ರಾಷ್ಟ್ರೀಯ ಅತ್ಯುತ್ತಮ ಫಾರ್ಮಸಿ ಕಾಲೇಜುಗಳಲ್ಲಿ 2ನೇ ಸ್ಥಾನ ಪಡೆದಿದೆ.
ದೇಶದ ಹೆಸರಾಂತ ನಿಯತಕಾಲಿಕ ಔಟಲುಕ್ ಐಸಿಎಆರ್‌ಇ- 2026 ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಈ ರ‌್ಯಾಂಕ್ ಲಭಿಸಿದೆ. ಕಳೆದ ವರ್ಷ ಕಾಲೇಜಿಗೆ 3ನೇ ರ‌್ಯಾಂಕ್ ಲಭಿಸಿತ್ತು. ಈಗ ಒಂದು ಸ್ಥಾನ ಹೆಚ್ಚಿಗೆ ಬಂದಿದ್ದು 2ನೇ ರ‌್ಯಾಂಕ್ ಸಿಕ್ಕಿದೆ.
ಈಗಾಗಲೇ ನ್ಯಾಕ್ ನಿಂದ A++ ಮಾನ್ಯತೆ ಪಡೆದ ಮೊದಲ ಕಾಲೇಜು ಎಂಬ ಹೆಗ್ಗಳಿಗೆ ಹೊಂದಿರುವ ಈ ಕಾಲೇಜಿನ ಕಿರೀಟಕ್ಕೆ ಈಗ ಮತ್ತೋಂದು ಗರಿ ಸಿಕ್ಕಂತಾಗಿದೆ.
ಕಾಲೇಜಿನಲ್ಲಿ ಬೋಧನೆ, ಕಲಿಕಾ ವಾತಾವರಣ, ವಿದ್ಯಾರ್ಥಿಗಳಿಗೆ ಪಠ್ಯ, ಪ್ರಾಯೋಗಿ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಪರಿಗಣಿಸಿ ಈ ರ‌್ಯಾಂಕ್ ನೀಡಲಾಗಿದೆ
ಕಾಲೇಜಿನ ಸಾಧನೆಗೆ ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಡೀಮ್ಡ್ ವಿವಿ ರಜಿಸ್ಡ್ರಾರ್ ಮತ್ತು ಸಂಸ್ಥೆಯ ಮುಖ್ಯ ಸಲಹೆಗಾರ ಡಾ. ಆರ್. ವಿ. ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದು, ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

