Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 13,2026

ಶಾಸಕರೆ ನಾಟಕ ನಿಲ್ಲಿಸಿ, ರೈತರ ಪರ ಕೆಲಸ ಮಾಡಿ

ಗ್ಯಾರಂಟಿ ಸಮಿತಿಗೆ ಅಧ್ಯಕ್ಷರಾಗಿ ತೆಲ್ಲೂರ ಆಯ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಎಸಿ ಭರವಸೆ: ಧರಣಿ ಹಿಂಪಡೆದುಕೊಂಡ ರೈತ ಸಂಘ
(ರಾಜ್ಯ ) ಜಿಲ್ಲೆ

ಎಸಿ ಭರವಸೆ: ಧರಣಿ ಹಿಂಪಡೆದುಕೊಂಡ ರೈತ ಸಂಘ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ರೈತರ ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ನಡೆದಿದ್ದ ಅಹೋರಾತ್ರಿ ಧರಣಿ

ಬಸವನಬಾಗೇವಾಡಿ: ಪಟ್ಟಣದ ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿಯ ಎದುರು ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ವಿವಿಧ ಭಾಗದ ರೈತರು ಸರ್ಕಾರ ರಾಜ್ಯದ ರೈತರ ಜಮೀನು ದಾರಿ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಶುಕ್ರವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಧರಣಿ ಸ್ಥಳಕ್ಕೆ ಕಂದಾಯ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಳಶೆಟ್ಟಿ ಅವರು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಗ್ರೇಡ್-೨ ತಹಸೀಲ್ದಾರ ಜೆ.ಎಸ್.ನಾಯಕ ಅವರೊಂದಿಗೆ ಭೇಟಿ ನೀಡಿದರು.
ಗಂಭೀರವಾಗಿ ಇರುವ ದಾರಿ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲಾಗುವದು. ಮುಂದೆ ತಾಲೂಕಿನಲ್ಲಿ ರೈತರ ಜಮೀನುಗಳ ದಾರಿ ಸಮಸ್ಯೆ ಇರುವ ಅರ್ಜಿಗಳನ್ನು ಹಂತ ಹಂತವಾಗಿ ಸರ್ಕಾರದ ಸುತ್ತೋಲೆಯಂತೆ ಬಗೆಹರಿಸಲಾಗುವುದು ಎಂದು ಕಂದಾಯ ಉಪವಿಭಾಗಧಿಕಾರಿ ಧರಣಿ ನಿರತರಿಗೆ ನೀಡಿದ ಭರವಸೆ ಮೇರೆಗೆ ಧರಣಿ ನಿರತರು ತಮ್ಮ ಧರಣಿಯನ್ನು ತಾತ್ಕಲಿಕವಾಗಿ ಹಿಂಪಡೆದುಕೊಂಡರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಹಲವಾರು ರೈತರ ಬಾಂಧವರಿಗೆ ತಮ್ಮ ತಮ್ಮ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ಇದೆ. ಇದರಿಂದಾಗಿ ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಜಮೀನು ದಾರಿಗಾಗಿ ಅನೇಕ ಕಡೆಗಳಲ್ಲಿ ಜಗಳ, ಹೊಡೆದಾಟ, ಕೊಲೆ ಸಹ ನಡೆದಿವೆ. ಇದೊಂದು ರಾಜ್ಯದಲ್ಲಿ ಗಂಭೀರ ಸಮಸ್ಯೆಯಾಗಿದೆ. ಸರ್ಕಾರ ರೈತರ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಬೇಕಿದೆ. ರೈತರ ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ರೈತ ಸಂಘವು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ರಾಜ್ಯದಲ್ಲಿ ಎಲ್ಲ ರೈತರ ಜಮೀನುಗಳಿಗೆ ಹೋಗಲು ಸರ್ಕಾರವೇ ನಕಾಶೆಯಲ್ಲಿ ದಾರಿ ಹಾಕಿಕೊಡುವಂತಾದರೇ ಈ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಬಗೆಹರಿಸಬಹುದು ಎಂದರು.
ಸರ್ಕಾರದ ಸುತ್ತೋಲೆಯಂತೆ ಜಮೀನುಗಳಿಗೆ ಹೋಗಲು ಅನುಭೋಗದ ಹಕ್ಕಿನಡಿ ದಾರಿ ಮಾಡಿಕೊಡಬೇಕಿದೆ. ಸರ್ಕಾರದ ಸುತ್ತೋಲೆ ಕಾಟಾಚಾರಕ್ಕೆ ಎಂಬಂತಯಾಗಿದೆ. ದಾರಿ ಸಮಸ್ಯೆ ಬಗೆಹರಿಸುವ ಅಧಿಕಾರ ತಹಸೀಲ್ದಾರ ಅವರಿಗೆ ಕೂಡಲೇ ನೀಡುವಂತಾಗಬೇಕು. ಇದೀಗ ನಡೆಯುತ್ತಿರುವ ಅಧಿವೇಶನದಲ್ಲಿ ಈ ಸಮಸ್ಯೆ ಕುರಿತು ಸರ್ಕಾರ ಗಂಭೀರವಾಗಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು. ನಮ್ಮ ಧರಣಿ ಸ್ಥಳಕ್ಕೆ ಕಂದಾಯ ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಗಂಭೀರ ಸಮಸ್ಯೆ ಇರುವದನ್ನು ತುರ್ತಾಗಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಹಂತ ಹಂತವಾಗಿ ಉಳಿದ ಸಮಸ್ಯೆಗಳನ್ನು ಬಗೆಹರಿಸುವದಾಗಿ ಹೇಳಿದ್ದಾರೆ. ಒಂದು ವೇಳೆ ಅಧಿಕಾರಿಗಳು ದಾರಿ ಸಮಸ್ಯೆ ಬಗೆಹರಿಸದೇ ಹೋದರೆ ಮತ್ತೇ ಹೋರಾಟ ಮಾಡಬೇಕಾಗುತ್ತದೆ ಎಂದರು.
ಧರಣಿಯಲ್ಲಿ ವಿಠ್ಠಲ ಬಿರಾದಾರ, ಈರಣ್ಣ ದೇವರಗುಡಿ, ಚಂದ್ರಶೇಖರ ಜಮ್ಮಲದಿನ್ನಿ, ಹಿರಗಪ್ಪ ಗಂಗೂರ, ಶೇಖಪ್ಪ ಸಜ್ಜನ, ರಾಜೇಸಾ ವಾಲೀಕಾರ, ರೇವಪ್ಪಗೌಡ ಪೊಲೇಸಿ, ಧರ್ಮಣ್ಣ ಬೂದಗೋಳ, ಶಿವಪ್ಪ ಮಂಗೋಂಡ, ಮಾದಪ್ಪ ಹೊರ್ತಿ, ಶ್ರೀಶೈಲ ಕೋಲಕಾರ, ಬಸಪ್ಪ ಮುಳವಾಳ, ಶರಣಗೌಡ ಪಾಟೀಲ, ಮಹಿಬೂಬ ಅವಟಿ, ಪ್ರಕಾಶ ಬಿರಾದಾರ, ರಾಜು ವಂದಾಲ, ಜಗದೀಶ ಲಿಂಗದಳ್ಳಿ, ಮಹಾದೇವಪ್ಪ ಮುತ್ತತ್ತಿ, ಬಸನಗೌಡ ಬಿರಾದಾರ, ಲಲಿತಾ ಕುರಣದ, ನಾಗಮ್ಮ ಕುರಣದ, ಭೀಮರಾಯ ದಳವಾಯಿ, ಶಾಂತವ್ವ ಬಾಲಗೋಳ, ಮಹೇಶ ಪತ್ತಾರ, ಕಲ್ಲಪ್ಪ ಕೋಲಕಾರ ಭಾಗವಹಿಸಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 13,2026

ಶಾಸಕರೆ ನಾಟಕ ನಿಲ್ಲಿಸಿ, ರೈತರ ಪರ ಕೆಲಸ ಮಾಡಿ

ಗ್ಯಾರಂಟಿ ಸಮಿತಿಗೆ ಅಧ್ಯಕ್ಷರಾಗಿ ತೆಲ್ಲೂರ ಆಯ್ಕೆ

ಶಾಸಕ ಶಿವಾನಂದ ರಿಂದ ಕಾನಿಪ ಸಂಘಕ್ಕೆ 5 ಲಕ್ಷ ರೂ. ದೇಣಿಗೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 13,2026
    In ದಿನಪತ್ರಿಕೆ
  • ಶಾಸಕರೆ ನಾಟಕ ನಿಲ್ಲಿಸಿ, ರೈತರ ಪರ ಕೆಲಸ ಮಾಡಿ
    In (ರಾಜ್ಯ ) ಜಿಲ್ಲೆ
  • ಗ್ಯಾರಂಟಿ ಸಮಿತಿಗೆ ಅಧ್ಯಕ್ಷರಾಗಿ ತೆಲ್ಲೂರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಶಾಸಕ ಶಿವಾನಂದ ರಿಂದ ಕಾನಿಪ ಸಂಘಕ್ಕೆ 5 ಲಕ್ಷ ರೂ. ದೇಣಿಗೆ
    In (ರಾಜ್ಯ ) ಜಿಲ್ಲೆ
  • ಜನರೇ ಮಾಲೀಕರು, ಅಧಿಕಾರಿಗಳು ಅವರ ಸೇವಕರು
    In (ರಾಜ್ಯ ) ಜಿಲ್ಲೆ
  • ಎಸ್.ಎಸ್.ಖಾದ್ರಿ ಗೆ ಪಿ.ಎಚ್.ಡಿ ಪದವಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಬಹುಭಾಷಾ ಜ್ಞಾನವೇ ವಿದ್ಯಾರ್ಥಿಗಳ ಪ್ರಗತಿಯ ಕೀಲಿಕೈ :ಶಿಂತ್ರೆ
    In (ರಾಜ್ಯ ) ಜಿಲ್ಲೆ
  • ಗಣೇಶನ ಆಗಮನಕ್ಕೆ ಮಾರುಕಟ್ಟೆಗೆ ಹೊಸ ಕಳೆ!
    In (ರಾಜ್ಯ ) ಜಿಲ್ಲೆ
  • ಚಕ್ರವಿಲ್ಲದ ಜೋಡು ಬಸವಣ್ಣನ ರಥಕ್ಕೆ ಹೆಗಲು ನೀಡಿದ ಭಕ್ತರು
    In (ರಾಜ್ಯ ) ಜಿಲ್ಲೆ
  • ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.