ಚಿಕ್ಕಪಡಸಲಗಿ: ಸುದೀರ್ಘ ೩೯ ವರ್ಷಗಳ ಕಾಲ ಉತ್ತಮ ಸೇವೆಗೈದು ಈಚೆಗೆ ಸೇವಾ ನಿವೃತ್ತಿ ಹೊಂದಿರುವ ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ ಅಪಾರ ಮಕ್ಕಳ ಪ್ರೀತಿಗೆ, ಜನತೆಯ ಒಲವಿಗೆ ಪಾತ್ರರಾಗಿ ಮಿನುಗಿದ್ದಾರೆ ಎಂದು ಅತಿಥಿ ಶಿಕ್ಷಕರಾಗಿ ಈ ಹಿಂದೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ನಾಗನೂರ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವಿಜಯಕುಮಾರ್ ಸಂಗೊಂದಿಮಠ ನುಡಿದರು.
ವಯೋನಿವೃತ್ತಿ ಹೊಂದಿದ ಪ್ರಯುಕ್ತ ಜಮಖಂಡಿ ಸ್ವಗ್ರಹದಲ್ಲಿ ಬಸವರಾಜ ಅನಂತಪುರ, ಶ್ರೀಮತಿ ಲಕ್ಷ್ಮೀ ಅನಂತಪುರ ದಂಪತಿಗಳನ್ನು ಶಾಲು ಹೊದಿಸಿ ಸನ್ಮಾನಿಸಿ ಅವರು ಮಾತನಾಡಿದರು.
ಎಲ್ಲರ ಪ್ರಶಂಸೆಗೆ ಪಾತ್ರರಾಗಿ ಈ ಶಿಕ್ಷಣ ಸಂಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾಭಾವದ ಕಾರ್ಯವೈಖರಿ ಅನುಪಮವಾಗಿದೆ.ಆದರ್ಶತೆಗೆ ಹೆಸರುವಾಸಿಯಾಗಿದೆ. ಸೇವೆಯನ್ನು ನಿಷ್ಠೆ,ಭಕ್ತಿ ಪಂಥದ ಮಾರ್ಗದಲ್ಲಿ ವ್ಯವಸ್ಥಿತ ರೀತಿಯಲ್ಲಿ ಸಾಗಿಸಿ ಸೇವಾಭಾವದ ಸಂಪನ್ನತೆ ಕಂಡುಕೊಂಡಿದ್ದಾರೆ. ಉತ್ತಮವಾದ ಮಾದರಿಯುತ ನಿಸ್ವಾರ್ಥ ಶಿಕ್ಷಕ ವೃತ್ತಿ ಸೇವೆ ಸಲ್ಲಿಸಿ ತಮ್ಮ ಕಾರ್ಯತತ್ಪರತೆಯಿಂದ ಅನಂತಪುರ ಗುರುಗಳು ಗುರುತಿಸಿಕೊಂಡಿದ್ದಾರೆಂದು ಅವರು ಶ್ಲಾಘಿಸಿದರು.
ಈ ವೇಳೆ ವಿಜಯಕುಮಾರ್ ಸಂಗೊಂದಿಮಠ ಅವರ ತಾಯಿ ಶ್ರೀಮತಿ ದಾನಮ್ಮ,ಸಹೋದರಿ ಭುವನೇಶ್ವರಿ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

