Author: editor.udayarashmi@gmail.com

ಅಫಜಲಪುರ: ತಾಲೂಕಿನ ಮಲ್ಲಾಬಾದ ಗ್ರಾಮದ ಇಂಜಿನಿಯರಿಂಗ್ ವಿದ್ಯಾರ್ಥಿ ಕಿರಣ ಬಸವರಾಜ ನಿರೋಣಿ(೨೦) ಇವರು ಬೆಂಗಳೂರಿನಲ್ಲಿ ಬೈಕ್ ಅಪಘಾತಲ್ಲಿ ಮೃತ ಪಟ್ಟಿದ್ದಾರೆ.ಗೆಳೆಯರೊಂದಿಗೆ ಹೆದ್ದಾರಿ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಕಿರಣ ತೀವ್ರ ರಕ್ತಸ್ರಾವದಿಂದ ಮೃತ ಪಟ್ಟಿದ್ದಾರೆ. ಉಳಿದವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದ ಮೊಹರಂ ಆಚರಣೆಯಲ್ಲಿ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಭಾಗಿಯಾಗಿದ್ದರು.ಅವರು ಮೊಹರಂ ಹಬ್ಬದಲ್ಲಿ ಭಾಗಿಯಾಗಿ ಮಾತನಾಡುತ್ತಾ ತಲೆಮಾರುಗಳಿಂದ ಹಿಂದು ಮುಸ್ಲಿಂ ಬಾಂಧವರು ಎಲ್ಲಾ ಹಬ್ಬ ಹರಿದಿನಗಳನ್ನು ಒಟ್ಟಾಗಿ ಆಚರಿಸುವುದು ನಮ್ಮ ನೆಲದ ಗುಣದಲ್ಲಿದೆ. ಈಗಲೂ ಎಲ್ಲರೂ ಕೂಡಿ ಆಚರಿಸುವ ಮೂಲಕ ಭಾವೈಕ್ಯ ಸಾರುವುದು ಈ ಹಬ್ಬದ ವಿಶೇಷವಾಗಿದೆ ಎಂದರು.ತಾಲೂಕಿನಾದ್ಯಂತ ಹಿಂದು ಮುಸ್ಲಿಂ ಭಾವೈಕ್ಯದ ಮೊಹರಂ ಆಚರಣೆ: ತಾಲೂಕಿನ ಹಸರಗುಂಡಗಿ, ಗೊಬ್ಬೂರ(ಬಿ), ಭೈರಾಮಡಗಿ, ಚವಡಾಪುರ, ಗಾಣಗಾಪುರ, ಆನೂರ, ಅಫಜಲಪುರ, ಕರ್ಜಗಿ, ಮಾಶಾಳ, ಮಣೂರ, ದಿಕ್ಸಂಗಾ, ಬಡದಾಳ, ಬಳೂರ್ಗಿ ಸೇರಿದಂತೆ ತಾಲೂಕಿನೆಲ್ಲೆಡೆ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.

Read More

ಅಫಜಲಪುರ: ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಡೋಲಿ, ಪಂಜಾ ಮೇರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಅಪ್ಪಾಸಾಹೇಬ ಪಟೇಲ, ಇಬ್‌ರಾಹಿಂ ಮುಲ್ಲಾ, ಬಾಬು ಶೇಕ್, ಸುರೇಶ ಮಠಪತಿ, ಶಫಿಕ ಹುಸೇನ, ಜಾವೇದ ಶಿನ್ನೂರ, ಚಾಂದಸಾಬ ಶೇಕ್, ಶಿವಪ್ಪ ಪಾಟೀಲ, ದೌಲಪ್ಪ ಪಾಟೀಲ, ಸದ್ದಾಂ ನಾಕೇದಾರ, ಸೈಯದ ಹಜರತ ಪಟೇಲ್ ಸೇರಿದಂತೆ ಅನೇಕರು ಇದ್ದರು.

Read More

ರೈತರ ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ನಡೆದಿದ್ದ ಅಹೋರಾತ್ರಿ ಧರಣಿ ಬಸವನಬಾಗೇವಾಡಿ: ಪಟ್ಟಣದ ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿಯ ಎದುರು ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ವಿವಿಧ ಭಾಗದ ರೈತರು ಸರ್ಕಾರ ರಾಜ್ಯದ ರೈತರ ಜಮೀನು ದಾರಿ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಶುಕ್ರವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಧರಣಿ ಸ್ಥಳಕ್ಕೆ ಕಂದಾಯ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಳಶೆಟ್ಟಿ ಅವರು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಗ್ರೇಡ್-೨ ತಹಸೀಲ್ದಾರ ಜೆ.ಎಸ್.ನಾಯಕ ಅವರೊಂದಿಗೆ ಭೇಟಿ ನೀಡಿದರು.ಗಂಭೀರವಾಗಿ ಇರುವ ದಾರಿ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲಾಗುವದು. ಮುಂದೆ ತಾಲೂಕಿನಲ್ಲಿ ರೈತರ ಜಮೀನುಗಳ ದಾರಿ ಸಮಸ್ಯೆ ಇರುವ ಅರ್ಜಿಗಳನ್ನು ಹಂತ ಹಂತವಾಗಿ ಸರ್ಕಾರದ ಸುತ್ತೋಲೆಯಂತೆ ಬಗೆಹರಿಸಲಾಗುವುದು ಎಂದು ಕಂದಾಯ ಉಪವಿಭಾಗಧಿಕಾರಿ ಧರಣಿ ನಿರತರಿಗೆ ನೀಡಿದ ಭರವಸೆ ಮೇರೆಗೆ ಧರಣಿ ನಿರತರು ತಮ್ಮ ಧರಣಿಯನ್ನು ತಾತ್ಕಲಿಕವಾಗಿ ಹಿಂಪಡೆದುಕೊಂಡರು.ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಹಲವಾರು ರೈತರ ಬಾಂಧವರಿಗೆ ತಮ್ಮ ತಮ್ಮ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ…

Read More

ಆ.೨೬ ರಿಂದ ಆರಂಭವಾಗುವ ಐತಿಹಾಸಿಕ ಬಸವೇಶ್ವರ ಜಾತ್ರಾಮಹೋತ್ಸವ ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಆವರಣದಲ್ಲಿ ಆಗಷ್ಟ್ ೨೬ ರಿಂದ ಆರಂಭವಾಗುವ ಐತಿಹಾಸಿಕ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಜಾತ್ರಾಮಹೋತ್ಸವದ ಪದಾಧಿಕಾರಿಗಳ ಆಯ್ಕೆ ಕುರಿತಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ಜರುಗಿತು.ಸಭೆಯಲ್ಲಿ ಅಧ್ಯಕ್ಷರಾಗಿ ಗುರಲಿಂಗಪ್ಪ (ಮುದುಕು) ಬಸರಕೋಡ, ಉಪಾಧ್ಯಕ್ಷರಾಗಿ ಸಂಗಯ್ಯ ಒಡೆಯರ, ಬಸವರಾಜ ಅಳ್ಳಗಿ, ಪ್ರವೀಣ ಪೂಜಾರಿ, ಮುತ್ತು ಪತ್ತಾರ, ಪ್ರಧಾನ ಕಾರ್ಯದರ್ಶಿಯಾಗಿ ಬಾಬು ನಿಡಗುಂದಿ, ಖಜಾಂಚಿಯಾಗಿ ಎಂ.ಬಿ.ತೋಟದ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜಾತ್ರಾಮಹೋತ್ಸವ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಮಂಡಳಿಯಿಂದ ಸಿದ್ದಲಿಂಗ ಸ್ವಾಮೀಜಿ ಸನ್ಮಾನಿಸಿದರು.ಈ ವೇಳೆ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪ್ರತಿವರ್ಷ ಶ್ರಾವಣ ಮಾಸದಲ್ಲಿ ಜರುಗುವ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವವನ್ನು ಪ್ರತಿವರ್ಷ ಎಲ್ಲರ ಸಹಕಾರದೊಂದಿಗೆ ಸಂಭ್ರಮ,ಸಡಗರದಿಂದ ಆಚರಿಸುತ್ತಾ ಬರಲಾಗುತ್ತಿದೆ. ಈ ವರ್ಷ ಶ್ರಾವಣ ಮಾಸವು ಆಗಷ್ಟ್ ೪ ರಿಂದ…

Read More

ಸಿಂದಗಿ: ಎಸ್.ಟಿ.ಸಮುದಾಯದ ಬೆಳವಣಿಗೆಗೆ ಬಳಕೆಯಾಗಬೇಕಿದ್ದ ೧೮೭ ಕೋಟಿ ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆದು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮತದಾರಿಗೆ ಆಮಿಷವೊಡ್ಡಲು, ಮಧ್ಯಪಾನ ಹಂಚಲು ಬಳಸಿರುವುದು ಜಗತ್ ಜಾಹಿರವಾಗಿದೆ ಎಂದು ಎಸ್.ಟಿ.ಮೋರ್ಚಾ ತಾಲೂಕಾಧ್ಯಕ್ಷ ಪ್ರಶಾಂತ ಕದ್ದರಕಿ ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯಾದ್ಯಂತ ಇಷ್ಟೆಲ್ಲಾ ಹೋರಾಟ, ಆಕ್ರೋಶಗಳು ಸಿಎಂ ಸಿದ್ದರಾಮಯ್ಯ ಮತ್ತು ಸರಕಾರಗಳ ವಿರುದ್ದ ವ್ಯಕ್ತವಾಗುತ್ತಿದ್ದರೂ ಖುರ್ಚಿಗೆ ಅಂಟಿಕೊಂಡು ಕುಳಿತು ದಲಿತ ವಿರೋಧಿ ಸರ್ಕಾರ ನಡೆಸುತ್ತಿದ್ದಾರೆ. ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ ಸಚಿವ ಬಿ.ನಾಗೇಂದ್ರ ಒಬ್ಬರನ್ನೇ ತಲೆದಂಡ ಮಾಡಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ. ಹಣಕಾಸು ಇಲಾಖೆಯನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಾ ಈ ಪ್ರಕರಣಕ್ಕೆ ನೇರ ಹೊಣೆಗಾರಾಗುತ್ತಾರೆ. ಕಾರಣ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕದ್ದರಕಿ ಆಗ್ರಹಿಸಿದರು.

Read More

ಸಿಂದಗಿಯಲ್ಲಿ ಬಿಜೆಪಿ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕಾರಣಿ ಸಭೆ ಸಿಂದಗಿ: ಸಿಎಂ ಸಿದ್ದರಾಮಯ್ಯ ಅವರ ಸರಕಾರ ವಾಲ್ಮೀಕಿ ಸಮಾಜದ ೧೮೭ಕೋಟಿ ರೂ. ಅನುದಾನ ದುರ್ಬಳಕೆ, ಮುಡಾ ಸೇರಿದಂತೆ ಅನೇಕ ಹಗರಣಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಖುರ್ಚಿಗೆ ಅಂಟಿಕೊಳ್ಳದೇ ಎಲ್ಲ ಹಗರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಸವಾಲು ಎಸೆದರು.ಪಟ್ಟಣದ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕಾರಣಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದಲಿತ ಸರಕಾರ ಎನ್ನುವ ಸಿಎಂ ಸಿದ್ದರಾಮಯ್ಯ ಸರಕಾರ ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಹಣ ಲೂಟಿ ಮಾಡಿದೆ. ಸಂಸತ್ತಿಗೆ ದೇಶದಲ್ಲಿ ಏಳು ಬಾರಿ ಆರಿಸ ಬಂಸ ಏಕೈಕ ಸದಸ್ಯ ನಾನಾಗಬೇಕಾದರೆ ಅದೃಷ್ಟ ದೇವತೆಯ ಕೃಪಾಕಟಾಕ್ಷದಿಂದ ಅತ್ಯಂತ ತುಳಿತಕ್ಕೊಳಗಾದ ಸಮಾಜದಿಂದ ಬಂದವನನ್ನು ಆರಿಸಿ ತಂದಿದೆ. ನಾನು ಎರಡು ಬಾರಿ ಜಯಗಳಿಸಿದರು ಮೈಮರೆತಿಲ್ಲ. ಕೂಡಗಿ ವಿದ್ಯುತ್‌ಸ್ಥಾವರ ಘಟಕ ತಂದಿದ್ದು ನನ್ನ ಹೆಗ್ಗಳಿಕೆ. ಶೇಡಬಾಳ-ಸಿಂದಗಿ ವಾಡಿ ರೈಲು…

Read More

ಅವಳಿ ಜಿಲ್ಲೆಯ ನೂರಾರು ರೈತರು ಭಾಗಿ | ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ದಂಪತಿ ನೇತೃತ್ವ ಆಲಮಟ್ಟಿ: ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿ ಎಂದೇ ಕರೆಯಲ್ಪಡುವ ಕೃಷ್ಣಾನದಿಯ ಉಗಮಸ್ಥಾನವಾದ ಮಹಾರಾಷ್ಟ್ರದ ಪಂಚಗಂಗಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಅವಳಿ ಜಿಲ್ಲೆಯ ನೂರಾರು ರೈತರು ಜು.21 ರಂದು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ.ಪ್ರತಿವರ್ಷದ ಕಡ್ಲಿಗರ ಹುಣ್ಣಿಮೆಯಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ದಂಪತಿ ಸಮೇತರಾಗಿ ಈ ಭಾಗದ ಕೃಷಿಕರೊಂದಿಗೆ ಮಹಾಬಲೇಶ್ವರಕ್ಕೆ ತೆರಳಿ ಕೃಷ್ಣೆಯ ಉಗಮಸ್ಥಾನದಲ್ಲಿ ಉಡಿಯನ್ನು ತುಂಬಿ, ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವುದು ಕಳೆದ 15 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯ.ಅದೇ ರೀತಿ ಈ ಬಾರಿಯೂ ಮಹಾಬಲೇಶ್ವರಕ್ಕೆ ಬರಲು ಆಸಕ್ತಿ ಇರುವ ವಿಜಯಪುರ ಬಾಗಲಕೋಟ ಜಿಲ್ಲೆಯ ರೈತಮಿತ್ರರು ಜು.20 ರಂದು ಬೆಳಿಗ್ಗೆ 11 ಕ್ಕೆ ವಿಜಯಪುರ ಅಥಣಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಬಳಿ ಬರಬೇಕು. ಅಲ್ಲಿಂದ ಮಧ್ಯಾಹ್ನ 12 ಕ್ಕೆ ತಿಕೋಟಾ, ಬಾಬಾನಗರ, ಬಿಜ್ಜರಗಿ, ಕನಮಡಿ, ಜತ್ತ, ಕರಾಡ, ಮೂಲಕ ಸಾತಾರ…

Read More

ಅಫಜಲಪುರ: ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹೀಂದುಳಿದಿರುವ ಹೂಗಾರ ಸಮಾಜಕ್ಕೆ ಮುನ್ನೆಲೆಗೆ ತರಲು ಹೂಗಾರ ಅಭಿವೃದ್ದಿ ನಿಗಮಕ್ಕೆ ಸರ್ಕಾರ ೧೦೦ ಕೋಟಿ ಅನುದಾನ ಮೀಸಲಿಡಬೇಕೆಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾದ್ಯಕ್ಷ ರಮೇಶ ಹೂಗಾರ ಒತ್ತಾಯಿಸಿದರು.ಅವರು ಪಟ್ಟಣದ ತಹಸೀಲ ಕಛೇರಿಯಿಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ ೪೦ ವರ್ಷಗಳಿಂದ ನಮ್ಮ ಸಮಾಜಕ್ಕೆ ಸಿಗಬೇಕಾದ ಸೌಕರ್ಯಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ಯಾವ ಸರ್ಕಾರವು ನಮ್ಮ ಸಮಾಜಕ್ಕೆ ಸೌಲಭ್ಯಗಳನ್ನು ನೀಡುತ್ತಿಲ್ಲ. ಈ ತಾರತಮ್ಯ ಧೋರಣೆ ಬಿಟ್ಟು ಈಗಿನ ಸರ್ಕಾರ ನಮ್ಮ ನಿಗಮಕ್ಕೆ ೧೦೦ ಕೋಟಿ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿದ ಅವರು ಅನುದಾನ ಮೀಸಲಿಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಮ ಅವಟೆ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಧ್ಯಕ್ಷ ಸುರೇಶ ತೇಲಿ, ಖಜಾಂಚಿ ಮಂಜುನಾಥ ಹೂಗಾರ, ಮಹಾಂತೇಶ ಹೂಗಾರ, ಶ್ರೀಶೈಲ್ ಹೂಗಾರ, ಸಿದ್ದೇಶ್ವರ ಹೂಗಾರ, ಗುಂಡು ಹೂಗಾರ, ಗಿರಿಮಲ್ಲಪ್ಪ ಹೂಗಾರ, ಶಿವಲಿಂಗ ಹೂಗಾರ, ನಿಂಗಣ್ಣ ಹೂಗಾರ ಸೇರಿದಂತೆ…

Read More

ಅಫಜಲಪುರ: ಸಮಾಜ ಸೇವಕರಾದ ಆರ್.ಡಿ ಪಾಟೀಲ ಅವರ ೪೧ನೇ ಹುಟ್ಟು ಹಬ್ಬದ ಪ್ರಯುಕ್ತ ಜು.೨೨ರಂದು ಅಫಜಲಪುರ ತಾಲೂಕಿನ ಜ್ಞಾನಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಸುರಕ್ಷಾ ಬ್ಲಡ್ ಸೆಂಟರ್ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಡಿ ಪಾಟೀಲ ತಿಳಿಸಿದ್ದಾರೆ.ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆರ್.ಡಿ ಪಾಟೀಲ್ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರಕ್ಕೆ ಅಪಜಲಪುರದ ವಿಶ್ವರಾದ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ೧೦೦೮ ಸಸಿ ನೆಡುವ ಕಾರ್ಯಕ್ರಮಕ್ಕೆ ಮಲ್ಲಾಬಾದನ ರೇವಣಸಿದ್ದೇಶ್ವರ ಶಿವಾಚಾರ್ಯರು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಭಾಗಿಯಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Read More