ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಲಕ್ಷ್ಮೀ ಹುಬ್ಬಳ್ಳಿ ಕಾಣೆಯಾಗಿರುವ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ನಾಗರಬೆಟ್ಟ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಮೇಲ್ವಿಚಾರಕಿ ಅಂತಾ ಸೇವೆಯಲ್ಲಿದ್ದಳು. ಶಾಲೆಗೆ ಹೋಗಿ ಬರುತ್ತೇನೆ ಅಂತಾ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ ಎಂದು ಈಕೆಯ ಸಹೋದರ ಪ್ರಭು ಚಲವಾದಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಎತ್ತರಕ್ಕೆ ೫ಫೂಟ್ ೨ಇಂಚು, ದುಂಡುಮುಖ, ಸಾದಾರಣ ದಪ್ಪ, ಸಾದಗಪ್ಪು ಬಣ್ಣ, ಕನ್ನಡ ಭಾಷೆ ಮಾತನಾಡುವ ಇವಳು ಎಲ್ಲಿಯಾದರೂ ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ೦೮೩೫೬-೨೨೦೩೩೩ ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

