ವಿಜಯಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ ಹಾಗೂ ಎಸ್ಪಿ ಋಷಿಕೇಶ ಸೋನಾವಣೆ ಮಂಗಳವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ, ಕ್ರೀಡಾಂಗಣದಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಲ್ಲಿ ವಿವಿಧ ಕ್ರೀಡಾ ಅಸೋಶಿಯೇಸನ್ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು.
ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಅಸೋಶಿಯೇಷನ್ ಪದಾಧಿಕಾರಿ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು, ವಾಲಿಬಾಲ್ ಗ್ರೌಂಡಗೆ ಪೆಡ್‌ಲೈಟ್ ಮಾಡಿಕೊಡಲಾಗುವುದು, ವೇಟ್ ಲಿಫ್ಟಿಂಗ್ ರೂಮ್ ಸೇರಿದಂತೆ ಎಲ್ಲ ಸಾಮಗ್ರಿಗಳನ್ನು ಪೂರೈಸಲಾಗುವುದು, ಜೋಡೋ ಸೇರಿದಂತೆ ಕುಸ್ತಿ ಗರಡಿಮನೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಾಲಿಬಾಲ್ ಅಸೋಶಿಯೇಶನ್ ಅಧ್ಯಕ್ಷ ಬಿ.ಎಂ.ಕೋಕರೆ, ಪುಟಬಾಲ್ ಅಸೋಶಿಯೇಷನ್ ಅಧ್ಯಕ್ಷ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವೇಟ್ ಲಿಪ್ಟಿಂಗ್ ಅಧ್ಯಕ್ಷ ದಾದಾಸಾಹೇಬ ಬಾಗಾಯತ, ಹಾಕಿ ಅಸೋಶಿಯೇಶನ್ ಅಧ್ಯಕ್ಷ ಎಸ್.ಕೆ.ಇನಾಂದಾರ, ಅಥ್ಲೇಟಿಕ್ಸ್ ಎಸ್.ಎಸ್.ಹಿರೇಮಠ, ಸ್ವಿಮ್ಮಿಂಗ್ ಅಸೋಶೀಯೇಶನ್ ಕಾರ್ಯದರ್ಶಿ ಚಂದ್ರಕಾಂತ ತಾರನಾಳ, ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ.ಲೋಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

