ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಭವಿಷ್ಯ
ವಿಜಯಪುರ: ಸಂಗಮೇಶ ಬಬಲೇಶ್ವರ ಈ ನಾಡಿನ ಒಬ್ಬ ಸೃಜನಶೀಲ ಯುವ ನಾಯಕನಾಗಿದ್ದು, ಅವರಂಥ ಅತ್ಯುತ್ತಮ ವಾಗ್ಮಿ, ವಿದ್ಯಾವಂತ ವಿಧಾನ ಪರಿಷತ್ತಿನಲ್ಲಿ ಇರಬೇಕೆನ್ನುವುದು ಶ್ರೀಪೀಠದ ಆಶಯವಾಗಿತ್ತು. ಆದರೆ ಕರ್ನಾಟಕ ಘನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಚಿವರಾದ ಎಂ.ಬಿ ಪಾಟೀಲ, ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮಕ್ಕಳ ಬಗೆಗಿನ ಅವರ ಕಳಕಳಿಯನ್ನು ಗುರುತಿಸಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದು ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ ಎಂದು ಪಂಚಮಸಾಲಿ ಸಮುದಾಯದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.
ಭಾನುವಾರ ತಮಗೆ ಸನ್ಮಾನಿಸಿ ಆಶೀರ್ವಾದ ಪಡೆದ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ವಕ್ತಾರರೂ ಆಗಿರುವ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರನ್ನು ಸನ್ಮಾನಿಸಿ, ಆಶೀರ್ವದಿಸಿ ಅವರು ಮಾತನಾಡಿದರು.
ಸಂಗಮೇಶ ಬಬಲೇಶ್ವರ ಈ ನಾಡಿನ ಭವಿಷ್ಯದ ಯುವ ನಾಯಕರಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಎಂ.ಬಿ ಪಾಟೀಲರು ಮುಂಬರುವ ದಿನಗಳಲ್ಲಿ ಅತ್ಯುತ್ತಮ ವಾಗ್ಮಿಯಾಗಿರುವ ಸಂಗಮೇಶ ಅವರಿಗೆ ವಿಧಾನಪರಿಷತ್ತಿಗೆ ಅವಕಾಶ ಮಾಡಿಕೊಡಬೇಕೆನ್ನುವುದು ನಮ್ಮೆಲ್ಲರ ಅಪೇಕ್ಷೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಬಿ.ಎಸ್ ಬಿರಾದಾರ, ಮುಖಂಡರಾದ ಸೋಲಾಪುರ ಮೊದಲಾದವರು ಉಪಸ್ಥಿತರಿದ್ದರು.

