ಬಸವನಬಾಗೇವಾಡಿ: ೨೦೨೪-೨೫ ನೇ ಸಾಲಿನ ಮುಂಗಾರು ಹಂಗಾಮಿನ ದ್ರಾಕ್ಷಿ ಬೆಳೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಬೆಳೆಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದೇ ಇರುವ ರೈತರು ತಮ್ಮ ಆಧಾರ ಕಾರ್ಡ್ ಝರಾಕ್ಸ್, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್ಬುಕ್ ಪ್ರತಿಯೊಂದಿಗೆ ತಮ್ಮ ಹತ್ತಿರದ ಬ್ಯಾಂಕಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್ಸಿ ಸೆಂಟರ್ಗಳಲ್ಲಿ ವಿಮಾ ಯೋಜನೆಯಡಿ ಜುಲೈ ೧೫ ರೊಳಗೆ ದ್ರಾಕ್ಷಿ ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಬೇಕು. ವಿಮಾ ಕಂತಿನ ಮೊತ್ತ ಪ್ರತಿ ಹೇಕ್ಟರ್ಗೆ ರೂ. ೧೪,೦೦೦ ಆಗಿದೆ. ಎಲ್ಲ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಅಗ್ರಿಕಲ್ಚರ್ ಇನ್ಸುರನ್ಸ ಕಂಪನಿಯ ಪ್ರತಿನಿಧಿ ಪವಿತ್ರಾ ಮೊ- ೮೮೯೯೮೮೭೮೭೩, ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ- ೯೯೪೫೮೯೬೧೯೮, ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ- ೮೯೭೧೩೭೯೧೦೮, ಕೊಲ್ಹಾರ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ- ೯೮೪೫೦೭೦೩೬೭ ಅವರನ್ನು ಸಂಪರ್ಕಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
