Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಸಿಗದವರಿಗೆ ವೇದಿಕೆ ಕಲ್ಪಿಸಲು ಬದ್ಧ
(ರಾಜ್ಯ ) ಜಿಲ್ಲೆ

ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಸಿಗದವರಿಗೆ ವೇದಿಕೆ ಕಲ್ಪಿಸಲು ಬದ್ಧ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮುದ್ದೇಬಿಹಾಳ ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಭರವಸೆ

ಮುದ್ದೇಬಿಹಾಳ: ಎಲ್ಲ ಸಾಹಿತಿಗಳ ಸಲಹೆ ಸೂಚನೆಗಳನ್ನು ತೆಗೆದುಕೊಂಡು ನಾನು ಮುಂದೆ ಸಾಗುವೆ. ನಿಮ್ಮೆಲ್ಲರ ಒಪ್ಪಿಗೆ ಇದ್ದರೆ ಡಿಶಂಬರ್ ಒಳಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡೋಣ ಎಂದು ಕಸಾಪ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಹಿತಿಗಳ ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲರ ಸಲಹೆಗಳನ್ನು ತಲೆಬಾಗಿ ಸ್ವೀಕರಿಸುತ್ತೇನೆ. ತಮ್ಮೆಲ್ಲರನ್ನು ಕರೆದುಕೊಂಡೇ ಕನ್ನಡದ ತೇರನ್ನು ಎಳೆಯುತ್ತೇನೆ. ನನಗೆ ಜಾತಿ ಬೇಧ ಮಾಡೋದು ಗೊತ್ತಿಲ್ಲ. ನೇರವಾಗಿ ಮಾತನಾಡುವ ಸ್ವಭಾವ ನನ್ನದು. ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಸಿಗದವರಿಗೆ ಅವಕಾಶ ಕೊಡಿಸಲೆಂದು ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದವನು. ಸಧ್ಯ ತಾಲೂಕಿನ ಕನ್ನಡದ ತೇರನ್ನು ಎಳೆಯುವ ಅವಕಾಶ ಸಿಕ್ಕಿರೋದು ನನ್ನ ಪುಣ್ಯ. ನನಗೆ ಅವಕಾಶ ಇದೆ ಅಂತಾ ನಿಮ್ಮೆಲ್ಲರ ಅಪ್ಪಣೆ ಇಲ್ಲದೆ ನಾನು ಮುಂದೆ ಸಾಗೊಲ್ಲ. ನಿಮ್ಮ ಏನೇ ಸಲಹೆಗಳಿದ್ದರೂ ನನ್ನ ಜೊತೆ ಮುಕ್ತವಾಗಿ ಹಂಚಿಕೊಳ್ಳಿ ಎಂದರು.
ಹಿರಿಯ ಸಾಹಿತಿಗಳ ಮಾರ್ಗದರ್ಶನ ನನಗೆ ಅತ್ಯವಶ್ಯ. ಇಲ್ಲಿಯವರೆಗೆ ತೆರೆ ಮರೆಯಲ್ಲಿರುವ ಸಾಹಿತಿಗಳನ್ನು ಬೆಳಕಿಗೆ ತರೋದು ನನ್ನ ಕರ್ತವ್ಯ. ನಿಂತ ದತ್ತಿಗಳನ್ನು ವಾರಕ್ಕೆರಡರಂತೆ, ಉಳಿದ ತಾಲೂಕು ಸಮ್ಮೇಳನಗಳನ್ನ ಬಸರಕೋಡ, ತಂಗಡಗಿ ಭಾಗದಲ್ಲಿ ನಡೆಸಿಕೊಂಡು ಹೋಗೋಣ ಎಂದರು.
ಈ ವೇಳೆ ಹಿರಿಯ ಸಾಹಿತಿಗಳಾದ ಅಶೋಕ ಮಣಿ, ಪ್ರೊ.ಎಸ್.ಎಸ್.ಹೂಗಾರ, ಶಿವಪುತ್ರ ಅಜಮನಿ, ಐ.ಬಿ.ಹಿರೇಮಠ, ರುದ್ರೇಶ ಕಿತ್ತೂರ, ಎನ್.ಆರ್.ಮೊಕಾಶಿ ವಕೀಲರು, ಎಂ.ಎಂ.ಬೆಳಗಲ್ಲ, ಶಿಕ್ಷಕ ಎಚ್.ಆರ್.ಬಾಗವಾನ ಸಾಹಿತಿಗಳಾದ ಸಿದ್ದನಗೌಡ ಬಿಜ್ಜೂರ, ಪ್ರಭು ರಾರೆಡ್ಡಿ, ಪರಶುರಾಮ ಚೌಡಕೇರ, ಬಸವರಾಜ ನಾಗೂರ, ಸಿದ್ದಣ್ಣ ಹಡಲಗೇರಿ, ಮಕ್ತುಮಸಾಬ ಹಾಲ್ಯಾಳ, ಪತ್ರಕರ್ತ ಪರಶುರಾಮ ಕೊಣ್ಣೂರ ಮತ್ತೀತರರು ಮಾತನಾಡಿ ನಮ್ಮ ತಾಲೂಕಿನ ಕನ್ನಡದ ರಥವನ್ನು ಎಳೆಯುವ ಅದೃಷ್ಟ ಕ್ರಿಯಾಶೀಲ ವ್ಯಕ್ತಿಗೆ ಲಭಿಸಿರೋದು ಸಂತಸ ತಂದಿದೆ. ನಮ್ಮೂರು ಪ್ರತೀ ಕ್ಷೇತ್ರದಲ್ಲೂ ಏನೇ ಮಾಡಿದರೂ ಒಂದು ವಿಶಿಷ್ಟತೆಯನ್ನು ನಾಡಿಗೆ ಕೊಡುತ್ತೆ. ಇದು ಸಾಕಷ್ಟು ಬಾರಿ ಸಾಬೀತಾಗಿದೆ. ಎಲ್ಲ ಸಾಹಿತಿಗಳ, ಸಾಹಿತ್ಯಾಸಕ್ತರ, ಕನ್ನಡಾಭಿಮಾನಿಗಳ ಅನುಭವಗಳನ್ನು ಪಡೆದು ಕನ್ನಡದ ತೇರನ್ನು ಎಳೆಯಲು ಮುಂದಾಗಿರುವ ಅಧ್ಯಕ್ಷರು ಖಂಡಿತವಾಗಲೂ ಯಶಸ್ವಿಯಾಗುತ್ತಾರೆ ಎಂದರು.
ಈ ವೇಳೆ ಪ್ರಶಾಂತ ಕಾಳೆ, ಬಸಲಿಂಗಪ್ಪಣ್ಣ ರಕ್ಕಸಗಿ, ಎ.ಆರ್.ಮುಲ್ಲಾ, ಎಸ್.ಎಸ್.ಹುನಗುಂದ, ಬಿ.ವಿ.ಕೋರಿ, ಸದಾಶಿವ ಮಠ, ರಂಜಾನ ನದಾಫ್, ವಾಯ್.ಎಚ್.ವಿಜಯಕರ ಸೇರಿದಂತೆ ಮತ್ತೀತರರು ಇದ್ದರು.

” ಕಳೆದ ಎರಡು ಚುನಾವಣೆಗಳಲ್ಲಿ ಸಮಾನ ಮನಸ್ಕ ಸಾಹಿತಿಗಳು ಗುಂಪು ಕಟ್ಟಿ ಹೋರಾಡಿದ್ದೆವು. ಸಧ್ಯ ನಮ್ಮ ಗುಂಪಿನ ಸದಸ್ಯರೊಬ್ಬರು ತಾಲೂಕಿನ ಚುಕ್ಕಾಣಿ ಹಿಡಿದಿದ್ದು ಸಂತಸ ತಂದಿದೆ. ಅಧ್ಯಕ್ಷರು ನೀಡಿದ ಕೆಲಸಗಳನ್ನು ನಾವು ತನು, ಮನ, ಧನದಿಂದ ಮಾಡಲು ಸಿದ್ಧರಿದ್ದೇವೆ.”

– ಅಶೋಕ ಮಣಿ, ಹಿರಿಯ ಸಾಹಿತಿ

” ನಿರ್ಲಕ್ಷಕ್ಕೊಳಗಾದ ಸಾಹಿತಿಗಳನ್ನು ಹೊರತರಬೇಕು ಎಂದು ಹೋರಾಟ ಮಾಡಿದವರೇ ಇಂದು ಪರಿಷತ್ತಿನ ಚುಕ್ಕಾಣಿ ಹಿಡಿದಿರೋದು ನಿರ್ಲಕ್ಷಕ್ಕೊಳಗಾದ ಸಾಹಿತಿಗಳಿಗೆ ರೆಕ್ಕೆ ಪುಕ್ಕಗಳು ಬಂದಂತಾಗಿದೆ.”

– ಪ್ರೊ.ಐ.ಬಿ.ಹಿರೇಮಠ, ಹಿರಿಯ ಸಾಹಿತಿ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.