ವಿಜಯಪುರ: ಶ್ರೀ ಮುರಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ (ಎಸ್.ಎಂ.ಎನ್) ದಲ್ಲಿ ವಿವಿಧ ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ತೊಡಗಿಸಿ ವಂಚನೆಗೊಳಗಾದ ಗ್ರಾಹಕರಿಗೆ ಹಣ ಮರುಪಾವತಿಸಲು ಬೆಂಗಳೂರಿನ ಸಹಾಯಕ ಪ್ರಾದೇಶಿಕ ಆಯುಕ್ತರು ಹಾಗೂ ಎಸ್.ಎಂ.ಎನ್. ಸೌಹಾರ್ದದ ಸಕ್ಷಮ ಪ್ರಾಧಿಕಾರಿಯವರು ವಂಚಿತ ಠೇವಣಿದಾರರಿಗೆ ಕ್ಲೇಮ್‌ಗೆ ಅರ್ಜಿ ಸಲ್ಲಿಸಲು ೨೨-೦೭-೨೦೨೪ ರಿಂದ ೨೧-೦೮-೨೦೨೪ ರವರೆಗೆ ಒಂದು ತಿಂಗಳ ಕಾಲಾವಧಿ ನಿಗದಿಪಡಿಸಿದ್ದಾರೆ. ಆದ್ದರಿಂದ ನಿಗದಿತ ಸಮಯಕ್ಕೆ ತಮ್ಮಲ್ಲಿರುವ ದಾಖಲಾತಿಗಳನ್ನು ಸಕ್ಷಮ ಪ್ರಾಧಿಕಾರಿ ಅವರಿಗೆ ಕ್ಲೇಮ್ ಸಲ್ಲಿಸಬೇಕೆಂದು ರೈತ ಮುಖಂಡ ಹಾಗೂ ಎಸ್.ಎಂ.ಎನ್. ಸೌಹಾರ್ದ ಹೋರಾಟ ಸಮಿತಿಯ ಅಧ್ಯಕ್ಷ ಅರವಿಂದ ಕುಲಕರ್ಣಿ ಠೇವಣಿದಾರರಿಗೆ ಮನವಿ ಮಾಡಿಕೊಂಡಿದ್ದಾರೆ.
ವಿಜಯಪುರದ ಗಗನಮಹಲದಲ್ಲಿ ವಂಚಿತ ಠೇವಣಿದಾರರ ಸಭೆಯನ್ನು ಕರೆದು ಮಾತನಾಡಿದ ಅವರು, ಕ್ಲೇಮ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹಲವಾರು ಮಾನದಂಡಗಳನ್ನು ಅಳವಡಿಸಿದ್ದು ಠೇವಣಿದಾರರಿಗೆ ಸಕ್ಷಮ ಪ್ರಾಧಿಕಾರಿಯವರು ಕೇಳಿದ ಮಾನದಂಡಗಳಲ್ಲಿ ಕೆಲವು ಮಾನದಂಡಗಳು ಪೂರೈಸಲು ಸಾಧ್ಯವಿಲ್ಲ. ನಾಮಿನಿ ಇದ್ದವರಿಗೆ ಒಂದು ಸಂದರ್ಭದಲ್ಲಿ ಡಿಪಾಜಿಟರ್ ಮೈತರಾದ್ದಲ್ಲಿ ನೇರವಾಗಿ ನಾಮಿನಿ ಇದ್ದವರಿಗೆ ಡಿಪಾಜಿಟ್ ಬಾಂಡ್ ಪಡೆದುಕೊಂಡು ನೇರವಾಗಿ ಅವರ ಖಾತೆಗೆ ಹಣ ಜಮೆಮಾಡಬೇಕು. ಆದರೆ ವಂಶಾವಳಿ ಮತ್ತು ಉತ್ತರ ಜೀವಿತ, ವಾರ್ಸಾ ಇವೆಲ್ಲವುಗಳನ್ನು ಕೇಳಿದ್ದು ಕೇವಲ ಒಂದೇ ತಿಂಗಳಲ್ಲಿ ಇವೆಲ್ಲಗಳನ್ನು ತಹಶೀಲ್ದಾರ ಕಚೇರಿಯಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ. ದೂಷಿತ ಸೌಹಾರ್ದದದಿಂದ ಮ್ಯಾನೇಜರ್ ಅವರಿಂದ ದೃಢೀಕರಿಸಲ್ಪಟ್ಟ ಉಳಿತಾಯ ಖಾತೆಯ ನಕಲು ಪ್ರತಿಯನ್ನು ಕೇಳಿದ್ದಾರೆ. ಆದರೆ ದೂಷಿತ ಸೌಹಾರ್ದದ ಎಲ್ಲ ಶಾಖೆಗಳು ಬಂದಗೊಳಿಸಿದ್ದರಿಂದ ವಂಚಿತ ಗ್ರಾಹಕರು ಈ ದಾಖಲೆಗಳನ್ನು ಎಲ್ಲಿಂದ ಪೂರೈಸಬೇಕು ಇದರ ಕುರಿತು ಸಕ್ಷಮ ಪ್ರಾಧಿಕಾರ ಸ್ಪಷ್ಟಪಡಿಸುವುದು ಅಗತ್ಯವಿದೆ ಎಂದು ಆಗ್ರಹಿಸಿದರು.
ಇದರ ಜೊತೆ ಇತರ ಮಾನದಂಡಗಳನ್ನು ಕಡ್ಡಾಯಗೊಳಿಸಿದರೆ ಹಣ ಇಟ್ಟ ಜನರಿಗೆ ವಾಪಸ್ಸು ಹಣ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮೊದಲೆ ವಂಚಿತರಾದ ಜನಕ್ಕೆ ಈ ಮಾನದಂಡಗಳಿಂದ ಮತ್ತೊಮ್ಮೆ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ಕೆಲವು ಕಠಿಣ ಮಾನದಂಡಗಳನ್ನು ಕೈಬಿಟ್ಟು ಸರಳೀಕರಿಸಿ ಹಣ ಡಿಪಾಜಿಟ್ ಮಾಡಿದ ಡಿಪಾಜಿಟ್ ಪಾವತಿ ಬುಕ್ ಆಧಾರಕಾರ್ಡ್ ಅಗತ್ಯವಿದ್ದರೆ ಛಾಪಾ ಕಾಗದ ಪಡೆದುಕೊಳ್ಳಲಿ ಮತ್ತು ಒಂದು ತಿಂಗಳ ಕಾಲಾವಧಿಗಿಂತಲೂ ಇನ್ನೂ ಕ್ಲೇಮ್ ಅರ್ಜಿ ಸ್ವೀಕರಿಸಲು ಹೆಚ್ಚಿನ ಕಾಲ ವಿಸ್ತರಿಸಬೇಕೆಂದು ಸಭೆಯಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ರವಿವಾರದಂದು ಒತ್ತಾಯಿಸಿದರು.
ಈ ಸಭೆಯಲ್ಲಿ ಎನ್.ಕೆ.ಮನಗೊಂಡ, ಐ.ಬಿ. ಸಾರವಾಡ, ಎಸ್.ಜಿ. ಸಂಗೊಂದಿಮಠ, ಕೆ.ಡಿ.ನರಗುಂದ, ಬಸವರಾಜ ಅವಟಿ, ಬಸವರಾಜ ಚಿಕ್ಕೊಂಡ, ಬಸವರಾಜ ಬಾಡಗಿ, ಬಸವರಾಜ ನಂದಿಹಾಳ, ಮುಕ್ಕಪ್ಪ ಹುದ್ದಾರ, ಮಹಾಂತೇಶ ನಡಕಟ್ಟಿ, ಶರಣಪ್ಪ ಕಲ್ಲೂರ, ಶಾಂತಪ್ಪ ಪಾಟೀಲ, ಜಿ.ಜಿ.ಬಳ್ಳಿಗೇರ, ಶಿವಪ್ಪ ಚಂದಾನವರ, ಎಂ.ಡಿ.ನಾಯಿಕ, ಜಿ.ಎಂ.ಮಾಡಿ, ಎಸ್.ಎನ್.ಪ್ಯಾಟಿ, ಬಸಪ್ಪ ಮುಳವಾಡ, ನಾಗೇಶ ಹೊನವಾಡ, ಬಿ.ಪಿ.ಖಂಡೇಕರ, ವೈ.ಎಸ್.ಹಾದಿಮನಿ, ನಿರ್ಮಲಾ ಅವಟಿ, ಗೌರವಾಬಾಯಿ ಗುರಮಠ, ಸುಜಾತಾ ವಾಲಿ, ಅಕ್ಷಯ ಕಿಣಗಿಮಠ, ಕಸ್ತೂರಿಬಾಯಿ ಸುಣಗಾರ ರಾಜೇಶ್ವರ ಗುರನಾಳ, ಶಾರದಾ ಮಾಲಗಾರ, ಸೇರಿದಂತೆ ನೂರಾರು ವಂಚಿತ ಠೇವಣಿದಾರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಎಸ್.ಎಮ್.ಎನ್ ಸೌಹಾರ್ದದ ಕ್ಲೇಮ್‌ಗಳ ಮಾನದಂಡ ಸಡಿಲಿಕೆಗೆ ಆಗ್ರಹ
Related Posts
Add A Comment

