ಆಲಮಟ್ಟಿ: ಅಪಾರ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿರುವ ಕಾರಣ ಆಲಮಟ್ಟಿ ಜಲಾಶಯದಿಂದ ೧೪ ಗೇಟ್ ಗಳ ಮೂಲಕ ೨೫,೦೦೦ ಕ್ಯುಸೆಕ್ ಹಾಗೂ ವಿದ್ಯುತ್ ಘಟಕಗಳ ಮೂಲಕ ೪೦,೦೦೦ ಕ್ಯುಸೆಕ್ ಸೇರಿ ೬೫,೦೦೦ ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹೊರಬಿಡಲಾಗುತ್ತಿದೆ.
ಬೆಳಿಗ್ಗೆ ೪೦,೦೦೦ ಕ್ಯುಸೆಕ್ ನೀರು ಬಿಡಲಾಗುತ್ತಿತ್ತು, ಸಂಜೆ ಅದನ್ನು ೬೫,೦೦೦ ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ.
ಮಹಾರಾಷ್ಟçದಲ್ಲಿ ಕಳೆದೆರೆಡು ದಿನಗಳಿಂದ ಸುರಿದ ಮಳೆಯ ಕಾರಣ ಮಂಗಳವಾರ ಸಂಜೆ ಆಲಮಟ್ಟಿ ಜಲಾಶಯದ ಒಳಹರಿವು ಒಂದು ಲಕ್ಷ ಕ್ಯುಸೆಕ್ ಗೆ ಬಂದು ತಲುಪಿದೆ.
ರಾತ್ರಿ ಒಳಹರಿವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇದು ತಾತ್ಕಾಲಿಕ ಏರಿಕೆ, ಬುಧವಾರ ಒಳಹರಿವು ಕಡಿಮೆಯಾಗಲಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದರು.
ಮಂಗಳವಾರ ಬೆಳಿಗ್ಗೆಯಿಂದ ಜಲಾಶಯದ ಮುಂಭಾಗದ ಕೃಷ್ಣಾ ತೀರದ ಗ್ರಾಮಗಳಾದ ಅರಳದಿನ್ನಿ, ಯಲಗೂರು ಸೇರಿದಂತೆ ನಾನಾ ಗ್ರಾಮಗಳಿಗೆ ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾಡಗಿ ಭೇಟಿ ನೀಡಿದರು.
೨೭೦ ಮೆಗಾವಾಟ್ ವಿದ್ಯುತ್ ಉತ್ಪಾದನೆ;
ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ ೪೦,೦೦೦ ಕ್ಯುಸೆಕ್ ನೀರು ಬಿಟ್ಟ ಕಾರಣ ಎಲ್ಲಾ ಆರು ಘಟಕಗಳ ಮೂಲಕ ೨೭೦ ಮೆಗಾವಾಟ್ ವಿದ್ಯುತ್ ಉತ್ಪಾದನೆ ಯಾಗುತ್ತಿದೆ.
ಆಲಮಟ್ಟಿ ಜಲಾಶಯದ ಮಟ್ಟ;
ಬುಧವಾರ ಸಂಜೆ ಆಲಮಟ್ಟಿಯ ಒಳಹರಿವು ೮೧,೩೩೩ ಕ್ಯುಸೆಕ್ ಇದೆ.
ಜಲಾಶಯದಿಂದ ೬೫,೦೦೦ ಕ್ಯುಸೆಕ್ ನೀರು ನದಿ ಪಾತ್ರಕ್ಕೆ ಹರಿಯುತ್ತಿದೆ. ಜಲಾಶಯದ ಮಟ್ಟ ೫೧೮.೧೧ ಮೀ ಗೆ ಬಂದು ತಲುಪಿದೆ.
Subscribe to Updates
Get the latest creative news from FooBar about art, design and business.
ಆಲಮಟ್ಟಿ ಜಲಾಶಯಕ್ಕೆ ಅಪಾರ ನೀರು; ೬೫,೦೦೦ ಕ್ಯುಸೆಕ್ ಹೊರಹರಿವು
Related Posts
Add A Comment

