Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ನ್ಯಾಯಾಲಯಗಳಲ್ಲಿ ನಡೆಯುವ ರಾಷ್ಟ್ರೀಯ ಲೋಕಅದಾಲತ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಕರಣಗಳನ್ನು ಮುಗಿಸಿಕೊಂಡರೆ ಕಕ್ಷಿಗಾರರಲ್ಲಿ ಸಾಮರಸ್ಯ ಭಾವನೆ ಉಂಟಾಗಿ ಮುಂದಿನ ದಿನಗಳಲ್ಲಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶೆ ತಯ್ಯಾಬ ಸುಲ್ತಾನ ಹೇಳಿದರು.ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕ ಅದಾಲತ್ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ವಕೀಲರ ಮತ್ತು ಕಕ್ಷಿದಾರರ ಸಹಕಾರ ಬಹಳಷ್ಟು ಮುಖ್ಯವಾಗಿದೆ. ಲೋಕಅದಾಲತ್ ಮಹತ್ವದ ಕುರಿತು ಕಕ್ಷಿದಾರರಿಗೆ ಅರಿವು ಮೂಡಿಸುವದು ತುಂಬಾ ಅಗತ್ಯವಾಗಿದೆ ಎಂದರು.ಇಂದು ಜರುಗಿದ ರಾಷ್ಟ್ರೀಯ ಲೋಕಅದಾಲತ್ದಲ್ಲಿ ಮೂವರು ನ್ಯಾಯಾಧೀಶರು ವಿವಿಧ ಒಟ್ಟು ೨,೫೧೮ ಪ್ರಕರಣಗಳನ್ನು ಕೈಗೆತ್ತಿಕೊಂಡು ಇದರಲ್ಲಿ ೧,೪೯೫ ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ. ೧೦,೬೯೯,೨೬೯ ಹಣವನ್ನು ಸೆಂಟಲ್ಮೆಂಟ್ ಮಾಡಿದರು.ಹಿರಿಯ ಸಿವ್ಹಿಲ್ ನ್ಯಾಯಾಧೀಶೆ ತಯ್ಯಾಬ ಸುಲ್ತಾನ ಅವರು ಒಟ್ಟು ೬೯೩ ಪ್ರಕರಣಗಳನ್ನು ಕೈಗೆತ್ತಿಕೊಂಡು ೪೪೦ ಪ್ರಕರಣಗಳನ್ನು ಇತ್ಯರ್ಥಪಡಿಸಿ ೩೪,೯೮೦೦೦ ರೂ. ಸೆಂಟಲ್ಮೆಂಟ್ ಮಾಡಿದರೆ, ೬೯೩ ಪ್ರಕರಣಗಳನ್ನು ಕೈಗೆತ್ತಿಕೊಂಡು ೪೧೦ ಪ್ರಕರಣಗಳನ್ನು ಇತ್ಯರ್ಥಪಡಿಸಿ ೫೧,೪೭,೮೦೦ ರೂ. ಸೆಂಟಲ್ಮೆಂಟಲ್ ಮಾಡಿದರು.ಸಿವ್ಹಿಲ್ ನ್ಯಾಯಾಧೀಶೆ…
ಬಸವನಬಾಗೇವಾಡಿ: ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ಈ ತಾಲೂಕಿನಲ್ಲಿ ಸಾಕಷ್ಟು ಸಾಧಕರಿದ್ದಾರೆ. ವಿದ್ಯಾರ್ಥಿಗಳು ಸಾಧಕರ ಬಗ್ಗೆ ತಿಳಿದುಕೊಂಡು ತಾವು ಸಾಧನೆ ಮಾಡುವತ್ತ ಹೆಜ್ಜೆ ಇಡಬೇಕು ಎಂದು ಸ್ಥಳೀಯ ಬಿ.ಎಲ್.ಡಿ.ಇ ಸಂಸ್ಥೆಯ ಔಷಧ ಮಹಾವಿದ್ಯಾಲಯದ ಉಪನ್ಯಾಸಕ ಮಹಾಂತೇಶ ಕವಟೇಕರ ಹೇಳಿದರು.ಪಟ್ಟಣದ ಮಹಾವೀರ ಫಾರ್ಮಾದಲ್ಲಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತರಗತಿ ಕೊಠಡಿಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಬೋಧನೆ ಮಾಡುತ್ತಾರೆ. ಆದರೆ ಕೆಲವೇ ವಿದ್ಯಾರ್ಥಿಗಳು ಸಾಧನೆ ಮಾಡುತ್ತಾರೆ. ತರಗತಿಯಲ್ಲಿ ಏಕಾಗ್ರತೆಯಿಂದ ಪಾಠ ಕೇಳುವುದರೊಂದಿಗೆ ಪಠ್ಯಪುಸ್ತಕವನ್ನು ಆಸಕ್ತಿಯಿಂದ ಆತ್ಮವಿಶ್ವಾಸದೊಂದಿಗೆ ಓದುವುದರಿಂದ ಪ್ರತಿಯೊಬ್ಬರೂ ಸಾಧನೆ ಮಾಡಬಹುದು ಎಂದು ಹೇಳಿದರು.ತಾಲೂಕು ಔಷಧ ವ್ಯಾಪಾಸ್ಥರ ಸಂಘದ ಮಹಾವೀರ ಹೊಸಮನಿ ಮಾತನಾಡಿ, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಇತರರು ಪ್ರೇರಣೆ ಪಡೆಯಲಿ ಎಂಬ ಉದ್ದೇಶದಿಂದ ಸಾಧಕರನ್ನು ಗುರುತಿಸಿ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಔಷಧ ವ್ಯಾಪಾರಸ್ಥರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರಮೇಶ ಯಳಮೇಲಿ ಕಾರ್ಯಕ್ರಮ…
ಮುದ್ದೇಬಿಹಾಳ ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಭರವಸೆ ಮುದ್ದೇಬಿಹಾಳ: ಎಲ್ಲ ಸಾಹಿತಿಗಳ ಸಲಹೆ ಸೂಚನೆಗಳನ್ನು ತೆಗೆದುಕೊಂಡು ನಾನು ಮುಂದೆ ಸಾಗುವೆ. ನಿಮ್ಮೆಲ್ಲರ ಒಪ್ಪಿಗೆ ಇದ್ದರೆ ಡಿಶಂಬರ್ ಒಳಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡೋಣ ಎಂದು ಕಸಾಪ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಹಿತಿಗಳ ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.ಎಲ್ಲರ ಸಲಹೆಗಳನ್ನು ತಲೆಬಾಗಿ ಸ್ವೀಕರಿಸುತ್ತೇನೆ. ತಮ್ಮೆಲ್ಲರನ್ನು ಕರೆದುಕೊಂಡೇ ಕನ್ನಡದ ತೇರನ್ನು ಎಳೆಯುತ್ತೇನೆ. ನನಗೆ ಜಾತಿ ಬೇಧ ಮಾಡೋದು ಗೊತ್ತಿಲ್ಲ. ನೇರವಾಗಿ ಮಾತನಾಡುವ ಸ್ವಭಾವ ನನ್ನದು. ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಸಿಗದವರಿಗೆ ಅವಕಾಶ ಕೊಡಿಸಲೆಂದು ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದವನು. ಸಧ್ಯ ತಾಲೂಕಿನ ಕನ್ನಡದ ತೇರನ್ನು ಎಳೆಯುವ ಅವಕಾಶ ಸಿಕ್ಕಿರೋದು ನನ್ನ ಪುಣ್ಯ. ನನಗೆ ಅವಕಾಶ ಇದೆ ಅಂತಾ ನಿಮ್ಮೆಲ್ಲರ ಅಪ್ಪಣೆ ಇಲ್ಲದೆ ನಾನು ಮುಂದೆ ಸಾಗೊಲ್ಲ. ನಿಮ್ಮ ಏನೇ ಸಲಹೆಗಳಿದ್ದರೂ ನನ್ನ ಜೊತೆ ಮುಕ್ತವಾಗಿ ಹಂಚಿಕೊಳ್ಳಿ ಎಂದರು.ಹಿರಿಯ ಸಾಹಿತಿಗಳ ಮಾರ್ಗದರ್ಶನ ನನಗೆ ಅತ್ಯವಶ್ಯ. ಇಲ್ಲಿಯವರೆಗೆ…
ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಲಕ್ಷ್ಮೀ ಹುಬ್ಬಳ್ಳಿ ಕಾಣೆಯಾಗಿರುವ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ನಾಗರಬೆಟ್ಟ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಮೇಲ್ವಿಚಾರಕಿ ಅಂತಾ ಸೇವೆಯಲ್ಲಿದ್ದಳು. ಶಾಲೆಗೆ ಹೋಗಿ ಬರುತ್ತೇನೆ ಅಂತಾ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ ಎಂದು ಈಕೆಯ ಸಹೋದರ ಪ್ರಭು ಚಲವಾದಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.ಎತ್ತರಕ್ಕೆ ೫ಫೂಟ್ ೨ಇಂಚು, ದುಂಡುಮುಖ, ಸಾದಾರಣ ದಪ್ಪ, ಸಾದಗಪ್ಪು ಬಣ್ಣ, ಕನ್ನಡ ಭಾಷೆ ಮಾತನಾಡುವ ಇವಳು ಎಲ್ಲಿಯಾದರೂ ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ೦೮೩೫೬-೨೨೦೩೩೩ ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಚಡಚಣ: ಪಟ್ಟಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಚುನಾವಣೆಯ ಮುಖಾಂತರ ಮಹಾವಿದ್ಯಾಲಯದ ಪ್ರದಾನ ಕಾರ್ಯದರ್ಶಿ ಮತ್ತು ವರ್ಗ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ, ಮುಂದಿನ ವರ್ಷ ೧೮ ವರ್ಷ ತುಂಬಿ ದೇಶದ ಚುನಾವಣೆಗೆ ಮತ ಚಲಾಯಿಸಲು ಸಿದ್ದರಾಗುತ್ತಿರುವ ಯುವ ಪಿಳಿಗೆಗೆ ಚುನಾವಣೆಯ ಕುರಿತು ಅರಿವು ಮೂಡಿಸುವದು ಈ ಚುನಾವಣೆಯ ಉದ್ದೇಶವಾಗಿದೆ ಎಂದು ಹೇಳಿದರು.ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ನಾಮ ಪತ್ರ ಸಲ್ಲಿಕೆ, ನಾಮ ಪತ್ರ ಹಿಂತಗೆಯುವದು, ಚುನಾವಣೆಯ ಪ್ರಚಾರ ಮತ್ತು ಬ್ಯಾಲೆಟ್ ಮುಖಾಂತರ ಮತ ಚಲಾಯಿಸಿ ಯಾವ ರೀತಿ ಚುನಾವಣೆಗಳು ನಡೆಯುತ್ತವೆ ಎನ್ನವು ಅರಿವು ಮೂಡಿಸಲಾಯಿತು.ಮಹಾವಿದ್ಯಾಲಯದ ಉಪನ್ಯಾಸಕರು ಚುನಾವಣಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಿದರು. ವಿದ್ಯಾರ್ಥಿಗಳು ಅತ್ಯಂತ ಸಂತೋಷದಿಂದ ಮತ ಚಲಾಯಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆಮಾಡಿದರು. ದ್ವಿತೀಯ ವರ್ಷದ ವಿದ್ಯಾರ್ಥಿ ಎಚ್.ಎ.ದರ್ಶನಾಳ ಮಹಾವಿದ್ಯಾಲಯದ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಯಾದನು. ವರ್ಗ ಪ್ರತಿನಿಧಿಗಳಾಗಿ ವಿಜ್ಞಾನ ವಿಭಾಗದ ಕುಮಾರ ಮಾನೆ ಮತ್ತು ಕುಮಾರಿ ಕುಲಕರ್ಣಿ ವಾಣಿಜ್ಯ ವಿಭಾಗದ ಕುಮಾರಿ ತಾಳಿಕೋಟಿ ಮತ್ತು…
ನಂದಿ ಕಾರ್ಖಾನೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ ಭರವಸೆ ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿ ಈ ವರ್ಷದ ಹಂಗಾಮಿನಲ್ಲಿ ಕಬ್ಬು ನುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಭರವಸೆ ನೀಡಿದ್ದಾರೆ.ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಕಾರ್ಖಾನೆಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಉಪಸ್ಥಿತರಿದ್ದ ಇಲ್ಲಿನ ಕಾರ್ಮಿಕರು ಕಾರ್ಖಾನೆ ಉಳಿಸಿ ಎಂದು ಕೈಮುಗಿದು ಬೇಡಿಕೊಂಡ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಅಲ್ಲಿದ್ದವರ ಕರುಳು ಚುರ್ ಎನಿಸಿ ಕಣ್ಣುಗಳು ತೇವಗೊಳ್ಳುವಂತೆ ಮಾಡಿದವು. ಅಷ್ಟೇ ಅಲ್ಲ, ಈ ಪ್ರಸಂಗ ಕಾರ್ಖಾನೆಯ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು.ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದ ರೈತರು, ಕಾರ್ಖಾನೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ರೈತ ಮುಖಂಡರು ಮತ್ತು ಎಂಜಿನಿಯರಿಂಗ್ ಕಂಪನಿ ಅಧಿಕಾರಿಗಳಿಂದ ಪ್ರತ್ಯೇಕವಾಗಿ ಸಭೆ ನಡೆಸಿ ಮಾಹಿತಿ ಪಡೆದ ಸಚಿವರು, ಕಾರ್ಖಾನೆ ಪುನಾರಂಭದ ಹಲವಾರು…
ಆಲಮಟ್ಟಿ: ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಹೆಚ್ಚಿದ್ದರಿಂದ ಮುಂಜಾಗ್ರತೆಯ ಕ್ರಮವಾಗಿ ಆಲಮಟ್ಟಿ ಜಲಾಶಯದ ಹೊರಹರಿವನ್ನು 15000 ಕ್ಯುಸೆಕ್ ಗೆ ಭಾನುವಾರ ರಾತ್ರಿ 7 ಗಂಟೆಯಿಂದ ಹೆಚ್ಚಿಸಲಾಗಿದೆ.ಕೃಷ್ಣಾ ನದಿ ಹಿನ್ನೀರಿನಲ್ಲಿ ಯಾವುದೇ ಪ್ರವಾಹ ಸ್ಥಿತಿ ಉಂಟಾಗಬಾರದು ಎಂದು ಹೊರಹರಿವನ್ನು ಹೆಚ್ಚಿಸಲಾಗಿದೆ.ಪ್ರವಾಹ ಸ್ಥಿತಿ ಉಂಟಾಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಅಧಿಕಾರಿಗಳು, ಕೆಬಿಜೆಎನ್ಎಲ್ ಅಧಿಕಾರಿಗಳು ಮೇಲಿಂದ ಮೇಲೆ ನೀರಿನ ಮಾಹಿತಿ ಮಳೆ ಮಾಹಿತಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.ಜಲಾಶಯದ ಮಟ್ಟ;519.60 ಮೀ ಎತ್ತರದ ಜಲಾಶಯದಲ್ಲಿ ಭಾನುವಾರ ಬೆಳಿಗ್ಗೆ 517.46 ಮೀ ಇದ್ದ ನೀರಿನ ಮಟ್ಟವಿದ್ದು, 23,678 ಕ್ಯುಸೆಕ್ ಒಳಹರಿವು ಇದೆ.ಜಲಾಶಯದಲ್ಲಿ 91 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.ಆಲಮಟ್ಟಿಯ ಹೊರಹರಿವು ಹೆಚ್ಚಿಸಿದ್ದರಿಂದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ 55 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಎರಡು ಘಟಕಗಳು ಕಾರ್ಯಾರಂಭ ಮಾಡಿದ್ದು, ಅದರಿಂದ 100 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.ಬೆಂಗಳೂರಿನಲ್ಲಿ ಐಸಿಸಿ ಸಭೆ ಜು.16 ರಂದು;ಕೃಷ್ಣಾ ಅಚ್ಚುಕಟ್ಟು…
ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಭವಿಷ್ಯ ವಿಜಯಪುರ: ಸಂಗಮೇಶ ಬಬಲೇಶ್ವರ ಈ ನಾಡಿನ ಒಬ್ಬ ಸೃಜನಶೀಲ ಯುವ ನಾಯಕನಾಗಿದ್ದು, ಅವರಂಥ ಅತ್ಯುತ್ತಮ ವಾಗ್ಮಿ, ವಿದ್ಯಾವಂತ ವಿಧಾನ ಪರಿಷತ್ತಿನಲ್ಲಿ ಇರಬೇಕೆನ್ನುವುದು ಶ್ರೀಪೀಠದ ಆಶಯವಾಗಿತ್ತು. ಆದರೆ ಕರ್ನಾಟಕ ಘನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಚಿವರಾದ ಎಂ.ಬಿ ಪಾಟೀಲ, ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮಕ್ಕಳ ಬಗೆಗಿನ ಅವರ ಕಳಕಳಿಯನ್ನು ಗುರುತಿಸಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದು ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ ಎಂದು ಪಂಚಮಸಾಲಿ ಸಮುದಾಯದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.ಭಾನುವಾರ ತಮಗೆ ಸನ್ಮಾನಿಸಿ ಆಶೀರ್ವಾದ ಪಡೆದ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ವಕ್ತಾರರೂ ಆಗಿರುವ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರನ್ನು ಸನ್ಮಾನಿಸಿ, ಆಶೀರ್ವದಿಸಿ ಅವರು ಮಾತನಾಡಿದರು.ಸಂಗಮೇಶ ಬಬಲೇಶ್ವರ ಈ ನಾಡಿನ ಭವಿಷ್ಯದ ಯುವ ನಾಯಕರಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಎಂ.ಬಿ ಪಾಟೀಲರು ಮುಂಬರುವ ದಿನಗಳಲ್ಲಿ ಅತ್ಯುತ್ತಮ ವಾಗ್ಮಿಯಾಗಿರುವ ಸಂಗಮೇಶ…
ವಿಜಯಪುರ: ಯೂತ್ ಫಾರ್ ಸೇವಾ ಸಂಸ್ಥೆ ಹಾಗೂ ಟೆಕ್ಸಸ್ ಇನ್ಸ್ಟ್ರುಮೆಂಟ್ಸ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ, ಜಮೆಟ್ರಿ ಬಾಕ್ಸ್ಪ, ಕಂಪಾಸ್, ಪೆನ್, ಪೆನ್ಸಿಲ್, ನೋಟ ಬುಕ್ ಇತ್ಯಾದಿಗಳನ್ನು ವಿಜಯಪುರ ನಗರದ ಕೆ. ಬಿ. ಎಸ್ ನಂ.06 ಸರ್ಕಾರಿ ಶಾಲೆಯಲ್ಲಿ ವಿತರಿಸಲಾಯಿತು.ಯೂತ್ ಫಾರ್ ಸೇವಾ ಸಂಸ್ಥೆ ಸಹಯೋಗದಡಿಯಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸುವ ಮೂಲಕ ಬಡಮಕ್ಕಳಿಗೆ ಸಹಾಯವಾಗುವಂತೆ ಸರಕಾರಿ ಶಾಲೆಗಳಲ್ಲಿ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ವಿಜಯಪುರ ಸಂಚಲನಾ ಸಮಿತಿಯ ಸದಸ್ಯರು ಕೃಷ್ಣಾ ಮಂಡ್ಲಾ, ಜಿಲ್ಲಾ ಸಂಯೋಜಕರು ದುರದುಂಡೇಶ್ವರ ಸಾಲಿಮಠ, ಅವಿನಾಷ್, ಸಂಕೇತ, ಸಂಗೀತಾ,ಸುಧಾ, ಬೋರಮ್ಮ, ನಸ್ರಿನ, ಸುಹಾಸಿನಿ, ರೇಖಾ,ಸುಷ್ಮಿತಾ, ಸುಪ್ರಿಯಾ, ಪೂರ್ಣಿಮಾ,ನ ನಿಖಿಲ, ಶ್ರೀಗಿರಿ ಸಂಗಡಿಗರು ಶಾಲಾ ಶಿಕ್ಷಕರು ಹಾಗೂ ಮಕ್ಕಳ ತಂದೆ ತಾಯಿಯರು ಉಪಸ್ಥಿತರಿದ್ದರು.
