ದೇವರಹಿಪ್ಪರಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ದೇವೂರ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.
ತಾಲ್ಲೂಕಿನ ದೇವೂರ ಗ್ರಾಮದಲ್ಲಿ ದಿ:೪ ರಿಂದ ಆರಂಭಗೊಂಡು ೧೦ ರವರೆಗೆ ಜರುಗುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ಪ್ರಮುಖ ಕಾರ್ಯಕ್ರಮವಾದ ಹತ್ತು ದಿನಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಗ್ರಾಮದ ವಿವಿಧೆಡೆ ಸ್ವಚ್ಛತಾ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ಅಕ್ರಮ್ ಪಾಷಾ ಮಾತನಾಡಿ, ಎನ್‌ಎಸ್‌ಎಸ್‌ನ ವಾರ್ಷಿಕ ವಿಶೇಷ ಶಿಬಿರವನ್ನು ನಿಗದಿತ ರಜಾ ದಿನಗಳಲ್ಲಿ ಯಾವುದಾದರೂ ಒಂದು ಗ್ರಾಮದಲ್ಲಿ ಸಕಲ ತಯಾರಿಯೊಂದಿಗೆ ಆಯೋಜಿಸಲಾಗುತ್ತಿದೆ. ಅಂತೆಯೇ ಶಿಬಿರದ ೫ನೇ ದಿನವಾದ ಸೋಮವಾರ ಗ್ರಾಮದ ವಿವಿಧ ಬೀದಿಗಳು, ದೇವಸ್ಥಾನ ಹಾಗೂ ರುದ್ರಮುನಿ ಹಾಗೂ ಶಿವಬಸವ ತಪೋಮಂದಿರದ ಆವರಣದಲ್ಲಿ ಕಸಗೂಡಿಸಿ ಸ್ವಚ್ಛತಾ ಕಾರ್ಯ ನೆರವೇರಿಸಲಾಯಿತು ಎಂದರು.
ಉಪನ್ಯಾಸಕ ಬಸವರಾಜ ಹೊನಮಟ್ಟಿ ವಿದ್ಯಾರ್ಥಿ ಪ್ರತಿನಿಧಿಗಳಾದ ದೀಪಾ ನಾಯ್ಕೋಡಿ, ದಾನಮ್ಮಾ, ಅಶೋಕ ಚವ್ಹಾಣ, ಮಾಳಪ್ಪ ದೊಡ್ಡಿನಿ, ಖಾಜಾಅಮೀನ್ ಮುಲ್ಲಾ, ನೂರ್‌ಜಹಾನ್ ಮುಜಾವರ್, ಪೂಜಾ ಚವ್ಹಾಣ, ಐಶ್ವರ್ಯ ಪಾಟೀಲ, ಐಶ್ವರ್ಯ ಮಣೂರ ಸೇರಿದಂತೆ ೩೦ ಶಿಬಿರಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

