ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದ ಮೊಹರಂ ಆಚರಣೆಯಲ್ಲಿ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಭಾಗಿಯಾಗಿದ್ದರು.
ಅವರು ಮೊಹರಂ ಹಬ್ಬದಲ್ಲಿ ಭಾಗಿಯಾಗಿ ಮಾತನಾಡುತ್ತಾ ತಲೆಮಾರುಗಳಿಂದ ಹಿಂದು ಮುಸ್ಲಿಂ ಬಾಂಧವರು ಎಲ್ಲಾ ಹಬ್ಬ ಹರಿದಿನಗಳನ್ನು ಒಟ್ಟಾಗಿ ಆಚರಿಸುವುದು ನಮ್ಮ ನೆಲದ ಗುಣದಲ್ಲಿದೆ. ಈಗಲೂ ಎಲ್ಲರೂ ಕೂಡಿ ಆಚರಿಸುವ ಮೂಲಕ ಭಾವೈಕ್ಯ ಸಾರುವುದು ಈ ಹಬ್ಬದ ವಿಶೇಷವಾಗಿದೆ ಎಂದರು.
ತಾಲೂಕಿನಾದ್ಯಂತ ಹಿಂದು ಮುಸ್ಲಿಂ ಭಾವೈಕ್ಯದ ಮೊಹರಂ ಆಚರಣೆ: ತಾಲೂಕಿನ ಹಸರಗುಂಡಗಿ, ಗೊಬ್ಬೂರ(ಬಿ), ಭೈರಾಮಡಗಿ, ಚವಡಾಪುರ, ಗಾಣಗಾಪುರ, ಆನೂರ, ಅಫಜಲಪುರ, ಕರ್ಜಗಿ, ಮಾಶಾಳ, ಮಣೂರ, ದಿಕ್ಸಂಗಾ, ಬಡದಾಳ, ಬಳೂರ್ಗಿ ಸೇರಿದಂತೆ ತಾಲೂಕಿನೆಲ್ಲೆಡೆ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

