ವಿಜಯಪುರ: ಸಾವರ್ಕರ್ ವಿಚಾರ ಸಾವಿಲ್ಲದ ವಿಚಾರ – ಮೃತ್ಯುಂಜಯ ವಿಚಾರ, ಸತ್ಯಮೇವ ಜಯತೇ ಎಂಬ ವಾಕ್ಯದಂತೆ ; ಸಾವರ್ಕರ್ ಸತ್ಯವನ್ನು ಹೇಳಿದರಿಂದ ಅವರ ವಿಚಾರ ಇಂದಿಗೂ ಉಳಿದಿವೆ ಡಾ. ಜಿ ಬಿ ಹರೀಶ ಹೇಳಿದರು.
ನಗರದ ಪಿಡಿಜೆ ಸಭಾಭವನದಲ್ಲಿ ನಡೆದ ಮಂಥನ ವಿಜಯಪುರ ಮತ್ತು “ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ” ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ “ಸ್ವಾತಂತ್ರ್ಯ ವೀರ ಸಾವರ್ಕರ್ ಕುರಿತ ಆರೋಪಗಳು ಸತ್ಯವೋ, ಮಿಥ್ಯವೋ ?” ವಿಷಯಾಧರಿಸಿ ಮಾತಾಡಿದ ಅವರು, ಕಮ್ಯುನಿಸ್ಟ್ ರು “ಹಿಂದು” ಶಬ್ದ ಸಂಸ್ಕೃತ ಶಬ್ದವಲ್ಲ , ವೇದ ಉಪನಿಷತ್ ಗಳಲ್ಲಿಯೂ ಹಿಂದು ಶಬ್ದದ ಉಲ್ಲೇಖವಿಲ್ಲ ಎಂದು ಆರೋಪಿಸುವುದುಂಟು. ಆದರೆ, ಪ್ರಾಕೃತ ಭಾಷೆಯಲ್ಲಿ “ಹಿಂದು” ಶಬ್ದದ ಉಲ್ಲೇಖವಿದೆ. ಪೃಥ್ವಿರಾಜ್ ಚೌವ್ಹಾಣನ ʼರಾಸೋ” ಕೃತಿಯಲ್ಲಿ ಹಿಂದು “ಶಬ್ದ” ಉಲ್ಲೇಖವಿದೆ. ಹಾಗೆ, ವಿಜಯನಗರದ ಎರಡನೇ ಹರಿಹರ ಶಾಸನದಲ್ಲಿ ‘ಹಿಂದು ರಾಜ ಸುಲ್ತಾನ್’ ಎಂದು ಬರೆಸಲಾಗಿದೆ, ಇದನ್ನು ತೋರಿಸಿಕೊಟ್ಟವರು ಸ್ವಾತಂತ್ರ್ಯ ವೀರ ಸಾವರ್ಕರ್ ಮಾತ್ರ. ಆದರೆ, ಹಿಂದು ಮಹಾಸಭಾದ ಜನಪ್ರಿಯ ನೇತಾರರಾಗಿದ್ದ ಸಾವರ್ಕರ್ ಕಂಡು, ತನ್ನ ಪ್ರತಿಸ್ಪರ್ಧಿ ಆಗಬಹುದೆಂದು ಪಂಡಿತ ನೆಹರು ಗಾಂಧಿಜೀ ಹತ್ಯೆಯಲ್ಲಿ ಅವರ ಪಾತ್ರವಿದೆಯಂದು ಬಿಂಬಿಸಲಾಯಿತು, ಸಾವರ್ಕರ್ ‘ಕ್ಷಮಾಪಣೆ ಪತ್ರ’ ಎನ್ನುವುದು ಜೈಲಿನಿಂದ ಹೊರಬರಲು ಸಾವರ್ಕರ್ ಹೂಡಿದ ತಂತ್ರವೆಂದು ಜಿ ಬಿ ಹರೀಶ ತಿಳಿಸಿದರು.
ಗೌರವ ಅತಿಥಿಯಾದ ಹರ್ಷ ಸಮೃದ್ಧ, “ಸಾವರ್ಕರ ಸಾಹಿತ್ಯ ಹತ್ತು ಸಂಪುಟಗಳಲ್ಲಿ ಮರಾಠಿ ಭಾಷೆಯಲ್ಲಿದೆ , ಪ್ರಯತ್ನಪಟ್ಟು ಈಗ ಸಂಪುಟ ಒಂದು ಮತ್ತು ಆರು ಸಿದ್ಧವಾಗಿದೆ ಇನ್ನು ಎಂಟು ಸಂಪುಟಗಳ ಪ್ರಕಾಶನ ಸದ್ಯದಲ್ಲೇ ಆಗಲಿದೆ, ಸಾವಕರ ಸಾಹಿತ್ಯ ಕನ್ನಡದ ಎಲ್ಲ ಜನರಿಗೂ ಮುಟ್ಟಬೇಕು ಎಂಬ ಆಶಯ ಸಾವರ್ಕರ ಸಾಹಿತ್ಯ ಸಂಘದ್ದು ಇದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮೃದ್ಧ ಸಾಹಿತ್ಯ ಪ್ರಕಟಣೆಯ ವೀರ ಸಾವರ್ಕರ್ ಸಂಪುಟ ೧ ಮತ್ತು ೬ ಹಾಗೂ ಸುಭಾಷ್ ಚಂದ್ರ ಬೋಸ್ ಜೀವನಾಧರಿತ ಕಾದಂಬರಿ ‘ಮಹಾಕಾಲ’ ಪುಸ್ತಕಗಳು ಬಿಡುಗಡೆಯಾದವು.
ಸಾನಿಧ್ಯವನ್ನು ಜ್ಞಾನ ಯೋಗ್ರಾಶ್ರಮದ ಬಸವಲಿಂಗ ಸ್ವಾಮಿಗಳು ವಹಿಸಿದ್ದರು, ಮುಖ್ತ ಅತಿಥಿಗಳಾಗಿ ವಿ ಸಿ ನಾಗಠಾಣ, ಜಂಬುನಾಥ ಕಂಚ್ಯಾಣಿ, ಎ ಡಿ ದೇಶಪಾಂಡೆ, ವಿನಾಯಕ ಗ್ರಾಮಪುರೋಹಿತ, ಬಸವರಾಜ ಕೌಲಗಿ, ಶಿವಾನಂದ ಕೇಲೂರ, ಸುರೇಶ ಗೆಜ್ಜಿ, ಶೀಲಾ ಸುರೇಶ ಬಿರಾದಾರ, ಸುಮಾ ಬೋಳರೆಡ್ಡಿ, ಸುಷ್ಮಾ ಶಿವಮಠ, ಉಜ್ವಲಾ ಸರ್ನಾಡಗೌಡ, ರವಿಶಂಕರ ಹೂಗಾರ, ರಾಜೇಂದ್ರ ಸಂಕಣ್ಣವರ, ಈರಣ್ಣ ಛಾಗಶೆಟ್ಟಿ, ಮತ್ತು ಇನ್ನಿತರ ಶಿಕ್ಷಣ ಸಂಸ್ಥೆಯ ಪ್ರಮುಖರು, ಚಿಂತಕರು, ಉಪಸ್ಥಿತರಿದ್ದರು.
ರಘೂತ್ತಮ ಅರ್ಜುಣಗಿ ನಿರೂಪಿಸಿದರು. ಈರಣ್ಣ ಬಿರಾದಾರ ಸ್ವಾಗತಿಸಿದರು. ನಾರಾಯಣ ಬಾಬಾನಗರ ಮಹಾಕಾಲ ಪುಸ್ತಕ ಪರಿಚಯಿಸಿದರು. ಶ್ರೀಮತಿ ಇಂದಿರಾ ಬಿದರಿ ವಂದಿಸಿದರು.
ಅಭಾಸಾಪ ಹಾಗೂ ಮಂಥನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

