ಕೊಲ್ಹಾರ: ರೈತರ ಜೀವನಾಡಿ ಕೃಷ್ಣಾ ನದಿ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರದ ಪಂಚಗಂಗಾ ಕ್ಷೇತ್ರದಲ್ಲಿ ಕಡ್ಲಿಗರ ಹುಣ್ಣಿಮೆಯ ದಿನವಾದ ಜು.೨೧ ರಂದು ಬೆಳಿಗ್ಗೆ ೧೦ ಗಂಟೆಗೆ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ರೈತರೊಂದಿಗೆ ಸೇರಿ ಉಡಿ ತುಂಬುವ ವಿಶೇಷ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರು ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುತ್ತಾ ಮಾತನಾಡಿದ ಅವರು, ಮುಂಗಾರು ಮಳೆಗಳು ಉತ್ತಮವಾಗಿ ಸುರಿದು ಕಡ್ಲಿಗರ ಹುಣ್ಣಿಮೆಗೆ ಕೃಷ್ಣಾ ನದಿ ತುಂಬಿ ಹರಿಯುತ್ತದೆ. ಹೀಗಾಗಿ ಅದು ಈ ಭಾಗದ ರೈತರಿಗೆ ಜೀವನಾಡಿಯಾಗಿದೆ.ಅದರ ಪ್ರಯುಕ್ತ ಕಡ್ಲಿಗರ ಹುಣ್ಣಿಮೆಯ ದಿನ ದಂಪತಿಗಳ ಸಮೇತವಾಗಿ ಮಹಾಬಳೇಶ್ವರಕ್ಕೆ ತೆರಳಿ ಕೃಷ್ಣಾ ನದಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಕಳೆದ ೧೫ ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ. ಈ ಬಾರಿಯೂ ಕೂಡಾ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ರೈತರೊಂದಿಗೆ ತೆರಳಿ ಕೃಷ್ಣಾ ನದಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಉಡಿ ತುಂಬುವ ಕಾರ್ಯಕ್ರಮಕ್ಕೆ ಆಗಮಿಸುವವರು ಜು.೨೦ರಂದು ಬೆಳಿಗ್ಗೆ ೧೧ ಗಂಟೆಗೆ ಶನಿವಾರ ವಿಜಯಪುರದ ಅಥಣಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಹತ್ತಿರ ಬರಬೇಕು ನಂತರ ಅಲ್ಲಿಂದ ೧೨ ಗಂಟೆಗೆ ಮಹಾಬಳೇಶ್ವರಕ್ಕೆ ತಿಕೋಟ, ಬಾಬಾನಗರ, ಬಿಜ್ಜರಗಿ,ಕನಮಡಿ,ಜತ್ತ,ಕರಾಡ ಮೂಲಕ ತೆರಳಿ ಸಾತಾರದಲ್ಲಿ ವಸತಿ ಮಾಡಲಾಗುವದು. ವಸತಿ ವ್ಯವಸ್ಥೆಯನ್ನು ಸಾತಾರದ ಹಳೆ ಕೊಲ್ಹಾಪೂರ ರಸ್ತೆಯ ಗೂಡೋಲಿ ಬಳಿ ಶಿವರಾಜ ಪೆಟ್ರೋಲ ಪಂಪ್ ಹತ್ತಿರವಿರುವ ಅಕ್ಷತಾ ಮಂಗಲ ಭವನದಲ್ಲಿ ಮಾಡಲಾಗಿದೆ. ಸಾತಾರದಲ್ಲಿ ರಮೇಶ ಕುಂಬಾರವರನ್ನು ಸಂಪರ್ಕಿಸಲು ದೂ.೯೯೨೨೮೧೫೯೨೦ ಸಂಖ್ಯೆಯನ್ನು ಬಳಸಲು ತಿಳಿಸಿದ್ದಾರೆ.ಕೊಲ್ಹಾರದಿಂದ ಮಹಾಬಳೇಶ್ವರಕ್ಕೆ ತೆರಳುವವರು ಆನಂದ ಬಿಸ್ಟಗೊಂಡ- ೯೮೪೫೭೬೯೫೨೮ ಹಾಗೂ ವಿಜಯ ಬಾಟಿ ೬೩೬೦೦೭೭೮೦೧ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿಬೇಕೆಂದರು.
ಜು.೨೧ ರಂದು ಬೆಳಿಗ್ಗೆ ೬ ಗಂಟೆಗೆ ಗುರು ಪೂರ್ಣಿಮೆಯ ದಿನ ಸಾತಾರದಿಂದ ಮಹಾಬಳೇಶ್ವರಕ್ಕೆ ತೆರಳಿ ಮಹಾಬಳೇಶ್ವರ ಪಂಚಗಂಗಾ ಸನ್ನಿಧಿಯಲ್ಲಿ ಬೆಳಿಗ್ಗೆ:೧೦ ಗಂಟೆಗೆ ಎಲ್ಲರೊಂದಿಗೆ ಸೇರಿ ಕೃಷ್ಣಾ ನದಿ ಉಗಮಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು. ಪೂಜೆ ಕಾರ್ಯಕ್ರಮಕ್ಕೆ ವಿವಿಧ ಸ್ವಾಮೀಜಿಗಳನ್ನ ,ಜನಪ್ರತಿನಿಧಿಗಳನ್ನು ಹಾಗೂ ಸಾತಾರದ ಶಾಸಕ ಹಾಗೂ ಸಂಸದರನ್ನು ಈ ಬಾರಿ ಆವ್ಹಾನಿಸಲಾಗುತ್ತಿದೆ. ಕಾರಣ ವಿಜಯಪುರ -ಬಾಗಲಕೋಟೆ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯ ಶ್ರೀಶೈಲ ಅಥಣಿ, ಮುಖಂಡರಾದ ಆನಂದ ಬಿಸ್ಟಗೊಂಡ,ಅಶೋಕ ಗಿಡ್ಡಪ್ಪಗೋಳ, ಮಂಡಳ ಅಧ್ಯಕ್ಷರು ಸೇರಿದಂತೆ ಪಟ್ಟಣದ ಅನೇಕ ರೈತ ಮುಖಂಡರು ಇದ್ದರು.
Subscribe to Updates
Get the latest creative news from FooBar about art, design and business.
ಜು.೨೧ರಂದು ಮಾಜಿ ಸಚಿವ ಬೆಳ್ಳುಬ್ಬಿಯಿಂದ ಕೃಷ್ಣಾ ನದಿಗೆ ಬಾಗೀನ ಅರ್ಪಣೆ
Related Posts
Add A Comment

