ವಿಜಯಪುರ: ಪಂಚ ನದಿಗಳ ಜಿಲ್ಲೆಯಂದೆ ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಪ್ರತಿ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಹಾಕಿಸಿಕೊಳ್ಳುವುದು ತಪ್ಪುತ್ತಿಲ್ಲ, ರೈತ ಆತ್ಮಹತೈಗಳು ಕಡಿಮೆ ಆಗುತ್ತಿಲ್ಲ, ಆಲಿಮಟ್ಟಿ ಜಲಾಶಯದ ಎತ್ತರವನ್ನು ೫೨೪.೨೫೬ ಕ್ಕೆ ಎತ್ತರಿಸಿ ಇದರಿಂದ ನಷ್ಟಗೊಂಡ ಎಲ್ಲಾ ರೈತರಿಗೆ ಪರಿಹಾರ, ಪುರ್ನವಸತಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಏತ ನೀರಾವರಿ ಕಾಲುವೆಗಳಲ್ಲಿ ಕ್ಲೋಜರ್ ಕಾಮಗಾರಿ ಮಾಡದೇ ವರ್ಷಗಳೆ ಕಳೆದಿವೆ, ಡೋಣಿ ನದಿ ಹೂಳೆತ್ತವುದು, ಭೂಮಿ ಕಳೆದುಕೊಂಡ ರೈತರಿಗೆ ೧೦-೧೫ ವರ್ಷಗಳೇ ಕಳೆದರೂ ಇನ್ನು ಪರಿಹಾರ ಬಂದಿರುವುದಿಲ್ಲ, ಈ ಕುರಿತು ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಸಚಿವರುಗಳು ಧ್ವನಿ ಎತ್ತಿ ರೈತರ ಪರವಾಗಿ ನಿಲ್ಲಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಪತ್ರಿಕೆಯ ಮೂಲಕ ಆಗ್ರಹಿಸಿದರು.
ಫಸಲ್ ಭೀಮಾ ಯೋಜನೆಯಲ್ಲಿ ಸಾಕಷ್ಟು ಅವ್ಯಹಾರಗಳು ನಡೆಯುತ್ತಿದ್ದರು ಯಾವೊಬ್ಬ ಜನಪ್ರತಿನಿಧಿಗಳು ಈ ಕುರಿತು ಬಾಯಿ ಬಿಚ್ಚುತ್ತಿಲ್ಲ, ವಿಫತ್ತು ನಿರ್ವಹಣಾ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರಕಾರ ಬರ ಪರಿಹಾರ ಹಾಕುವಲ್ಲಿ ಅನೇಕರಿಗೆ ಅನ್ಯಾಯವಾಗಿದೆ ಎಂದು ರೈತರೆಲ್ಲರೂ ಇಲಾಖೆಗಳಿಗೆ ಅಲೆದಾಡಿ ಸುಸ್ತಾದರೆ ಹೊರತು, ಅನೇಕರಿಗೆ ಪರಿಹಾರ ಬರದೇ ಹಿಡಿಶಾಪ ಹಾಕುತ್ತಿದ್ದರು ಕಂಡು ಕಾಣದಂತೆ ಕುಳಿತ ಜನಪ್ರತಿನಿಧಿಗಳು, ಅರ್ಧ ವರ್ಷ ಕಳೆದರೂ ಜಿಲ್ಲೆಯ ಕೆಲ ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಬಿಲ್ ಸುಮಾರು ೧೦೦ ಕೋಟಿ ಬರದೇ ಪರಿತಪ್ಪಿಸುತ್ತಿರುವ ರೈತರ ಕಷ್ಟಕ್ಕೆ ಯಾರು ನಿಲ್ಲುತ್ತಿಲ್ಲ ಎಂಬುದೇ ಬೇಸರದ ವಿಷಯ
ಕಬ್ಬಿಗೆ ಸೂಕ್ತ ಬೆಂಬಲ ಬೆಲೆ, ತೋಟಗಾರಿಕಾ ಬೆಳೆಗಳಿಗೆ ವಿಶ್ವಪ್ರಸಿದ್ದಿ ಪಡೆದಿರುವ ದ್ರಾಕ್ಷಿ, ದಾಳಿಂಬೆ, ಲಿಂಬೆ, ಡ್ರ್ಯಾಗನ್ ಸೇರಿದಂತೆ ವಿವಿಧ ಬೆಳೆಗಳಿಗೆ ಪ್ರೋತ್ಸಾಹ ನೀಡಿ ಉಪ ಉತ್ಪನ್ನ ಮಾಡುವಂತೆ ಉತ್ತೆಜಿಸುವ ಯೋಜನೆ ಮಾಡಬೇಕಾಗಿದೆ, ಇನ್ನು ಮಳೆಯಾಶ್ರಿತ ಬೆಳೆಗಳಾದ ಜೋಳ, ಸಜ್ಜೆ, ತೊಗರಿ, ಹತ್ತಿ, ಸೆಂಗಾ ಕಡಲೆ ಸೇರಿದಂತೆ ಮೇಣಸಿನಕಾಯಿ, ಅಜೀವಾನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಅಕ್ಕಪಕ್ಕದ ಜಿಲ್ಲೆ ಹಾಗೂ ರಾಜ್ಯಗಳಿಗೆ ನಮ್ಮ ರೈತರು ಹಣ ಹಾಗೂ ಸಮಯವನ್ನು ಹಾಳುಮಾಡಿಕೊಳ್ಳುತ್ತಿರುವುದು ನಮ್ಮ ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲವೇ ಎನ್ನುವುದೇ ಒಂದು ಯಕ್ಷಪಶ್ನೆಯಾಗಿದೆ,
ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳ ಕುರಿತು ಈ ಬಾರಿಯಾದರೂ ನಮ್ಮ ಜಿಲ್ಲೆಯ ೮ ಶಾಸಕರು ಧ್ವನಿ ಎತ್ತಿ ನಮ್ಮ ರೈತ ಬಾಂಧವರನ್ನು ಉಳಿಸಿ ಬೆಳೆಸಬೇಕೆಂದು ಪತ್ರಿಕೆ ಮೂಲಕ ರೈತ ಸಂಘದಿಂದ ಆಗ್ರಹಿಸುತ್ತೇವೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

