ಸಿಂದಗಿ: ಎಸ್.ಟಿ.ಸಮುದಾಯದ ಬೆಳವಣಿಗೆಗೆ ಬಳಕೆಯಾಗಬೇಕಿದ್ದ ೧೮೭ ಕೋಟಿ ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆದು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮತದಾರಿಗೆ ಆಮಿಷವೊಡ್ಡಲು, ಮಧ್ಯಪಾನ ಹಂಚಲು ಬಳಸಿರುವುದು ಜಗತ್ ಜಾಹಿರವಾಗಿದೆ ಎಂದು ಎಸ್.ಟಿ.ಮೋರ್ಚಾ ತಾಲೂಕಾಧ್ಯಕ್ಷ ಪ್ರಶಾಂತ ಕದ್ದರಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯಾದ್ಯಂತ ಇಷ್ಟೆಲ್ಲಾ ಹೋರಾಟ, ಆಕ್ರೋಶಗಳು ಸಿಎಂ ಸಿದ್ದರಾಮಯ್ಯ ಮತ್ತು ಸರಕಾರಗಳ ವಿರುದ್ದ ವ್ಯಕ್ತವಾಗುತ್ತಿದ್ದರೂ ಖುರ್ಚಿಗೆ ಅಂಟಿಕೊಂಡು ಕುಳಿತು ದಲಿತ ವಿರೋಧಿ ಸರ್ಕಾರ ನಡೆಸುತ್ತಿದ್ದಾರೆ. ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ ಸಚಿವ ಬಿ.ನಾಗೇಂದ್ರ ಒಬ್ಬರನ್ನೇ ತಲೆದಂಡ ಮಾಡಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ. ಹಣಕಾಸು ಇಲಾಖೆಯನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಾ ಈ ಪ್ರಕರಣಕ್ಕೆ ನೇರ ಹೊಣೆಗಾರಾಗುತ್ತಾರೆ. ಕಾರಣ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕದ್ದರಕಿ ಆಗ್ರಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

