Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮೂಲಸೌಕರ್ಯ ಒದಗಿಸಲು ಆಗ್ರಹಿಸಿ ಕರವೇ ಪ್ರತಿಭಟನೆ

ಅಗ್ನಿ ಅವಘಡ ತಡೆಗೆ ಜಾಗೃತಿ ಅತ್ಯಗತ್ಯ :ಹೂಗಾರ

ನೀಟ್ & ಇತರ ಪರೀಕ್ಷೆಗಳ ಅವ್ಯವಸ್ಥೆ ಖಂಡಿಸಿ ಡಿಎಸ್ಸೆಸ್ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರಾಜ್ಯ ಸರಕಾರ ಎಲ್ಲ ಹಗರಣಗಳನ್ನು ಸಿಬಿಐಗೆ ವಹಿಸಲಿ :ಸಂಸದ ಜಿಗಜಿಣಗಿ
(ರಾಜ್ಯ ) ಜಿಲ್ಲೆ

ರಾಜ್ಯ ಸರಕಾರ ಎಲ್ಲ ಹಗರಣಗಳನ್ನು ಸಿಬಿಐಗೆ ವಹಿಸಲಿ :ಸಂಸದ ಜಿಗಜಿಣಗಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಿಂದಗಿಯಲ್ಲಿ ಬಿಜೆಪಿ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕಾರಣಿ ಸಭೆ

ಸಿಂದಗಿ: ಸಿಎಂ ಸಿದ್ದರಾಮಯ್ಯ ಅವರ ಸರಕಾರ ವಾಲ್ಮೀಕಿ ಸಮಾಜದ ೧೮೭ಕೋಟಿ ರೂ. ಅನುದಾನ ದುರ್ಬಳಕೆ, ಮುಡಾ ಸೇರಿದಂತೆ ಅನೇಕ ಹಗರಣಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಖುರ್ಚಿಗೆ ಅಂಟಿಕೊಳ್ಳದೇ ಎಲ್ಲ ಹಗರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಸವಾಲು ಎಸೆದರು.
ಪಟ್ಟಣದ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕಾರಣಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದಲಿತ ಸರಕಾರ ಎನ್ನುವ ಸಿಎಂ ಸಿದ್ದರಾಮಯ್ಯ ಸರಕಾರ ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಹಣ ಲೂಟಿ ಮಾಡಿದೆ. ಸಂಸತ್ತಿಗೆ ದೇಶದಲ್ಲಿ ಏಳು ಬಾರಿ ಆರಿಸ ಬಂಸ ಏಕೈಕ ಸದಸ್ಯ ನಾನಾಗಬೇಕಾದರೆ ಅದೃಷ್ಟ ದೇವತೆಯ ಕೃಪಾಕಟಾಕ್ಷದಿಂದ ಅತ್ಯಂತ ತುಳಿತಕ್ಕೊಳಗಾದ ಸಮಾಜದಿಂದ ಬಂದವನನ್ನು ಆರಿಸಿ ತಂದಿದೆ. ನಾನು ಎರಡು ಬಾರಿ ಜಯಗಳಿಸಿದರು ಮೈಮರೆತಿಲ್ಲ. ಕೂಡಗಿ ವಿದ್ಯುತ್‌ಸ್ಥಾವರ ಘಟಕ ತಂದಿದ್ದು ನನ್ನ ಹೆಗ್ಗಳಿಕೆ. ಶೇಡಬಾಳ-ಸಿಂದಗಿ ವಾಡಿ ರೈಲು ಮಾರ್ಗದ ವಿಚಾರವಾಗಿ ಸಂಬಂಧಿಸಿದ ಸಚಿವರ ಜೊತೆ ಮಾತನಾಡುವೆ. ವಿಜಯಪುರ ವಿಮಾನ ನಿಲ್ದಾಣ ಪ್ರಾರಂಭವಾಗಲು ಫಾಯರ್ ಫೈಟರ್ ಯಂತ್ರದ ಕೊರತೆಯಿಂದಾಗಿ ವಿಳಂಬವಾಗುತ್ತಿದೆ.
ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಕಾಂಗ್ರೆಸ್ ಸರಕಾರ ವರ್ಷ ತುಂಬುವುದರಲ್ಲೇ ಸಾಕಷ್ಟು ಹಗರಣಗಳ ಮೂಲಕ ಹೆಸರು ಕೆಡಿಸಿಕೊಂಡಿದೆ. ಕಾಂಗ್ರೆಸ್ ಸರಕಾರ ಹಗರಣಗಳ ಸರಮಾಲೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ಎರಡು ತಿಂಗಳ ಗೃಹಲಕ್ಷ್ಮೀ ಹಣ ಒಮ್ಮಿಲೆ ಹಾಕಿದ್ದೀರಿ. ಆದರೆ ಇದೀಗ ಮೂರು ತಿಂಗಳಾದರೂ ಹಣ ಬಂದಿಲ್ಲ. ತಾಲೂಕಿನ ರಸ್ತೆಗಳು ಹದಗೆಟ್ಟಿವೆ. ಎಲ್ಲಿ ನೋಡಿದರೂ ಗುಂಡಿಗಳೇ ಕಾಣುತ್ತವೆ. ಮುಂದಿನ ದಿನಮಾನಗಳಲ್ಲಿ ಅವುಗಳನ್ನು ಸರಿಪಡಿಸದೇ ಹೋದಲ್ಲಿ ಆ ಗುಂಡಿಗಳಲ್ಲೇ ಮರಗಳನ್ನು ನೆಟ್ಟು ಪ್ರತಿಭಟನೆ ಮಾಡಿ ಕಾರ್ಯಸಾಧನೆಯನ್ನು ಬಹಿರಂಗ ಪಡಿಸಲಾಗುವುದು. ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿರುವುದ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.
ಇದೇ ಸಂದರ್ಭದಲ್ಲಿ ಬಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಶೇಡಬಾಳ-ಸಿಂದಗಿ ವಾಡಿ ರೈಲು ಮಾರ್ಗವಾಗಬೇಕು ಎಂದು ಒತ್ತಾಯಿಸಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಎಂ.ಎನ್.ಪಾಟೀಲ, ಅಶೋಕ ಅಲ್ಲಾಪೂರ, ಮಲ್ಲಿಕಾರ್ಜುನ ಜೋಗುರ, ಸಿದ್ದು ಬುಳ್ಳಾ, ಈರಣ್ಣ ರಾವೂರ, ಮಳುಗೌಡ ಪಾಟೀಲ, ಡಾ.ಸಂದೀಪ ಪಾಟೀಲ, ಬಾಬುಗೌಡ ಪಾಟೀಲ, ಬಿ.ಆರ್.ಯಂಟಮಾನ, ಶ್ರೀಮಂತ ನಾಗೂರ, ಎಂ.ಎಸ್.ಮಠ, ಶಿಲ್ಪಾ ಕುದರಗೊಂಡ, ನಿಲಮ್ಮ ಯಡ್ರಾಮಿ, ಶಿವಕುಮಾರ ಬಿರಾದಾರ, ಗುರು ತಳವಾರ, ಸಿದ್ದರಾಮ ಅನಗೊಂಡ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

” ಸಿಂದಗಿ ತಾಲೂಕಿಗೆ ರೂ.೮೫ಸಾವಿರ ಕೋಟಿ ವೆಚ್ಚದ ಕೇಂದ್ರ ಸರಕಾರದ ಜೆಜೆಎಂ ಕುಡಿಯುವ ನೀರು ಯೋಜನೆ ಕಾಮಗಾರಿ ಟೆಂಡರ್ ಆಗಿದ್ದರೂ ಚುನಾವಣೆ ಘೋ಼ಷಣೆ ಹಿನ್ನೆಲೆಯಲ್ಲಿ ಆರಂಭವಾಗಲಿಲ್ಲ. ೨೦೦ಕೋಟಿ ವೆಚ್ಚದ ಚಿಮ್ಮಲಗಿ ಏತ ನೀರಾವರಿ ಟೆಂಡರ್ ಆಗಿ ಗುತ್ತಿಗೆಯೂ ನಿಗದಿಯಾಗಿತ್ತು. ಆದರೆ ಅನುಮೋದನೆ ತಡವಾಗಿತ್ತು. ಎರಡು ಕಾಮಗಾರಿಗಳು ನನ್ನ ಅವಧಿಯಲ್ಲಿ ಮಂಜೂರಗೊಂಡಿದ್ದವು. ಆದರೆ ಇಂದಿನ ಶಾಸಕರು ನನ್ನ ಕಾಮಗಾರಿ ಎಂದು ಭೂಮಿಪೂಜೆಗಳಲ್ಲಿ ಹೇಳುತ್ತಾರೆ. ಇದರ ಬಗ್ಗೆ ಶಾಸಕ ಅಶೋಕ ಮನಗೂಳಿ ಬಹಿರಂಗ ಚರ್ಚೆಗೆ ಬರಬೇಕು.”

– ರಮೇಶ ಭುಸನೂರ, ಮಾಜಿ ಶಾಸಕರು

” ನನ್ನ ಅನಾರೋಗ್ಯ ಸ್ಥಿತಿಯಲ್ಲಿಯೂ ೪೪ ಡಿಗ್ರಿ ಉಷ್ಣಾಂಶದ ಮಧ್ಯದಲ್ಲಿ ಮತಕ್ಷೇತ್ರದ ಎಲ್ಲ ಕಡೆಗಳಲ್ಲಿ ಸುತ್ತಾಡಿ ಮತಯಾಚನೆ ಮಾಡಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ಈ ಚಾನಾವಣೆಯಲ್ಲಿ ಜಯಶಾಲಿಯನ್ನಾಗಿ ಮಾಡಿದ್ದೀರಿ ನಿಮ್ಮ ಋಣವನ್ನು ನಾನೆಂದು ಮರೆಯಲಾರೆ” ಎಂದು ಸಂಸದ ರಮೇಶ ಜಿಗಜಿಣಗಿ ಭಾವುಕರಾಗಿ ಕಣ್ಣೀರು ಸುರಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮೂಲಸೌಕರ್ಯ ಒದಗಿಸಲು ಆಗ್ರಹಿಸಿ ಕರವೇ ಪ್ರತಿಭಟನೆ

ಅಗ್ನಿ ಅವಘಡ ತಡೆಗೆ ಜಾಗೃತಿ ಅತ್ಯಗತ್ಯ :ಹೂಗಾರ

ನೀಟ್ & ಇತರ ಪರೀಕ್ಷೆಗಳ ಅವ್ಯವಸ್ಥೆ ಖಂಡಿಸಿ ಡಿಎಸ್ಸೆಸ್ ಮನವಿ

ಕೂಲಿಕಾರರು ವಲಸೆ ಹೋಗುವ ಅಗತ್ಯವಿಲ್ಲ :ಇಓ ಅಗ್ನಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮೂಲಸೌಕರ್ಯ ಒದಗಿಸಲು ಆಗ್ರಹಿಸಿ ಕರವೇ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಅಗ್ನಿ ಅವಘಡ ತಡೆಗೆ ಜಾಗೃತಿ ಅತ್ಯಗತ್ಯ :ಹೂಗಾರ
    In (ರಾಜ್ಯ ) ಜಿಲ್ಲೆ
  • ನೀಟ್ & ಇತರ ಪರೀಕ್ಷೆಗಳ ಅವ್ಯವಸ್ಥೆ ಖಂಡಿಸಿ ಡಿಎಸ್ಸೆಸ್ ಮನವಿ
    In (ರಾಜ್ಯ ) ಜಿಲ್ಲೆ
  • ಕೂಲಿಕಾರರು ವಲಸೆ ಹೋಗುವ ಅಗತ್ಯವಿಲ್ಲ :ಇಓ ಅಗ್ನಿ
    In (ರಾಜ್ಯ ) ಜಿಲ್ಲೆ
  • “ನಿಸರ್ಗ ಪ್ರೀಯರ ರಮಣೀಯ ತಾಣ ಸಾವಳಗಿ ಗುಡ್ಡ
    In (ರಾಜ್ಯ ) ಜಿಲ್ಲೆ
  • ದಾಸೋಹ, ದಾನ-ಧರ್ಮ ಸಂಸ್ಕೃತಿ, ಸಂಸ್ಕಾರ ಅಗತ್ಯ :ಶಾಸಕ ಯತ್ನಾಳ
    In (ರಾಜ್ಯ ) ಜಿಲ್ಲೆ
  • ವಂಶಪಾರಂಪರ್ಯಕ್ಕಿಂತ ವ್ಯಕ್ತಿತ್ವವೇ ಶ್ರೇಷ್ಟ
    In ವಿಶೇಷ ಲೇಖನ
  • ಒಳ ದನಿಯ ಶಕ್ತಿ
    In ಆರೋಗ್ಯ
  • “ವಿಬಿ ಜಿ ರಾಮ ಜಿ” ಕುರಿತು ಮನೆ ಮನೆಗೂ ಮಾಹಿತಿ ಒದಗಿಸಿ
    In (ರಾಜ್ಯ ) ಜಿಲ್ಲೆ
  • ಉತ್ತಮ ಜೀವನಶೈಲಿ ಮೂಲಕ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.