ಅಫಜಲಪುರ: ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹೀಂದುಳಿದಿರುವ ಹೂಗಾರ ಸಮಾಜಕ್ಕೆ ಮುನ್ನೆಲೆಗೆ ತರಲು ಹೂಗಾರ ಅಭಿವೃದ್ದಿ ನಿಗಮಕ್ಕೆ ಸರ್ಕಾರ ೧೦೦ ಕೋಟಿ ಅನುದಾನ ಮೀಸಲಿಡಬೇಕೆಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾದ್ಯಕ್ಷ ರಮೇಶ ಹೂಗಾರ ಒತ್ತಾಯಿಸಿದರು.
ಅವರು ಪಟ್ಟಣದ ತಹಸೀಲ ಕಛೇರಿಯಿಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ ೪೦ ವರ್ಷಗಳಿಂದ ನಮ್ಮ ಸಮಾಜಕ್ಕೆ ಸಿಗಬೇಕಾದ ಸೌಕರ್ಯಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ಯಾವ ಸರ್ಕಾರವು ನಮ್ಮ ಸಮಾಜಕ್ಕೆ ಸೌಲಭ್ಯಗಳನ್ನು ನೀಡುತ್ತಿಲ್ಲ. ಈ ತಾರತಮ್ಯ ಧೋರಣೆ ಬಿಟ್ಟು ಈಗಿನ ಸರ್ಕಾರ ನಮ್ಮ ನಿಗಮಕ್ಕೆ ೧೦೦ ಕೋಟಿ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿದ ಅವರು ಅನುದಾನ ಮೀಸಲಿಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಮ ಅವಟೆ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಧ್ಯಕ್ಷ ಸುರೇಶ ತೇಲಿ, ಖಜಾಂಚಿ ಮಂಜುನಾಥ ಹೂಗಾರ, ಮಹಾಂತೇಶ ಹೂಗಾರ, ಶ್ರೀಶೈಲ್ ಹೂಗಾರ, ಸಿದ್ದೇಶ್ವರ ಹೂಗಾರ, ಗುಂಡು ಹೂಗಾರ, ಗಿರಿಮಲ್ಲಪ್ಪ ಹೂಗಾರ, ಶಿವಲಿಂಗ ಹೂಗಾರ, ನಿಂಗಣ್ಣ ಹೂಗಾರ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

