Author: editor.udayarashmi@gmail.com

ರಾಜ್ಯ ಚಲವಾದಿ ಸರಕಾರಿ ನೌಕರರ ಸಂಘದ ಉದ್ಘಾಟನೆ ನೆರವೇರಿಸಿದ ಎಸ್ಪಿ ರವೀಂದ್ರ ಗಡಾದೆ ಅಭಿಮತ ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ್ ರವರು ಬದುಕಿದ್ದಾಗಲೂ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಡೆಗೆ ಇದ್ದರು. ಅವರ ಸಾವಿನ ನಂತರವೂ ಬಡವರನ್ನು ನಿಕೃಷ್ಟರನ್ನು ಕಟ್ಟ ಕಡೆಯ ವ್ಯಕ್ತಿಯನ್ನು ಕಾಪಾಡುತ್ತಿರುವುದು ಬಾಬಾ ಸಾಹೇಬರು ಬರೆದ ಸಂವಿಧಾನವೇ ವಿನಃ ಯಾವ ವ್ಯಕ್ತಿಯೂ ಅಲ್ಲ, ಸರಕಾರವೂ ಅಲ್ಲ ಎಂದು ಬೆಳಗಾವಿಯ ಎಸ್ಪಿ ರವೀಂದ್ರ ಕೆ. ಗಡಾದೆ ಹೇಳಿದರು.ಅವರು ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಚಲವಾದಿ ಸರಕಾರಿ ನೌಕರರ ಸಂಘದ ಉದ್ಘಾಟನೆ ನೆರವೇರಿಸಿ ಕರ್ನಾಟಕ ರಾಜ್ಯ ಚಲವಾದಿ ಸರಕಾರಿ ನೌಕರರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.ನಮ್ಮೆಲ್ಲರ ಬದುಕಿಗೆ ಆಧಾರ ಸ್ತಂಭ ಆಗಿರುವ ಸಂವಿಧಾನವನ್ನು ಇಂದು ನಾವೆಲ್ಲರೂ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗೋಣ ಎಂದು ಹೇಳಿದರು.ಬೆಳಗಾವಿ ಹೆಸ್ಕಾಂ ಲೆಕ್ಕ ನಿಯಂತ್ರಣಾಧಿಕಾರಿ ಸುರೇಶ ಎ.ಸಿಂಧೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಇಂದಿನ ಯುಗದಲ್ಲಿ…

Read More

ವಿಜಯಪುರ ಮಹಾನಗರ ಪಾಲಿಕೆ ನೂತನ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅಭಿಮತ ವಿಜಯಪುರ: ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಜ್ಞಾನ ಪಸರಿಸುವಲ್ಲಿ ಇಂತಹ ದತ್ತಿ ಗೋಷ್ಠಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೇಡರೇಶನ ಅಧ್ಯಕ್ಷ ಡಾ ಜಾವೀದ ಜಮಾದಾರ ಅಭಿಪ್ರಾಯ ವ್ಯಕ್ತಪಡಿಸಿದರು.ವಿಜಯಪುರ ಜಿಲ್ಲಾ, ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಲಿಂ.ಮಾತೋಶ್ರೀ ಗುರವ್ವ ಹೊರಟ್ಟಿ ದತ್ತಿ ಕಾರ್ಯಕ್ರಮದಲ್ಲಿಅವಿಭಕ್ತ ಕುಟುಂಬ ಕುರಿತ ಚಿಂತನ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡುತ್ತಾ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ದತ್ತಿ ಗೋಷ್ಠಿಗಳಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.ವಿಶೇಷ ಸನ್ಮಾನಿತರಾದ ಮುಖ್ಯಮಂತ್ರಿಗಳಿಂದ ಶ್ರೇಷ್ಠ ಶಸ್ತ್ರ ಚಿಕಿತ್ಸಕ ಪ್ರಶಸ್ತಿ ಪುರಸ್ಕೃತ ಡಾ ಶಿವಾನಂದ ಮಾಸ್ತಿಹೊಳಿ ಮಾತನಾಡಿ, ನನ್ನದು ಅವಿಭಕ್ತ ಕುಟುಂಬ. ಚಿಕ್ಕ ಮನೆಯಲ್ಲಿ ಎಂಟು ಜನ ಸಹೋದರ, ಸಹೋದರಿಯರು ಕೂಡಿ ಆನಂದದಿಂದ ಕಳೆದ ನನ್ನ ಬಾಲ್ಯ ಜೀವನ…

Read More

ಕೊಲ್ಹಾರ: ರೈತರ ಜೀವನಾಡಿ ಕೃಷ್ಣಾ ನದಿ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರದ ಪಂಚಗಂಗಾ ಕ್ಷೇತ್ರದಲ್ಲಿ ಕಡ್ಲಿಗರ ಹುಣ್ಣಿಮೆಯ ದಿನವಾದ ಜು.೨೧ ರಂದು ಬೆಳಿಗ್ಗೆ ೧೦ ಗಂಟೆಗೆ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ರೈತರೊಂದಿಗೆ ಸೇರಿ ಉಡಿ ತುಂಬುವ ವಿಶೇಷ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರು ತಿಳಿಸಿದ್ದಾರೆ.ಪಟ್ಟಣದಲ್ಲಿ ಮಂಗಳವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುತ್ತಾ ಮಾತನಾಡಿದ ಅವರು, ಮುಂಗಾರು ಮಳೆಗಳು ಉತ್ತಮವಾಗಿ ಸುರಿದು ಕಡ್ಲಿಗರ ಹುಣ್ಣಿಮೆಗೆ ಕೃಷ್ಣಾ ನದಿ ತುಂಬಿ ಹರಿಯುತ್ತದೆ. ಹೀಗಾಗಿ ಅದು ಈ ಭಾಗದ ರೈತರಿಗೆ ಜೀವನಾಡಿಯಾಗಿದೆ.ಅದರ ಪ್ರಯುಕ್ತ ಕಡ್ಲಿಗರ ಹುಣ್ಣಿಮೆಯ ದಿನ ದಂಪತಿಗಳ ಸಮೇತವಾಗಿ ಮಹಾಬಳೇಶ್ವರಕ್ಕೆ ತೆರಳಿ ಕೃಷ್ಣಾ ನದಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಕಳೆದ ೧೫ ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ. ಈ ಬಾರಿಯೂ ಕೂಡಾ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ರೈತರೊಂದಿಗೆ ತೆರಳಿ ಕೃಷ್ಣಾ ನದಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಉಡಿ ತುಂಬುವ ಕಾರ್ಯಕ್ರಮಕ್ಕೆ ಆಗಮಿಸುವವರು ಜು.೨೦ರಂದು ಬೆಳಿಗ್ಗೆ ೧೧…

Read More

ವಿಜಯಪುರ: ಸಾವರ್ಕರ್ ವಿಚಾರ ಸಾವಿಲ್ಲದ ವಿಚಾರ – ಮೃತ್ಯುಂಜಯ ವಿಚಾರ, ಸತ್ಯಮೇವ ಜಯತೇ ಎಂಬ ವಾಕ್ಯದಂತೆ ; ಸಾವರ್ಕರ್ ಸತ್ಯವನ್ನು ಹೇಳಿದರಿಂದ ಅವರ ವಿಚಾರ ಇಂದಿಗೂ ಉಳಿದಿವೆ ಡಾ. ಜಿ ಬಿ ಹರೀಶ ಹೇಳಿದರು.ನಗರದ ಪಿಡಿಜೆ ಸಭಾಭವನದಲ್ಲಿ ನಡೆದ ಮಂಥನ ವಿಜಯಪುರ ಮತ್ತು “ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ” ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ “ಸ್ವಾತಂತ್ರ್ಯ ವೀರ ಸಾವರ್ಕರ್ ಕುರಿತ ಆರೋಪಗಳು ಸತ್ಯವೋ, ಮಿಥ್ಯವೋ ?” ವಿಷಯಾಧರಿಸಿ ಮಾತಾಡಿದ ಅವರು, ಕಮ್ಯುನಿಸ್ಟ್ ರು “ಹಿಂದು” ಶಬ್ದ ಸಂಸ್ಕೃತ ಶಬ್ದವಲ್ಲ , ವೇದ ಉಪನಿಷತ್ ಗಳಲ್ಲಿಯೂ ಹಿಂದು ಶಬ್ದದ ಉಲ್ಲೇಖವಿಲ್ಲ ಎಂದು ಆರೋಪಿಸುವುದುಂಟು. ಆದರೆ, ಪ್ರಾಕೃತ ಭಾಷೆಯಲ್ಲಿ “ಹಿಂದು” ಶಬ್ದದ ಉಲ್ಲೇಖವಿದೆ. ಪೃಥ್ವಿರಾಜ್‌ ಚೌವ್ಹಾಣನ ʼರಾಸೋ” ಕೃತಿಯಲ್ಲಿ ಹಿಂದು “ಶಬ್ದ” ಉಲ್ಲೇಖವಿದೆ. ಹಾಗೆ, ವಿಜಯನಗರದ ಎರಡನೇ ಹರಿಹರ ಶಾಸನದಲ್ಲಿ ‘ಹಿಂದು ರಾಜ ಸುಲ್ತಾನ್’ ಎಂದು ಬರೆಸಲಾಗಿದೆ, ಇದನ್ನು ತೋರಿಸಿಕೊಟ್ಟವರು ಸ್ವಾತಂತ್ರ್ಯ ವೀರ ಸಾವರ್ಕರ್ ಮಾತ್ರ. ಆದರೆ, ಹಿಂದು ಮಹಾಸಭಾದ ಜನಪ್ರಿಯ ನೇತಾರರಾಗಿದ್ದ ಸಾವರ್ಕರ್ ಕಂಡು,…

Read More

ಚಿಮ್ಮಡ: ರಬಕವಿ- ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಮಾಲಾ ಅಶೋಕ ಮೋಟಗಿ ಹಾಗೂ ಅವರ ಪತಿ ಮಾಜಿ ಉಪಾಧ್ಯಕ್ಷ ಅಶೋಕ ಮೋಟಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.ಕಾಂಗ್ರೆಸ್ ಮುಖಂಡ ಸಿದ್ದು ಕೋಣ್ಣೂರರವರ ಗ್ರಹ ಕಛೇರಿಯಲ್ಲಿ ರವಿವಾರ ಸಂಜೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಚಿಮ್ಮಡ ಗ್ರಾಮ ಪಂಚಾಯತಿ ಕಾಂಗ್ರೆಸ್ ತೆಕ್ಕೆಗೆ ಬಂದಂತಾಗಿದೆ.ತೇರದಾಳ ಮತಕ್ಷೇತ್ರದ ಕಾಂಗ್ರೆಸ ಗ್ರಾಮೀಣ ಘಟಕದ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಮಹಾಲಿಂಗಪೂರ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಚಿಮ್ಮಡ ಗ್ರಾಮ ಘಟಕದ ಕಾಂಗ್ರೆಸ್ ಅಧ್ಯಕ್ಷ ಉಮೇಶ ಪೂಜಾರಿ, ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯಣ್ಣವರ, ಬಾಳಪ್ಪಾ ಗಡೆಪ್ಪನವರ, ಪ್ರವೀಣ ಪೂಜಾರಿ, ಮಹಾಲಿಂಗ ಬಳಗಾರ, ಶ್ರೀಶೈಲ ಮಠಪತಿ, ಶಿವಪ್ಪಾ ನಾಗನೂರ, ರಾಜು ಬಗನಾಳ, ಅಶೋಕ ಚಿಮ್ಮಡ, ಪಿರಸಾಬ ನದಾಫ, ರವಿ ದೊಡವಾಡ, ಸಲೀಮ ಸರಕಾವಸ ಸೇರಿದಂತೆ ಹಲವಾರು ಜನ ಪ್ರಮುಖರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.ಇಪ್ಪತ್ತೆಂಟು ಸದಸ್ಯಬಲದ ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕಳೆದ…

Read More

ದೇವರಹಿಪ್ಪರಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ದೇವೂರ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.ತಾಲ್ಲೂಕಿನ ದೇವೂರ ಗ್ರಾಮದಲ್ಲಿ ದಿ:೪ ರಿಂದ ಆರಂಭಗೊಂಡು ೧೦ ರವರೆಗೆ ಜರುಗುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ಪ್ರಮುಖ ಕಾರ್ಯಕ್ರಮವಾದ ಹತ್ತು ದಿನಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಗ್ರಾಮದ ವಿವಿಧೆಡೆ ಸ್ವಚ್ಛತಾ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ಅಕ್ರಮ್ ಪಾಷಾ ಮಾತನಾಡಿ, ಎನ್‌ಎಸ್‌ಎಸ್‌ನ ವಾರ್ಷಿಕ ವಿಶೇಷ ಶಿಬಿರವನ್ನು ನಿಗದಿತ ರಜಾ ದಿನಗಳಲ್ಲಿ ಯಾವುದಾದರೂ ಒಂದು ಗ್ರಾಮದಲ್ಲಿ ಸಕಲ ತಯಾರಿಯೊಂದಿಗೆ ಆಯೋಜಿಸಲಾಗುತ್ತಿದೆ. ಅಂತೆಯೇ ಶಿಬಿರದ ೫ನೇ ದಿನವಾದ ಸೋಮವಾರ ಗ್ರಾಮದ ವಿವಿಧ ಬೀದಿಗಳು, ದೇವಸ್ಥಾನ ಹಾಗೂ ರುದ್ರಮುನಿ ಹಾಗೂ ಶಿವಬಸವ ತಪೋಮಂದಿರದ ಆವರಣದಲ್ಲಿ ಕಸಗೂಡಿಸಿ ಸ್ವಚ್ಛತಾ ಕಾರ್ಯ ನೆರವೇರಿಸಲಾಯಿತು ಎಂದರು.ಉಪನ್ಯಾಸಕ ಬಸವರಾಜ ಹೊನಮಟ್ಟಿ ವಿದ್ಯಾರ್ಥಿ ಪ್ರತಿನಿಧಿಗಳಾದ ದೀಪಾ ನಾಯ್ಕೋಡಿ, ದಾನಮ್ಮಾ, ಅಶೋಕ ಚವ್ಹಾಣ, ಮಾಳಪ್ಪ ದೊಡ್ಡಿನಿ, ಖಾಜಾಅಮೀನ್ ಮುಲ್ಲಾ, ನೂರ್‌ಜಹಾನ್ ಮುಜಾವರ್, ಪೂಜಾ ಚವ್ಹಾಣ, ಐಶ್ವರ್ಯ…

Read More

ದೇವರಹಿಪ್ಪರಗಿ: ತಾಲ್ಲೂಕು ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆದು ಬಡ ಕುಟುಂಬಗಳ ಸುಗಮ ಸಂಸಾರ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರು ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಅಬಕಾರಿ ಇಲಾಖೆಯ ಉಪನಿರೀಕ್ಷಕ ಬಿ.ವಿ.ರಜಪೂತ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಆಗಮಿಸಿದ ದೇವೂರ ಗ್ರಾಮದ ಮಹಿಳೆಯರು ಗ್ರಾಮ ಹಾಗೂ ತಾಂಡಾಗಳಲ್ಲಿ ಮಾಡಲಾಗುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ರೇಣುಕಾ ಪಾಟೀಲ ಮಾತನಾಡಿ, ದೇವೂರ ಗ್ರಾಮ ಮತ್ತು ತಾಂಡಾಗಳಲ್ಲಿ ಅಕ್ರಮವಾಗಿ ಸಾರಾಯಿ ತಯಾರಿಸಿ ಅಪಾಶಿ ಶಂಕರಗೌಡ ಬಗಲಿ, ಕಲಾವತಿ ಅಪಾಶಿ ಬಗಲಿ ಮನೆ, ಶಾಲೆಯ ಹತ್ತಿರದ ಮಾದೇವಪ್ಪ ಪೂಜಾರಿ, ಅನಸೂಬಾಯಿ ಮಾದೇವಪ್ಪ ಪೂಜಾರಿ ಮಾಲೀಕತ್ವದ ಕಿರಾಣಿ ಅಂಗಡಿ, ಬಸ್‌ನಿಲ್ದಾಣದ ಹತ್ತಿರದ ಸಿದ್ದು ಬೋರಗಿ ಪಾನ್ ಶಾಪ್, ರೇಣುಕಾ ಸಿದ್ದು ಬೋರಗಿ, ಸಂತೋಷ ರಾಠೋಡರ ಎಲ್.ಟಿ ೧ರಲ್ಲಿನ, ಎಲ್ಲಮ್ಮ…

Read More

ಬಸವನಬಾಗೇವಾಡಿ: ೨೦೨೪-೨೫ ನೇ ಸಾಲಿನ ಮುಂಗಾರು ಹಂಗಾಮಿನ ದ್ರಾಕ್ಷಿ ಬೆಳೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಬೆಳೆಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದೇ ಇರುವ ರೈತರು ತಮ್ಮ ಆಧಾರ ಕಾರ್ಡ್ ಝರಾಕ್ಸ್, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್ಬುಕ್ ಪ್ರತಿಯೊಂದಿಗೆ ತಮ್ಮ ಹತ್ತಿರದ ಬ್ಯಾಂಕಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್ಸಿ ಸೆಂಟರ್ಗಳಲ್ಲಿ ವಿಮಾ ಯೋಜನೆಯಡಿ ಜುಲೈ ೧೫ ರೊಳಗೆ ದ್ರಾಕ್ಷಿ ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಬೇಕು. ವಿಮಾ ಕಂತಿನ ಮೊತ್ತ ಪ್ರತಿ ಹೇಕ್ಟರ್ಗೆ ರೂ. ೧೪,೦೦೦ ಆಗಿದೆ. ಎಲ್ಲ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಅಗ್ರಿಕಲ್ಚರ್ ಇನ್ಸುರನ್ಸ ಕಂಪನಿಯ ಪ್ರತಿನಿಧಿ ಪವಿತ್ರಾ ಮೊ- ೮೮೯೯೮೮೭೮೭೩, ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ- ೯೯೪೫೮೯೬೧೯೮, ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ- ೮೯೭೧೩೭೯೧೦೮, ಕೊಲ್ಹಾರ ರೈತ ಸಂಪರ್ಕ ಕೇಂದ್ರದ ಸಹಾಯಕ…

Read More

ಬಸವನಬಾಗೇವಾಡಿ: ೨೦೨೪-೨೫ ನೇ ಸಾಲಿನ ಮುಂಗಾರು ಹಂಗಾಮಿನ ದ್ರಾಕ್ಷಿ ಬೆಳೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಬೆಳೆಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದೇ ಇರುವ ರೈತರು ತಮ್ಮ ಆಧಾರ ಕಾರ್ಡ್ ಝರಾಕ್ಸ್, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್ಬುಕ್ ಪ್ರತಿಯೊಂದಿಗೆ ತಮ್ಮ ಹತ್ತಿರದ ಬ್ಯಾಂಕಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್ಸಿ ಸೆಂಟರ್ಗಳಲ್ಲಿ ವಿಮಾ ಯೋಜನೆಯಡಿ ಜುಲೈ ೧೫ ರೊಳಗೆ ದ್ರಾಕ್ಷಿ ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಬೇಕು. ವಿಮಾ ಕಂತಿನ ಮೊತ್ತ ಪ್ರತಿ ಹೇಕ್ಟರ್ಗೆ ರೂ. ೧೪,೦೦೦ ಆಗಿದೆ. ಎಲ್ಲ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಅಗ್ರಿಕಲ್ಚರ್ ಇನ್ಸುರನ್ಸ ಕಂಪನಿಯ ಪ್ರತಿನಿಧಿ ಪವಿತ್ರಾ ಮೊ- ೮೮೯೯೮೮೭೮೭೩, ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ- ೯೯೪೫೮೯೬೧೯೮, ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ- ೮೯೭೧೩೭೯೧೦೮, ಕೊಲ್ಹಾರ ರೈತ ಸಂಪರ್ಕ ಕೇಂದ್ರದ ಸಹಾಯಕ…

Read More

ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಟ್ಯಾಂಕರ್ ಹತ್ತಿರ ಇವಣಗಿ ಗ್ರಾಮದಿಂದ ಹಂಚಿನಾಳ ಗ್ರಾಮದ ಕಡೆಗೆ ಬರುತ್ತಿದ್ದ ಬೈಕಿಗೆ ನರಸಲಗಿ ಗ್ರಾಮದಿಂದ ಬಸವನಬಾಗೇವಾಡಿ ಕಡೆಗೆ ಬರುತ್ತಿದ್ದ ಇನ್ನೊಂದು ಬೈಕಿನ ಸವಾರ ಜೋರಾಗಿ, ನಿರ್ಲಕ್ಷತನದಿಂದ ಬಂದ ಪರಿಣಾಮ ಹಂಚಿನಾಳ ಗ್ರಾಮದ ಹಣಮಂತ ಇಲಕಪ್ಪ ಬಂಡಿವಡ್ಡರ (೫೫) ಮೃತ ಪಟ್ಟ ಘಟನೆ ಮಂಗಳವಾರ ಜರುಗಿದೆ.ಈ ಕುರಿತು ಬಸವನಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Read More