ಚಡಚಣ: ಪಟ್ಟಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಚುನಾವಣೆಯ ಮುಖಾಂತರ ಮಹಾವಿದ್ಯಾಲಯದ ಪ್ರದಾನ ಕಾರ್ಯದರ್ಶಿ ಮತ್ತು ವರ್ಗ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ, ಮುಂದಿನ ವರ್ಷ ೧೮ ವರ್ಷ ತುಂಬಿ ದೇಶದ ಚುನಾವಣೆಗೆ ಮತ ಚಲಾಯಿಸಲು ಸಿದ್ದರಾಗುತ್ತಿರುವ ಯುವ ಪಿಳಿಗೆಗೆ ಚುನಾವಣೆಯ ಕುರಿತು ಅರಿವು ಮೂಡಿಸುವದು ಈ ಚುನಾವಣೆಯ ಉದ್ದೇಶವಾಗಿದೆ ಎಂದು ಹೇಳಿದರು.
ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ನಾಮ ಪತ್ರ ಸಲ್ಲಿಕೆ, ನಾಮ ಪತ್ರ ಹಿಂತಗೆಯುವದು, ಚುನಾವಣೆಯ ಪ್ರಚಾರ ಮತ್ತು ಬ್ಯಾಲೆಟ್ ಮುಖಾಂತರ ಮತ ಚಲಾಯಿಸಿ ಯಾವ ರೀತಿ ಚುನಾವಣೆಗಳು ನಡೆಯುತ್ತವೆ ಎನ್ನವು ಅರಿವು ಮೂಡಿಸಲಾಯಿತು.
ಮಹಾವಿದ್ಯಾಲಯದ ಉಪನ್ಯಾಸಕರು ಚುನಾವಣಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಿದರು. ವಿದ್ಯಾರ್ಥಿಗಳು ಅತ್ಯಂತ ಸಂತೋಷದಿಂದ ಮತ ಚಲಾಯಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆಮಾಡಿದರು. ದ್ವಿತೀಯ ವರ್ಷದ ವಿದ್ಯಾರ್ಥಿ ಎಚ್.ಎ.ದರ್ಶನಾಳ ಮಹಾವಿದ್ಯಾಲಯದ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಯಾದನು. ವರ್ಗ ಪ್ರತಿನಿಧಿಗಳಾಗಿ ವಿಜ್ಞಾನ ವಿಭಾಗದ ಕುಮಾರ ಮಾನೆ ಮತ್ತು ಕುಮಾರಿ ಕುಲಕರ್ಣಿ ವಾಣಿಜ್ಯ ವಿಭಾಗದ ಕುಮಾರಿ ತಾಳಿಕೋಟಿ ಮತ್ತು ಕುಮಾರ ರಿಯಾಜ ಶೇಖ, ಕಲಾ ವಿಭಾಗದಿಂದ ಲಕ್ಷಿಣ ಬಿರಾದಾರ ಆಯ್ಕೆಯಾದರು.
Subscribe to Updates
Get the latest creative news from FooBar about art, design and business.
Related Posts
Add A Comment

