ಬಸವನಬಾಗೇವಾಡಿ: ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ಈ ತಾಲೂಕಿನಲ್ಲಿ ಸಾಕಷ್ಟು ಸಾಧಕರಿದ್ದಾರೆ. ವಿದ್ಯಾರ್ಥಿಗಳು ಸಾಧಕರ ಬಗ್ಗೆ ತಿಳಿದುಕೊಂಡು ತಾವು ಸಾಧನೆ ಮಾಡುವತ್ತ ಹೆಜ್ಜೆ ಇಡಬೇಕು ಎಂದು ಸ್ಥಳೀಯ ಬಿ.ಎಲ್.ಡಿ.ಇ ಸಂಸ್ಥೆಯ ಔಷಧ ಮಹಾವಿದ್ಯಾಲಯದ ಉಪನ್ಯಾಸಕ ಮಹಾಂತೇಶ ಕವಟೇಕರ ಹೇಳಿದರು.
ಪಟ್ಟಣದ ಮಹಾವೀರ ಫಾರ್ಮಾದಲ್ಲಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತರಗತಿ ಕೊಠಡಿಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಬೋಧನೆ ಮಾಡುತ್ತಾರೆ. ಆದರೆ ಕೆಲವೇ ವಿದ್ಯಾರ್ಥಿಗಳು ಸಾಧನೆ ಮಾಡುತ್ತಾರೆ. ತರಗತಿಯಲ್ಲಿ ಏಕಾಗ್ರತೆಯಿಂದ ಪಾಠ ಕೇಳುವುದರೊಂದಿಗೆ ಪಠ್ಯಪುಸ್ತಕವನ್ನು ಆಸಕ್ತಿಯಿಂದ ಆತ್ಮವಿಶ್ವಾಸದೊಂದಿಗೆ ಓದುವುದರಿಂದ ಪ್ರತಿಯೊಬ್ಬರೂ ಸಾಧನೆ ಮಾಡಬಹುದು ಎಂದು ಹೇಳಿದರು.
ತಾಲೂಕು ಔಷಧ ವ್ಯಾಪಾಸ್ಥರ ಸಂಘದ ಮಹಾವೀರ ಹೊಸಮನಿ ಮಾತನಾಡಿ, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಇತರರು ಪ್ರೇರಣೆ ಪಡೆಯಲಿ ಎಂಬ ಉದ್ದೇಶದಿಂದ ಸಾಧಕರನ್ನು ಗುರುತಿಸಿ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಔಷಧ ವ್ಯಾಪಾರಸ್ಥರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರಮೇಶ ಯಳಮೇಲಿ ಕಾರ್ಯಕ್ರಮ ಉದ್ಘಾಟಿಸಿದರು.
ತಾಲೂಕು ಘಟಕದ ಅಧ್ಯಕ್ಷ ಪ್ರಭು ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶೇಖರ ತೇಲಿ, ಲಕ್ಷ್ಮಣ ಬಿರಾದಾರ, ಎಂ.ಕೆ.ಮಠ, ಅಶೋಕ ಮುಳವಾಡ, ಎನ್.ಸಿ.ಬೇವನೂರ, ಗುರು ಸಾರಂಗಮಠ, ರುದ್ರಗೌಡ ಪಾಟೀಲ, ಶ್ರೀಕಾಂತ ಕೋರಿ ಇತರರು ಇದ್ದರು. ಆದಿನಾಥ ಉಪಾಧ್ಯೆ ಸ್ವಾಗತಿಸಿ, ನಿರೂಪಿಸಿದರು.
ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಸ್ಥಳೀಯ ಬಿ.ಎಲ್.ಡಿ.ಇ ಸಂಸ್ಥೆಯ ಔಷಧ ಮಹಾವಿದ್ಯಾಲಯದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಮೊದಲ ರ್ಯಾಂಕ್ ಪಡೆದ ಅಕ್ಷತಾ ಮನಗೂಳಿ, ಏಳನೇ ರ್ಯಾಂಕ್ ಪಡೆದ ಪವಿತ್ರಾ ನಿಡಗುಂದಿ, ಎಂಟನೇ ರ್ಯಾಂಕ್ ಪಡೆದ ಲಕ್ಷ್ಮೀ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

