ಆಲಮಟ್ಟಿ: ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಹಿನ್ನಲೆಯಲ್ಲಿ ೧೭ ರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ಕಾಲುವೆಗಳಿಗೂ ನೀರು ಹರಿಸಲು ನೀರಾವರಿ ಸಲಹಾ ಸಮಿತಿ (ಐಸಿಸಿ) ನಿರ್ಣಯಿಸಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಮಂಗಳವಾರ ಸಂಜೆ ಐಸಿಸಿ ಅಧ್ಯಕ್ಷರೂ ಆದ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಂಗಾರು ಹಂಗಾಮಿಗೆ ನವ್ಹಂಬರ್ ೧೩ ರವರಗೆ ಒಟ್ಟು ೧೨೦ ದಿನಗಳ ಕಾಲ ನೀರು ಹರಿಸಲು ಸಭೆ ನಿರ್ಣಯಿಸಿದೆ.
ಜಲಾಶಯಕ್ಕೆ ಒಳಹರಿವು ಇರುವಾಗ ಪ್ರತಿನಿತ್ಯ ನೀರು ಹರಿಸುವುದು, ಒಳಹರಿವು ಸ್ಥಗಿತಗೊಂಡ ಮೇಲೆ ೧೪ ದಿನ ಚಾಲು ೧೦ ದಿನ ಬಂದ್ ಅವಧಿಯ ವಾರಾಬಂಧಿ ಅನುಸರಿಸಲು ಸಭೆ ನಿರ್ಣಯಿಸಿದೆ.
ಆಲಮಟ್ಟಿ ಹಾಗೂ ನಾರಾಯಣಪುರ ಸೇರಿ ೮೭.೭೬ ಟಿಎಂಸಿ ಅಡಿ ಜೀವ ಜಲ (ಲೈವ್ ಸ್ಟೋರೇಜ್ ) ನೀರಿದೆ. ಎರಡೂ ಜಲಾಶಯಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿಗಾಗಿ ೬೭ ಟಿಎಂಸಿ ಅಡಿ ನೀರು ಅಗತ್ಯ. ಅಷ್ಟು ಪ್ರಮಾಣದ ನೀರು ಜಲಾಶಯಗಳಲ್ಲಿ ಸಂಗ್ರಹವಿದ್ದು, ಮುಂಗಾರು ಹಂಗಾಮಿಗೆ ನೀರು ಪೂರೈಸಲಾಗುತ್ತದೆ.
ಯುಕೆಪಿಯಡಿ ಒಟ್ಟು ೬.೬೭ ಲಕ್ಷ ಹೆಕ್ಟೇರ್ ಕ್ಷೇತ್ರ ನೀರಾವರಿಗೆ ಒಳಪಡಲಿದೆ. ಅದರ ಪೈಕಿ ಶೇ ೮೦ ರಷ್ಟು ಜಮೀನು ಅಂದರೆ ೫.೩೪ ಲಕ್ಷ ಹೆಕ್ಟೇರ ಪ್ರದೇಶಕ್ಕೆ ನೀರು ಪೂರೈಸಲಾಗುವುದು, ಮುಂಗಾರು ಹಂಗಾಮು ಮಳೆ ಆಧಾರಿತವಾಗಿದ್ದು, ರೈತಾಪಿ ಜನರು ತಮ್ಮ ಕ್ಷೇತ್ರಕ್ಕೆ ದ್ವಿಋತು ಬೆಳೆಗಳನ್ನು ಬೆಳೆಯಬೇಕು, ಅದರಲ್ಲೂ ಲಘು ನೀರಾವರಿ ಬೆಳೆಗಳನ್ನು ಬೆಳೆಯಬೇಕು ಎಂದು ಸಭೆ ಕೋರಿದೆ. ನವ್ಹಂಬರ್ ನಲ್ಲಿ ಜಲಾಶಯಗಳ ನೀರಿನ ಸಂಗ್ರಹದ ಸ್ಥಿತಿಗತಿ ನೋಡಿಕೊಂಡು ಕಾಲುವೆಗೆ ಹಿಂಗಾರು ಹಂಗಾಮಿಗೆ ನೀರು ಹರಿಸುವುದರ ಕುರಿತು ನಿರ್ಣಯಿಸಲಾಗುತ್ತದೆ.
ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ, ಕಲಬುರಗಿ ಸಂಸದ ರಾಧಾಕೃಷ್ಣ ದೊಡಮನಿ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಜೆ.ಟಿ. ಪಾಟೀಲ, ಪ್ರಕಾಶ ರಾಠೋಡ, ಪಿ.ಎಚ್. ಪೂಜಾರ, ರಾಜಾ ವೇಣುಗೋಪಾಲ ನಾಯಕ, ಮಾನಪ್ಪ ವಜ್ಜಲ, ಚನ್ನರೆಡ್ಡಿ ತುನ್ನೂರು, ಅಶೋಕ ಮನಗೂಳಿ, ರಾಜುಗೌಡ ಪಾಟೀಲ, ವಿಜಯಾನಂದ ಕಾಶಪ್ಪನವರ
ಕೆಬಿಜೆಎನ್‌ಎಲ್ ಎಂಡಿ ಕೆ.ಪಿ. ಮೋಹನರಾಜ್ ಸೇರಿದಂತೆ ಕೆಬಿಜೆಎನ್‌ಎಲ್ ವಿವಿಧ ವಲಯಗಳ ಅಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

