ರಾಜ್ಯ ಚಲವಾದಿ ಸರಕಾರಿ ನೌಕರರ ಸಂಘದ ಉದ್ಘಾಟನೆ ನೆರವೇರಿಸಿದ ಎಸ್ಪಿ ರವೀಂದ್ರ ಗಡಾದೆ ಅಭಿಮತ
ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ್ ರವರು ಬದುಕಿದ್ದಾಗಲೂ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಡೆಗೆ ಇದ್ದರು. ಅವರ ಸಾವಿನ ನಂತರವೂ ಬಡವರನ್ನು ನಿಕೃಷ್ಟರನ್ನು ಕಟ್ಟ ಕಡೆಯ ವ್ಯಕ್ತಿಯನ್ನು ಕಾಪಾಡುತ್ತಿರುವುದು ಬಾಬಾ ಸಾಹೇಬರು ಬರೆದ ಸಂವಿಧಾನವೇ ವಿನಃ ಯಾವ ವ್ಯಕ್ತಿಯೂ ಅಲ್ಲ, ಸರಕಾರವೂ ಅಲ್ಲ ಎಂದು ಬೆಳಗಾವಿಯ ಎಸ್ಪಿ ರವೀಂದ್ರ ಕೆ. ಗಡಾದೆ ಹೇಳಿದರು.
ಅವರು ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಚಲವಾದಿ ಸರಕಾರಿ ನೌಕರರ ಸಂಘದ ಉದ್ಘಾಟನೆ ನೆರವೇರಿಸಿ ಕರ್ನಾಟಕ ರಾಜ್ಯ ಚಲವಾದಿ ಸರಕಾರಿ ನೌಕರರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನಮ್ಮೆಲ್ಲರ ಬದುಕಿಗೆ ಆಧಾರ ಸ್ತಂಭ ಆಗಿರುವ ಸಂವಿಧಾನವನ್ನು ಇಂದು ನಾವೆಲ್ಲರೂ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗೋಣ ಎಂದು ಹೇಳಿದರು.
ಬೆಳಗಾವಿ ಹೆಸ್ಕಾಂ ಲೆಕ್ಕ ನಿಯಂತ್ರಣಾಧಿಕಾರಿ ಸುರೇಶ ಎ.ಸಿಂಧೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಇಂದಿನ ಯುಗದಲ್ಲಿ ಪೂರ್ವಾಗ್ರಹ ಪೀಡಿತ ಸಾಹಿತ್ಯವನ್ನು ಓದದೆ. ಅತೀ ಹೆಚ್ಚು ಮೊಬೈಲ್ ಬಳಸದೆ ಧನಾತ್ಮಕ ಸಾಹಿತ್ಯವನ್ನು ಓದುವುದರ ಮೂಲಕ ಬದುಕು ಮತ್ತು ಸಮಾಜವನ್ನು ಸರಿದಾರಿಗೆ ತರಬಹುದಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಕಲಬುರಗಿಯ ನಾಗರತ್ನ ಬಂತೆ ಜೀ ವಹಿಸಿದ್ದರು. ಬುದ್ದ,ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಶಹಬಾದ ತಹಶೀಲ್ದಾರ ಜಗದೀಶ ಔರ ಪೂಜೆ ನೆರವೇರಿಸಿದರು. ಶ್ರೀಮತಿ ಅನುರಾಧಾ ಎಲ್. ಚಂಚಲಕರ ಉಪನಿರ್ದೇಶಕರು, ಆಯುಷ ನಿರ್ದೇಶನಾಲಯ, ಬೆಂಗಳೂರು ಹಾಗೂ ಸುನೀಲ ಕಾಂಬಳೆ ಡಿವೈಎಸ್ಪಿ ಜಾರಿ ನಿರ್ದೇಶನಾಲಯ, ವಿಜಯಪುರ ಇವರು ಜ್ಯೋತಿ ಬೆಳಗಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಡಾ.ಅಪ್ಪಗೆರೆ ಸೋಮಶೇಖರ, ಅಂಚೆ ಅಧೀಕ್ಷಕ ಚಂದ್ರಕಾಂತ ಜಿ. ಕಾಂಬಳೆ, ಶಿವಲಿಂಗ ಕುರೆನ್ನವರ ಪೊಲೀಸ್ ಇನ್ಸಪೆಕ್ಟರ್, ಆಲಮಟ್ಟಿ ಜಲಾಶಯ, ಡಾ.ರಮೇಶ ಕಾಂಬಳೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ, ವಕೀಲ ಬಹು ಸಾಹೇಬ ಕಾಂಬಳೆ, ಮುದ್ದಣ್ಣ ಭೀಮನಗರ, ರಾವಸಾಹೇಬ ಗವಾರಿ, ಬಸವರಜ ಚಲವಾದಿ, ಪ್ರೊ. ಶ್ರೀಮತಿ ಸುಜಾತಾ ಚಲವಾದಿ, ಚಿದಾನಂದ ಎಂ. ಕಾಂಬಳೆ, ಕರ್ನಾಟಕ ರಾಜ್ಯ ಚಲವಾದಿ ಸರಕಾರಿ ನೌಕರರ ಸಂಘಟನೆಯ ರಾಜ್ಯಾದ್ಯಕ್ಷ ಚಿದಾನಂದ ಎಮ್. ಕಾಂಬಳೆ, ರಾಜ್ಯ ಹಿರಿಯ ಉಪಾಧ್ಯಕ್ಷ ಅರವಿಂದ ವಾಯ್. ಲಂಬು, ರಾಜ್ಯ ಉಪಾಧ್ಯಕ್ಷ ರವಿಕಾಂತ ಸಿ. ಎಮ್., ರಾಜ್ಯ ಪ್ರಧಾನ ಕಾರ್ಯದರ್ಶಿ ರಾಕೇಶ ಅರ್. ಇಂಗಳಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್.ಬಿ. ಸಿಂಗ್ಯಾಗೋಳ, ರಾಜ್ಯ ಸಹ ಕಾರ್ಯದರ್ಶಿಗಳಾದ ರವೀಂದ್ರ ಶಿವಯಗೋಳ, ದುರ್ಗಪ್ಪ ಚಲವಾದಿ, ರಾಜ್ಯ ಸಂಚಾಲಕ ಮೋಹನ ಬಿ. ಗುನ್ನಾಪುರ, ರಾಜ್ಯ ಸಂಚಾಲಕಿ ಶ್ರೀಮತಿ ಚಂಚಲಕರ ಖಜಾಂಚಿ ಸುರೇಶ ದಲ್ಲಾರಿ, ರಾಜ್ಯ ನಿರ್ದೇಶಕರಾದ ಶಿವಾನಂದ ಕಟ್ಟಿಮನಿ, ಪುನೀತಕುಮಾರ, ಕುಮಾರ ಬಾಗೇವಾಡಿ, ರಮೇಶ ಅರ್. ಪಿರಗಾ, ಆಂಜನೇಯಸ್ವಾಮಿ ಹೊಸಮನಿ, ಪಿ.ಎಸ್. ಧರಣಾಕರ, ರವೀಂದ್ರ ಇರಸೂರ, ಯುವರಾಜ ನಾಟೀಕಾರ, ಸಿ.ಕೆ. ಕಾಂಬಳೆ ಇನ್ನಿತರರು ಉಪಸ್ಥಿತರಿದ್ದರು.
ರಾಕೇಶ ಆರ್. ಇಂಗಳಗಿ ಸ್ವಾಗತಿಸಿದರು. ಶಶಿಕಾಂತ ಹಾದಿಮನಿ ನಿರೂಪಿಸಿದರು. ಹಿರಗಪ್ಪ ಬ. ಸಿಂಗ್ಯಾಗೋಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಅರವಿಂದ ಲಂಬು ವಂದಿಸಿದರು.

