ಬಸವನಬಾಗೇವಾಡಿ: ನ್ಯಾಯಾಲಯಗಳಲ್ಲಿ ನಡೆಯುವ ರಾಷ್ಟ್ರೀಯ ಲೋಕಅದಾಲತ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಕರಣಗಳನ್ನು ಮುಗಿಸಿಕೊಂಡರೆ ಕಕ್ಷಿಗಾರರಲ್ಲಿ ಸಾಮರಸ್ಯ ಭಾವನೆ ಉಂಟಾಗಿ ಮುಂದಿನ ದಿನಗಳಲ್ಲಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶೆ ತಯ್ಯಾಬ ಸುಲ್ತಾನ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕ ಅದಾಲತ್ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ವಕೀಲರ ಮತ್ತು ಕಕ್ಷಿದಾರರ ಸಹಕಾರ ಬಹಳಷ್ಟು ಮುಖ್ಯವಾಗಿದೆ. ಲೋಕಅದಾಲತ್ ಮಹತ್ವದ ಕುರಿತು ಕಕ್ಷಿದಾರರಿಗೆ ಅರಿವು ಮೂಡಿಸುವದು ತುಂಬಾ ಅಗತ್ಯವಾಗಿದೆ ಎಂದರು.
ಇಂದು ಜರುಗಿದ ರಾಷ್ಟ್ರೀಯ ಲೋಕಅದಾಲತ್ದಲ್ಲಿ ಮೂವರು ನ್ಯಾಯಾಧೀಶರು ವಿವಿಧ ಒಟ್ಟು ೨,೫೧೮ ಪ್ರಕರಣಗಳನ್ನು ಕೈಗೆತ್ತಿಕೊಂಡು ಇದರಲ್ಲಿ ೧,೪೯೫ ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ. ೧೦,೬೯೯,೨೬೯ ಹಣವನ್ನು ಸೆಂಟಲ್ಮೆಂಟ್ ಮಾಡಿದರು.
ಹಿರಿಯ ಸಿವ್ಹಿಲ್ ನ್ಯಾಯಾಧೀಶೆ ತಯ್ಯಾಬ ಸುಲ್ತಾನ ಅವರು ಒಟ್ಟು ೬೯೩ ಪ್ರಕರಣಗಳನ್ನು ಕೈಗೆತ್ತಿಕೊಂಡು ೪೪೦ ಪ್ರಕರಣಗಳನ್ನು ಇತ್ಯರ್ಥಪಡಿಸಿ ೩೪,೯೮೦೦೦ ರೂ. ಸೆಂಟಲ್ಮೆಂಟ್ ಮಾಡಿದರೆ, ೬೯೩ ಪ್ರಕರಣಗಳನ್ನು ಕೈಗೆತ್ತಿಕೊಂಡು ೪೧೦ ಪ್ರಕರಣಗಳನ್ನು ಇತ್ಯರ್ಥಪಡಿಸಿ ೫೧,೪೭,೮೦೦ ರೂ. ಸೆಂಟಲ್ಮೆಂಟಲ್ ಮಾಡಿದರು.
ಸಿವ್ಹಿಲ್ ನ್ಯಾಯಾಧೀಶೆ ತೇಜಶ್ವಿನಿ ಸೊಗಲದ ಅವರು ಒಟ್ಟು ೬೩೬ ಪ್ರಕರಣಗಳನ್ನು ಕೈಗೆತ್ತಿಕೊಂಡು ೨೩೫ ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ. ೨೦,೩೪,೨೧೯ ಸೆಂಟಲ್ಮೆಂಟ್ ಮಾಡಿದರು. ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ ಅವರು ೪೯೬ ಪ್ರಕರಣಗಳನ್ನು ಕೈಗೆತ್ತಿಕೊಂಡು ಅದರಲ್ಲಿ ೪೧೦ ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ. ೧೯,೨೫೦ ಸೆಂಟಲ್ಮೆಂಟಲ್ ಮಾಡಿದರು.
ರಾಷ್ಟ್ರೀಯ ಲೋಕಅದಾಲತ್ದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಡಿ.ಎಸ್.ಬಳ್ಳೊಳ್ಳಿ, ರಾಜರಾಜೇಶ್ವರಿ ಸುತಾರ, ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ಕಾರ್ಯದರ್ಶಿ ರವಿ ರಾಠೋಡ,ಅಪರ ಸರ್ಕಾರಿ ವಕೀಲ ಎಸ್.ಎಸ್.ಬಶೆಟ್ಟಿ, ವ್ಹಿ.ಬಿ.ಮರ್ತುರ, ಬಿ.ಕೆ.ಕಲ್ಲೂರ, ಬಿ.ಆರ್.ಅಡ್ಡೋಡಗಿ, ಎನ್.ಎಸ್.ಪಾಟೀಲ, ಎಂ.ಎಸ್.ಬಿದರಕುಂದಿ, ಎಸ್.ಎಲ್.ಲಮಾಣಿ, ಎಸ್.ಎಸ್.ಕೋಳೂರು, ಸುರೇಶ ಚಿಂಚೋಳ್ಳಿ, ಐ.ಎ.ಪರಮಗೊಂಡ, ರಾಜು ಅಡ್ಡೋಡಗಿ, ಆರ್.ಬಿ.ಗಣಕುಮಾರ, ಎಸ್.ಎ.ಯರನಾಳ, ಎಂ.ಎಸ್.ಗೊಳಸಂಗಿ, ಜಿ.ಜಿ.ಬಿಸನಾಳ, ಜಿ.ಬಿ.ಬಾಗೇವಾಡಿ, ವೈ.ಎಂ.ಆನಂದಶೆಟ್ಟಿ, ಬಿ.ಪಿ.ಪತ್ತಾರ, ಎಂ.ಎ.ಯರನಾಳ, ಶಿಲ್ಪಾ ಮುಚಖಂಡಿ, ಜಿ.ಆರ್.ಬೀಳಗಿ, ವ್ಹಿ.ಜಿ.ಕುಲಕರ್ಣಿ, ಎಸ್.ಎಂ.ಗಬ್ಬೂರ, ಎ.ಸಿ.ಚಿಕ್ಕೊಂಡ, ಡಿ.ಎಸ್.ಪವಾರ, ಆರ್.ಎಸ್.ಪವಾರ, ಎಸ್.ಪಿ.ಲಮಾಣಿ, ಎನ್.ಎಸ್.ಬಿರಾದಾರ, ಎಸ್.ಎಸ್.ಹೆಗಡಿಹಾಳ, ಆರ್.ಡಿ.ಜಾಧವ, ಬಿ.ಬಿ.ಬಿರಾದಾರ, ಬಿ.ಎ.ಪಾಟೀಲ, ಬಿ.ಬಿ.ಚವ್ಹಾಣ ಸೇರಿದಂತೆ ಅನೇಕ ವಕೀಲರು ಕಕ್ಷಿದಾರರ ಪರವಾಗಿ ವಕಾಲತ್ತು ವಹಿಸಿದ್ದರು.
Subscribe to Updates
Get the latest creative news from FooBar about art, design and business.
ಲೋಕಅದಾಲತ್ ದಿಂದ ಪಕ್ಷಗಾರರಲ್ಲಿ ಸಾಮರಸ್ಯ ಸಾಧ್ಯ :ನ್ಯಾ.ಸುಲ್ತಾನ
Related Posts
Add A Comment

