ಚಿಮ್ಮಡ: ರಬಕವಿ- ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಮಾಲಾ ಅಶೋಕ ಮೋಟಗಿ ಹಾಗೂ ಅವರ ಪತಿ ಮಾಜಿ ಉಪಾಧ್ಯಕ್ಷ ಅಶೋಕ ಮೋಟಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಮುಖಂಡ ಸಿದ್ದು ಕೋಣ್ಣೂರರವರ ಗ್ರಹ ಕಛೇರಿಯಲ್ಲಿ ರವಿವಾರ ಸಂಜೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಚಿಮ್ಮಡ ಗ್ರಾಮ ಪಂಚಾಯತಿ ಕಾಂಗ್ರೆಸ್ ತೆಕ್ಕೆಗೆ ಬಂದಂತಾಗಿದೆ.
ತೇರದಾಳ ಮತಕ್ಷೇತ್ರದ ಕಾಂಗ್ರೆಸ ಗ್ರಾಮೀಣ ಘಟಕದ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಮಹಾಲಿಂಗಪೂರ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಚಿಮ್ಮಡ ಗ್ರಾಮ ಘಟಕದ ಕಾಂಗ್ರೆಸ್ ಅಧ್ಯಕ್ಷ ಉಮೇಶ ಪೂಜಾರಿ, ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯಣ್ಣವರ, ಬಾಳಪ್ಪಾ ಗಡೆಪ್ಪನವರ, ಪ್ರವೀಣ ಪೂಜಾರಿ, ಮಹಾಲಿಂಗ ಬಳಗಾರ, ಶ್ರೀಶೈಲ ಮಠಪತಿ, ಶಿವಪ್ಪಾ ನಾಗನೂರ, ರಾಜು ಬಗನಾಳ, ಅಶೋಕ ಚಿಮ್ಮಡ, ಪಿರಸಾಬ ನದಾಫ, ರವಿ ದೊಡವಾಡ, ಸಲೀಮ ಸರಕಾವಸ ಸೇರಿದಂತೆ ಹಲವಾರು ಜನ ಪ್ರಮುಖರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.
ಇಪ್ಪತ್ತೆಂಟು ಸದಸ್ಯಬಲದ ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕಳೆದ ಹನ್ನೊಂದು ತಿಂಗಳ ಹಿಂದೆ ಬಿಜೆಪಿ ಬೆಂಬಲಿತ ೧೯ ಸದಸ್ಯರ ಬೆಂಬಲದೊಂದಿಗೆ ಶ್ರೀಮತಿ ಮಾಲಾ ಅಶೋಕ ಮೋಟಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ೧೯/೯ ಪರ, ವಿರೋಧ ಬಲವಿರುವ ಪಂಚಾಯತಿಯಲ್ಲಿ ಅವಿಸ್ವಾಸ ನಿರ್ಣಯ ಮಂಡಿಸಲು ಇನ್ನೂ ಮೂರು ತಿಂಗಳು ಕಾಲಾವಕಾಶವಿದ್ದು ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಝಟಾಪಟಿ ನಡೆಯಲಿದೆ.
Subscribe to Updates
Get the latest creative news from FooBar about art, design and business.
ಚಿಮ್ಮಡ ಗ್ರಾ.ಪಂ ಅಧ್ಯಕ್ಷೆ ಕಾಂಗ್ರೆಸ್ ಸೇರ್ಪಡೆ :ಕಾಂಗ್ರೆಸ್ ತೆಕ್ಕೆಗೆ ಗ್ರಾಪಂ
Related Posts
Add A Comment

