ದೇವರಹಿಪ್ಪರಗಿ: ತಾಲ್ಲೂಕು ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆದು ಬಡ ಕುಟುಂಬಗಳ ಸುಗಮ ಸಂಸಾರ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರು ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಅಬಕಾರಿ ಇಲಾಖೆಯ ಉಪನಿರೀಕ್ಷಕ ಬಿ.ವಿ.ರಜಪೂತ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಆಗಮಿಸಿದ ದೇವೂರ ಗ್ರಾಮದ ಮಹಿಳೆಯರು ಗ್ರಾಮ ಹಾಗೂ ತಾಂಡಾಗಳಲ್ಲಿ ಮಾಡಲಾಗುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ರೇಣುಕಾ ಪಾಟೀಲ ಮಾತನಾಡಿ, ದೇವೂರ ಗ್ರಾಮ ಮತ್ತು ತಾಂಡಾಗಳಲ್ಲಿ ಅಕ್ರಮವಾಗಿ ಸಾರಾಯಿ ತಯಾರಿಸಿ ಅಪಾಶಿ ಶಂಕರಗೌಡ ಬಗಲಿ, ಕಲಾವತಿ ಅಪಾಶಿ ಬಗಲಿ ಮನೆ, ಶಾಲೆಯ ಹತ್ತಿರದ ಮಾದೇವಪ್ಪ ಪೂಜಾರಿ, ಅನಸೂಬಾಯಿ ಮಾದೇವಪ್ಪ ಪೂಜಾರಿ ಮಾಲೀಕತ್ವದ ಕಿರಾಣಿ ಅಂಗಡಿ, ಬಸ್‌ನಿಲ್ದಾಣದ ಹತ್ತಿರದ ಸಿದ್ದು ಬೋರಗಿ ಪಾನ್ ಶಾಪ್, ರೇಣುಕಾ ಸಿದ್ದು ಬೋರಗಿ, ಸಂತೋಷ ರಾಠೋಡರ ಎಲ್.ಟಿ ೧ರಲ್ಲಿನ, ಎಲ್ಲಮ್ಮ ದೇವಸ್ಥಾನದ ಕ್ರಾಸ್‌ನಲ್ಲಿಯ ಸಂತೋಷ ರಾಠೋಡ ದಾಬಾಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೀಸಿದರೆ ನೀವಾರು ಕೇಳುವವರು ಎಂದು ನಮಗೆ ದಬಾಯಿಸುತ್ತಾರೆ.
ಅಕ್ರಮ ಮದ್ಯ ಮರಾಟದ ಫಲವಾಗಿ ಸ್ಥಳೀಯ ೮ ರಿಂದ ೧೦ ವರ್ಷದ ಮಕ್ಕಳು ಕುಡಿಯುವ ಚಟಕ್ಕೆ ಅಂಟಿಕೊAಡಿದ್ದಾರೆ ಇದರಿಂದ ಮನೆ ನಿರ್ವಹಣೆ ಮಾಡುವ ಮಹಿಳೆಯರು ಭಯಭೀತರಾಗಿದ್ದಾರೆ. ಮನೆಯಲ್ಲಿ ಗಂಡ ಮತ್ತು ಮಕ್ಕಳ ಕುಡಿಯುವ ಚಟಕ್ಕೆ ಮಹಿಳೆಯರು ಮಂಗಳಸೂತ್ರ, ಕಾಲುಂಗರ ಸೇರಿದಂತೆ ಆಭರಣಗಳನ್ನು ಕಳೆದುಕೊಳ್ಳುವಂತಾಗಿದೆ. ಕೂಡಲೇ ತಾಲ್ಲೂಕಾಡಳಿತ ಈ ಕುರಿತು ಕ್ರಮ ವಹಿಸುವಂತೆ ಆಗ್ರಹಿಸಿದರು.
ಮನವಿ ಸಲ್ಲಿಸುವ ಮುಂಚೆ ಮಹಿಳೆಯರು ದೇವೂರ ಗ್ರಾಮದ ಮಣೂರ ಕ್ರಾಸ್‌ನಲ್ಲಿ ೨ ಗಂಟೆಗಳ ಕಾಲ ಧರಣಿ ಕುಳಿತು ಪ್ರತಿಭಟಿಸಿದರು. ನಂತರ ಪಟ್ಟಣದ ತಹಶೀಲ್ದಾರ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಅಬಕಾರಿ ಇಲಾಖೆಯೊಂದಿಗೆ ಸೇರಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಚಂದಮ್ಮಾ ಪಾಟೀಲ, ಭಾರತಿ ಬಿರಾದಾರ, ಪಾರ್ವತಿ ಪಾಟೀಲ, ಗೌರಾಬಾಯಿ ಗೊಡ್ಯಾಳ, ಮಲಕಮ್ಮ ಪಾಟೀಲ, ಶೋಭಾ ಬಿರಾದಾರ, ಅವ್ವಮ್ಮ ಪಾಟೀಲ, ಸುಂದ್ರಾಬಾಯಿ ಪಾಟೀಲ, ಬೋರವ್ವ ತಳವಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

