Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅಲಾಬ ದೇವರ ಡೋಲಿ ಮೆರವಣಿಗೆ | ಮೊಹರಂ ಹಬ್ಬದ ಕೊನೆಯ ದಿನದ ಸಂಭ್ರಮ ಚಿಮ್ಮಡ: ತ್ಯಾಗ ಭಾವ್ಯೆಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಗ್ರಾಮದಲ್ಲಿ ಬುಧವಾರದಂದು ಲೇಝಿಮ್ ಉತ್ಸವ, ಡೋಲಿ ಮೆರವಣಿಗೆಯೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು.ಕಳೆದ ಐದು ದಿನಗಳಿಂದ ಗ್ರಾಮದ ಜಾಮಿಯಾ ಮಸೀದಿ ಹಾಗೂ ಗ್ರಾಮ ಚಾವಡಿ ಪಕ್ಕದ ಅಂಚೆ ಕಛೇರಿಯಲ್ಲಿ ಪ್ರತಿಸ್ಥಾಪಿಸಲಾಗಿದ್ದ ಲಾಲಸಾಬಲಿ ಹಾಗೂ ಹುಸೇನಬಾಷ ದೇವರುಗಳಿಗೆ ಪ್ರತಿನಿತ್ಯ ವಿಶೇಷ ಪೂಜೆ ನೆರವೇರಿಸಲಾಯಿತು.ಸಾಥವಿ ಪೂಜೆ, ಗಂಧರಾತ್ರಿ ನಡೆಯುವ ವಿಶೇಷ ಪೂಜೆಗಳಲ್ಲಿ ಜಾತಿ ಮತಭೇದವಿಲ್ಲದೆ ಸರ್ವಧರ್ಮಿಯರು ಪಾಲ್ಗೋಂಡು ತಮ್ಮ ಭಕ್ತಿಗನುಸಾರವಾಗಿ ಹರಕೆ ತೀರಿಸಿದರು. ಮಂಗಳವಾರ ರಾತ್ರಿ ಕರ್ಬಲಾ ನಿಮಿತ್ಯ ರಾತ್ರಿಯಿಡಿ ಉಪ್ಪಲದಿನ್ನಿಯ ಶಾಲು ಮುಲ್ಲಾ ನೇತ್ರತ್ವದ ರಿವಾಯತ್ ತಂಡ ಹಾಗೂ ಸ್ಥಳೀಯ ತಂಡಗಳಿಂದ ಮೊಹರಂ ಪದಗಳ ಗೀತಗಾಯನ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು. ಹಬ್ಬದ ಕೊಣೆಯದಿನವಾದ ಬುಧವಾರ ದೇವರನ್ನು ವಿಸರ್ಜಿಸಲು ಹೊಳೆಗೆ ಒಯ್ಯುವ ಮುಂಚೆ ನಡೆಯುವ ಡೋಲಿ ಉತ್ಸವದಲ್ಲಿ ಸಾವಿರಾರು ಜನ ರೈತರು, ಗ್ರಾಮಸ್ಥರು ದೇವರುಗಳಿಗೆ ಬೆತ್ತಾಸು, ಖಾರಿಕ ಗಳನ್ನು ಎಸೆಯುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು.…
ಆಲಮಟ್ಟಿ: ಅಪಾರ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿರುವ ಕಾರಣ ಆಲಮಟ್ಟಿ ಜಲಾಶಯದಿಂದ ೧೪ ಗೇಟ್ ಗಳ ಮೂಲಕ ೨೫,೦೦೦ ಕ್ಯುಸೆಕ್ ಹಾಗೂ ವಿದ್ಯುತ್ ಘಟಕಗಳ ಮೂಲಕ ೪೦,೦೦೦ ಕ್ಯುಸೆಕ್ ಸೇರಿ ೬೫,೦೦೦ ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹೊರಬಿಡಲಾಗುತ್ತಿದೆ.ಬೆಳಿಗ್ಗೆ ೪೦,೦೦೦ ಕ್ಯುಸೆಕ್ ನೀರು ಬಿಡಲಾಗುತ್ತಿತ್ತು, ಸಂಜೆ ಅದನ್ನು ೬೫,೦೦೦ ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ.ಮಹಾರಾಷ್ಟçದಲ್ಲಿ ಕಳೆದೆರೆಡು ದಿನಗಳಿಂದ ಸುರಿದ ಮಳೆಯ ಕಾರಣ ಮಂಗಳವಾರ ಸಂಜೆ ಆಲಮಟ್ಟಿ ಜಲಾಶಯದ ಒಳಹರಿವು ಒಂದು ಲಕ್ಷ ಕ್ಯುಸೆಕ್ ಗೆ ಬಂದು ತಲುಪಿದೆ.ರಾತ್ರಿ ಒಳಹರಿವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇದು ತಾತ್ಕಾಲಿಕ ಏರಿಕೆ, ಬುಧವಾರ ಒಳಹರಿವು ಕಡಿಮೆಯಾಗಲಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದರು.ಮಂಗಳವಾರ ಬೆಳಿಗ್ಗೆಯಿಂದ ಜಲಾಶಯದ ಮುಂಭಾಗದ ಕೃಷ್ಣಾ ತೀರದ ಗ್ರಾಮಗಳಾದ ಅರಳದಿನ್ನಿ, ಯಲಗೂರು ಸೇರಿದಂತೆ ನಾನಾ ಗ್ರಾಮಗಳಿಗೆ ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾಡಗಿ ಭೇಟಿ ನೀಡಿದರು.೨೭೦ ಮೆಗಾವಾಟ್ ವಿದ್ಯುತ್ ಉತ್ಪಾದನೆ;ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ ೪೦,೦೦೦ ಕ್ಯುಸೆಕ್ ನೀರು ಬಿಟ್ಟ ಕಾರಣ ಎಲ್ಲಾ…
ಆಲಮಟ್ಟಿ: ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಹಿನ್ನಲೆಯಲ್ಲಿ ೧೭ ರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ಕಾಲುವೆಗಳಿಗೂ ನೀರು ಹರಿಸಲು ನೀರಾವರಿ ಸಲಹಾ ಸಮಿತಿ (ಐಸಿಸಿ) ನಿರ್ಣಯಿಸಿದೆ.ಬೆಂಗಳೂರಿನ ವಿಕಾಸಸೌಧದಲ್ಲಿ ಮಂಗಳವಾರ ಸಂಜೆ ಐಸಿಸಿ ಅಧ್ಯಕ್ಷರೂ ಆದ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಂಗಾರು ಹಂಗಾಮಿಗೆ ನವ್ಹಂಬರ್ ೧೩ ರವರಗೆ ಒಟ್ಟು ೧೨೦ ದಿನಗಳ ಕಾಲ ನೀರು ಹರಿಸಲು ಸಭೆ ನಿರ್ಣಯಿಸಿದೆ. ಜಲಾಶಯಕ್ಕೆ ಒಳಹರಿವು ಇರುವಾಗ ಪ್ರತಿನಿತ್ಯ ನೀರು ಹರಿಸುವುದು, ಒಳಹರಿವು ಸ್ಥಗಿತಗೊಂಡ ಮೇಲೆ ೧೪ ದಿನ ಚಾಲು ೧೦ ದಿನ ಬಂದ್ ಅವಧಿಯ ವಾರಾಬಂಧಿ ಅನುಸರಿಸಲು ಸಭೆ ನಿರ್ಣಯಿಸಿದೆ.ಆಲಮಟ್ಟಿ ಹಾಗೂ ನಾರಾಯಣಪುರ ಸೇರಿ ೮೭.೭೬ ಟಿಎಂಸಿ ಅಡಿ ಜೀವ ಜಲ (ಲೈವ್ ಸ್ಟೋರೇಜ್ ) ನೀರಿದೆ. ಎರಡೂ ಜಲಾಶಯಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿಗಾಗಿ ೬೭ ಟಿಎಂಸಿ ಅಡಿ ನೀರು ಅಗತ್ಯ. ಅಷ್ಟು ಪ್ರಮಾಣದ ನೀರು ಜಲಾಶಯಗಳಲ್ಲಿ ಸಂಗ್ರಹವಿದ್ದು, ಮುಂಗಾರು ಹಂಗಾಮಿಗೆ ನೀರು ಪೂರೈಸಲಾಗುತ್ತದೆ. ಯುಕೆಪಿಯಡಿ…
ಸಿಂದಗಿ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಜು.೧೮ ಗುರುವಾರ ಮಧ್ಯಾಹ್ನ ೩ಗಂಟೆಗೆ ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ನೂತನ ಸಂಸದರಾಗಿ ಆಯ್ಕೆಯಾದ ಕೇಂದ್ರದ ಮಾಜಿ ಸಚಿವ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಸನ್ಮಾನ ಸಮಾರಂಭ ಹಾಗೂ ಮಂಡಲ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿದೆ.ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ, ಸಂಸದ ರಮೇಶ ಜಿಗಜಿಣಗಿ, ಮಾಜಿ ಶಾಸಕ ರಮೇಶ ಭೂಸನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಜಿಲ್ಲಾ ಮುಖಂಡರು ಹಾಗೂ ಜಿಲ್ಲೆಯ ಮಂಡಲದ ಪ್ರಮುಖರು ಆಗಮಿಸುತ್ತಿದ್ದಾರೆ.ಕಾರಣ ಈ ಸನ್ಮಾನ ಸಮಾರಂಭ ಹಾಗೂ ಕಾರ್ಯಕಾರಿಣಿ ಸಭೆಯಲ್ಲಿ ತಾಲೂಕಿನ ಬಿಜೆಪಿ ಮಂಡಲದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಮಹಿಳಾ ಕಾರ್ಯಕರ್ತೆಯರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ತಿಳಿಸಿದ್ದಾರೆ.
ಸಿಂದಗಿ: ಪಟ್ಟಣದ ನಿವಾಸಿ ಸಚಿನ ಚೌರ ಅವರನ್ನು ದಲಿತರ, ರೈತರ, ಕಾರ್ಮಿಕರ, ಮಹಿಳೆಯರ, ವಿಧ್ಯಾರ್ಥಿಗಳ ಹಾಗೂ ಸಮಗ್ರ ನಾಡಿನ ಸಮಸ್ಯೆಗಳಿಗೆ ಸ್ಪಂದಿಸುತ್ತ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಕರ್ನಾಟಕ ಭೀಮ್ ಸೇನೆ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ನಾಡಪರ ಸಮಸ್ಯೆಗಳಿಗೆ ಸ್ಪಂದಿಸುತ್ತ ತಮ್ಮ ನಾಯಕತ್ವದ ಸೇವೆಯನ್ನು ವಹಿಸಿಕೊಂಡು ಬುದ್ಧ, ಬಸವ ಅಂಬೇಡ್ಕರ ಅವರ ತತ್ವ ಸಿದ್ಧಾಂತಗಳಲ್ಲಿ ನಡೆದು ಭೀಮ್ ಸೇನೆಯ ಸಿದ್ಧಾಂತಗಳನ್ನು ಪಾಲಿಸಲು ಸೂಚಿಸಿ ಕರ್ನಾಟಕ ಭೀಮ್ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ ರಾಮಲಿಂಗಯ್ಯ, ರಾಜ್ಯ ಕಾರ್ಯಾಧ್ಯಕ್ಷ ದೇವಿಕುಮಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಮಂಜುನಾಥ ಪತ್ರಿಕಾ ಪ್ರಕಟಣೆಯ ಮೂಲಕ ತಿಳಸಿದ್ದಾರೆ.
ಚಿಕ್ಕಪಡಸಲಗಿ: ಸುದೀರ್ಘ ೩೯ ವರ್ಷಗಳ ಕಾಲ ಉತ್ತಮ ಸೇವೆಗೈದು ಈಚೆಗೆ ಸೇವಾ ನಿವೃತ್ತಿ ಹೊಂದಿರುವ ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ ಅಪಾರ ಮಕ್ಕಳ ಪ್ರೀತಿಗೆ, ಜನತೆಯ ಒಲವಿಗೆ ಪಾತ್ರರಾಗಿ ಮಿನುಗಿದ್ದಾರೆ ಎಂದು ಅತಿಥಿ ಶಿಕ್ಷಕರಾಗಿ ಈ ಹಿಂದೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ನಾಗನೂರ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವಿಜಯಕುಮಾರ್ ಸಂಗೊಂದಿಮಠ ನುಡಿದರು. ವಯೋನಿವೃತ್ತಿ ಹೊಂದಿದ ಪ್ರಯುಕ್ತ ಜಮಖಂಡಿ ಸ್ವಗ್ರಹದಲ್ಲಿ ಬಸವರಾಜ ಅನಂತಪುರ, ಶ್ರೀಮತಿ ಲಕ್ಷ್ಮೀ ಅನಂತಪುರ ದಂಪತಿಗಳನ್ನು ಶಾಲು ಹೊದಿಸಿ ಸನ್ಮಾನಿಸಿ ಅವರು ಮಾತನಾಡಿದರು. ಎಲ್ಲರ ಪ್ರಶಂಸೆಗೆ ಪಾತ್ರರಾಗಿ ಈ ಶಿಕ್ಷಣ ಸಂಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾಭಾವದ ಕಾರ್ಯವೈಖರಿ ಅನುಪಮವಾಗಿದೆ.ಆದರ್ಶತೆಗೆ ಹೆಸರುವಾಸಿಯಾಗಿದೆ. ಸೇವೆಯನ್ನು ನಿಷ್ಠೆ,ಭಕ್ತಿ ಪಂಥದ ಮಾರ್ಗದಲ್ಲಿ ವ್ಯವಸ್ಥಿತ ರೀತಿಯಲ್ಲಿ ಸಾಗಿಸಿ ಸೇವಾಭಾವದ ಸಂಪನ್ನತೆ ಕಂಡುಕೊಂಡಿದ್ದಾರೆ. ಉತ್ತಮವಾದ ಮಾದರಿಯುತ ನಿಸ್ವಾರ್ಥ ಶಿಕ್ಷಕ ವೃತ್ತಿ ಸೇವೆ ಸಲ್ಲಿಸಿ ತಮ್ಮ ಕಾರ್ಯತತ್ಪರತೆಯಿಂದ ಅನಂತಪುರ ಗುರುಗಳು ಗುರುತಿಸಿಕೊಂಡಿದ್ದಾರೆಂದು…
ವಿಜಯಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ ಹಾಗೂ ಎಸ್ಪಿ ಋಷಿಕೇಶ ಸೋನಾವಣೆ ಮಂಗಳವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ, ಕ್ರೀಡಾಂಗಣದಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಲ್ಲಿ ವಿವಿಧ ಕ್ರೀಡಾ ಅಸೋಶಿಯೇಸನ್ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು.ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಅಸೋಶಿಯೇಷನ್ ಪದಾಧಿಕಾರಿ ವಿವರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು, ವಾಲಿಬಾಲ್ ಗ್ರೌಂಡಗೆ ಪೆಡ್‌ಲೈಟ್ ಮಾಡಿಕೊಡಲಾಗುವುದು, ವೇಟ್ ಲಿಫ್ಟಿಂಗ್ ರೂಮ್ ಸೇರಿದಂತೆ ಎಲ್ಲ ಸಾಮಗ್ರಿಗಳನ್ನು ಪೂರೈಸಲಾಗುವುದು, ಜೋಡೋ ಸೇರಿದಂತೆ ಕುಸ್ತಿ ಗರಡಿಮನೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ವಾಲಿಬಾಲ್ ಅಸೋಶಿಯೇಶನ್ ಅಧ್ಯಕ್ಷ ಬಿ.ಎಂ.ಕೋಕರೆ, ಪುಟಬಾಲ್ ಅಸೋಶಿಯೇಷನ್ ಅಧ್ಯಕ್ಷ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವೇಟ್ ಲಿಪ್ಟಿಂಗ್ ಅಧ್ಯಕ್ಷ ದಾದಾಸಾಹೇಬ ಬಾಗಾಯತ, ಹಾಕಿ ಅಸೋಶಿಯೇಶನ್ ಅಧ್ಯಕ್ಷ ಎಸ್.ಕೆ.ಇನಾಂದಾರ, ಅಥ್ಲೇಟಿಕ್ಸ್ ಎಸ್.ಎಸ್.ಹಿರೇಮಠ, ಸ್ವಿಮ್ಮಿಂಗ್ ಅಸೋಶೀಯೇಶನ್ ಕಾರ್ಯದರ್ಶಿ ಚಂದ್ರಕಾಂತ ತಾರನಾಳ, ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ…
ವಿಜಯಪುರ: ಶ್ರೀ ಮುರಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ (ಎಸ್.ಎಂ.ಎನ್) ದಲ್ಲಿ ವಿವಿಧ ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ತೊಡಗಿಸಿ ವಂಚನೆಗೊಳಗಾದ ಗ್ರಾಹಕರಿಗೆ ಹಣ ಮರುಪಾವತಿಸಲು ಬೆಂಗಳೂರಿನ ಸಹಾಯಕ ಪ್ರಾದೇಶಿಕ ಆಯುಕ್ತರು ಹಾಗೂ ಎಸ್.ಎಂ.ಎನ್. ಸೌಹಾರ್ದದ ಸಕ್ಷಮ ಪ್ರಾಧಿಕಾರಿಯವರು ವಂಚಿತ ಠೇವಣಿದಾರರಿಗೆ ಕ್ಲೇಮ್‌ಗೆ ಅರ್ಜಿ ಸಲ್ಲಿಸಲು ೨೨-೦೭-೨೦೨೪ ರಿಂದ ೨೧-೦೮-೨೦೨೪ ರವರೆಗೆ ಒಂದು ತಿಂಗಳ ಕಾಲಾವಧಿ ನಿಗದಿಪಡಿಸಿದ್ದಾರೆ. ಆದ್ದರಿಂದ ನಿಗದಿತ ಸಮಯಕ್ಕೆ ತಮ್ಮಲ್ಲಿರುವ ದಾಖಲಾತಿಗಳನ್ನು ಸಕ್ಷಮ ಪ್ರಾಧಿಕಾರಿ ಅವರಿಗೆ ಕ್ಲೇಮ್ ಸಲ್ಲಿಸಬೇಕೆಂದು ರೈತ ಮುಖಂಡ ಹಾಗೂ ಎಸ್.ಎಂ.ಎನ್. ಸೌಹಾರ್ದ ಹೋರಾಟ ಸಮಿತಿಯ ಅಧ್ಯಕ್ಷ ಅರವಿಂದ ಕುಲಕರ್ಣಿ ಠೇವಣಿದಾರರಿಗೆ ಮನವಿ ಮಾಡಿಕೊಂಡಿದ್ದಾರೆ.ವಿಜಯಪುರದ ಗಗನಮಹಲದಲ್ಲಿ ವಂಚಿತ ಠೇವಣಿದಾರರ ಸಭೆಯನ್ನು ಕರೆದು ಮಾತನಾಡಿದ ಅವರು, ಕ್ಲೇಮ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹಲವಾರು ಮಾನದಂಡಗಳನ್ನು ಅಳವಡಿಸಿದ್ದು ಠೇವಣಿದಾರರಿಗೆ ಸಕ್ಷಮ ಪ್ರಾಧಿಕಾರಿಯವರು ಕೇಳಿದ ಮಾನದಂಡಗಳಲ್ಲಿ ಕೆಲವು ಮಾನದಂಡಗಳು ಪೂರೈಸಲು ಸಾಧ್ಯವಿಲ್ಲ. ನಾಮಿನಿ ಇದ್ದವರಿಗೆ ಒಂದು ಸಂದರ್ಭದಲ್ಲಿ ಡಿಪಾಜಿಟರ್ ಮೈತರಾದ್ದಲ್ಲಿ ನೇರವಾಗಿ ನಾಮಿನಿ ಇದ್ದವರಿಗೆ ಡಿಪಾಜಿಟ್ ಬಾಂಡ್ ಪಡೆದುಕೊಂಡು ನೇರವಾಗಿ ಅವರ…
ವಿಜಯಪುರ: ಪಂಚ ನದಿಗಳ ಜಿಲ್ಲೆಯಂದೆ ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಪ್ರತಿ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಹಾಕಿಸಿಕೊಳ್ಳುವುದು ತಪ್ಪುತ್ತಿಲ್ಲ, ರೈತ ಆತ್ಮಹತೈಗಳು ಕಡಿಮೆ ಆಗುತ್ತಿಲ್ಲ, ಆಲಿಮಟ್ಟಿ ಜಲಾಶಯದ ಎತ್ತರವನ್ನು ೫೨೪.೨೫೬ ಕ್ಕೆ ಎತ್ತರಿಸಿ ಇದರಿಂದ ನಷ್ಟಗೊಂಡ ಎಲ್ಲಾ ರೈತರಿಗೆ ಪರಿಹಾರ, ಪುರ್ನವಸತಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಏತ ನೀರಾವರಿ ಕಾಲುವೆಗಳಲ್ಲಿ ಕ್ಲೋಜರ್ ಕಾಮಗಾರಿ ಮಾಡದೇ ವರ್ಷಗಳೆ ಕಳೆದಿವೆ, ಡೋಣಿ ನದಿ ಹೂಳೆತ್ತವುದು, ಭೂಮಿ ಕಳೆದುಕೊಂಡ ರೈತರಿಗೆ ೧೦-೧೫ ವರ್ಷಗಳೇ ಕಳೆದರೂ ಇನ್ನು ಪರಿಹಾರ ಬಂದಿರುವುದಿಲ್ಲ, ಈ ಕುರಿತು ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಸಚಿವರುಗಳು ಧ್ವನಿ ಎತ್ತಿ ರೈತರ ಪರವಾಗಿ ನಿಲ್ಲಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಪತ್ರಿಕೆಯ ಮೂಲಕ ಆಗ್ರಹಿಸಿದರು.ಫಸಲ್ ಭೀಮಾ ಯೋಜನೆಯಲ್ಲಿ ಸಾಕಷ್ಟು ಅವ್ಯಹಾರಗಳು ನಡೆಯುತ್ತಿದ್ದರು ಯಾವೊಬ್ಬ ಜನಪ್ರತಿನಿಧಿಗಳು ಈ ಕುರಿತು ಬಾಯಿ ಬಿಚ್ಚುತ್ತಿಲ್ಲ, ವಿಫತ್ತು ನಿರ್ವಹಣಾ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರಕಾರ ಬರ ಪರಿಹಾರ ಹಾಕುವಲ್ಲಿ ಅನೇಕರಿಗೆ…
ಕಾಲ್ನಡಿಗೆಯಲ್ಲಿ ಬಂದ ಲಕ್ಷಾಂತರ ಭಕ್ತರು | ವಿಠ್ಠಲ-ರುಕ್ಮಿಣಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ – ಸಿದ್ರಾಮ ಮಾಳಿವಿಜಯಪುರ: ಮಹಾರಾಷ್ಟ್ರದಲ್ಲಿರುವ ಪವಿತ್ರ ತೀರ್ಥಕ್ಷೇತ್ರ ಪಂಢರಪುರದಲ್ಲಿ ಬುಧವಾರದಂದು ಆಷಾಢ ಏಕಾದಶಿಯ ಸಡಗರ ಮನೆ ಮಾಡಿತ್ತು. ವಿಠ್ಠಲನ ಅವತಾರದಲ್ಲಿ ನೆಲೆಸಿರುವ ವಿಷ್ಣುವಿನ ದರ್ಶನ ಪಡೆದು ಪಾದ ಸ್ಪರ್ಶಿಸಲು ದೇಶದ ವಿವಿಧ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು.ಸಂಪ್ರದಾಯದಂತೆ ಮಹಾರಾಷ್ಟ್ರ ಸರ್ಕಾರದ ಪ್ರಥಮ ಪೂಜೆಯನ್ನು ಮುಖ್ಯಮಂತ್ರಿ ಏಕನಾಥ ಶಿಂಧೆ ದಂಪತಿ ನೆರವೇರಿಸಿದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ರಾಜ್ಯಗಳ ಲಕ್ಷಾಂತರ ಭಕ್ತರು ಪಂಢರಪುರಕ್ಕೆ ಆಗಮಿಸಿ, ಇಲ್ಲಿನ ಚಂದ್ರಭಾಗ ನದಿಯಲ್ಲಿ ಸ್ನಾನ ಮಾಡಿ ವಿಠಲನ ದರ್ಶನ ಪಡೆದರು. ತುಳಸಿ ಮಾಲೆ ಧರಿಸಿದ ಸಂತರು, ತಲೆಯ ಮೇಲೆ ತುಳಸಿಕಟ್ಟೆ ಹೊತ್ತು, ಹೆಚ್ಚೆ ಹಾಕುತ್ತಾ ಕೈ ಕೈ ಹಿಡಿದುಕೊಂಡು ಕುಣಿದು ಸಂಭ್ರಮಿಸಿ ಪಂಢರಿನಾಥನಿಗೆ ಜೈಕಾರ ಹಾಕಿದರು.ಪಂಢರಪುರದ ಪ್ರಮುಖ ಬೀದಿಗಳಲ್ಲಿ ಸಂಜೆ ವಿಠಲ-ರುಕ್ಮಿಣಿ ಪಲ್ಲಕ್ಕಿ ಉತ್ಸವ ನಡೆಯಿತು. ಏಕಾದಶಿ ಅಂಗವಾಗಿ ವಾರಕಾರಿ ಸಪ್ತಾಹ ಜರುಗಿತು. ಅಭಂಗಗಳನ್ನು ಹಾಡುತ್ತಾ ಕುಣಿಯುತ್ತ ಭಜನೆ,…
