Subscribe to Updates
Get the latest creative news from FooBar about art, design and business.
Author: editor.udayarashmi@gmail.com
” ವಿಕಸಿತ ಭಾರತದ ಆಶಯದೊಂದಿಗೆ ಹಲವು ಆರ್ಥಿಕ ಸುಧಾರಣಾ ಕ್ರಮ. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ 1.48 ಲಕ್ಷ ಕೋಟಿ ಮೀಸಲು, ಗ್ರಾಮೀಣ ಭಾಗದ ಆರ್ಥಿಕತೆ ವೃದ್ದಿಗೆ ಆದ್ಯತೆ, ಬಡವರು, ಮಹಿಳೆಯರು, ರೈತರು ಹಾಗೂ ಯುವಕರತ್ತ ಸರ್ಕಾರದ ಚಿತ್ತ , ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು ಇದೊಂದು ಐತಿಹಾಸಿಕ ಬಜೆಟ್ ಆಗಿದೆ.” – ರಮೇಶ ಜಿಗಜಿಣಗಿಸಂಸದರು, ವಿಜಯಪುರ
” ವಿಕಸಿತ ಭಾರತದ ಆಶಯದೊಂದಿಗೆ ಹಲವು ಆರ್ಥಿಕ ಸುಧಾರಣಾ ಕ್ರಮ. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ 1.48 ಲಕ್ಷ ಕೋಟಿ ಮೀಸಲು, ಗ್ರಾಮೀಣ ಭಾಗದ ಆರ್ಥಿಕತೆ ವೃದ್ದಿಗೆ ಆದ್ಯತೆ, ಬಡವರು, ಮಹಿಳೆಯರು, ರೈತರು ಹಾಗೂ ಯುವಕರತ್ತ ಸರ್ಕಾರದ ಚಿತ್ತ , ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು ಇದೊಂದು ಐತಿಹಾಸಿಕ ಬಜೆಟ್ ಆಗಿದೆ.” – ರಮೇಶ ಜಿಗಜಿಣಗಿಸಂಸದರು, ವಿಜಯಪುರ
ಕೆಂಭಾವಿ: ರಾಜ್ಯದ ಪ.ಜಾತಿ/ಪ.ಪಂ ಜನರ ಸರ್ವಾಂಗೀಣ ಪ್ರಗತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದವಿವಿಧ ಬೇಡಿಕೆಗಳನ್ನೊಳಗೊಂಡ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪತಹಸೀಲ್ದಾರವರ ಮೂಲಕ ಸಲ್ಲಿಸಲಾಯಿತು.ಕ.ರಾ.ದ.ಸ. ಸಮಿತಿಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಈ ಬಾರಿ ಪ್ರತಿಯೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತಗಳು ಚಲಾವಣೆ ಮಾಡಿ ತಮ್ಮ ಪಕ್ಷಕ್ಕೆ ಬೆಂಬಲ ನೀಡಿತ್ತು. ಸಾಮಾಜಿಕ ನ್ಯಾಯ ಈಡೇರಿಸುವ ಜನಪ್ರಿಯ ಮತ್ತು ಬದ್ಧತೆಯಿರುವ ಮುಖ್ಯಮಂತ್ರಿಗಳು ತಾವಾಗಿದ್ದು, ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮತ್ತು ಸಮಸ್ತ ಶೋಷಿತ ಸಮುದಾಯಗಳ ಸರ್ವಾಂಗೀಣ ಪ್ರಗತಿ ಆಗಬೇಕಿದೆ.ಸಂವಿಧಾನಕ್ಕೆ ತರಲಾಗಿರುವ 93ನೇ ತಿದ್ದುಪಡಿಯನ್ವಯ ಉನ್ನತ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ, ಹಾಸ್ಟೆಲ್ ಗಳ ಮೂಲಭೂತ ಸೌಕರ್ಯ ಪೂರೈಕೆ, ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸುವ ಎಲ್ಲಾ ಎಸ್ಸಿ/ ಎಸ್ಟಿ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ, ನಾಗರೀಕ ಹಕ್ಕುಗಳ ರಕ್ಷಣೆ ಕಾಯ್ದೆ, ದೌರ್ಜನ್ಯ ತಡೆ ಕಾಯ್ದೆ ಸಮರ್ಪಕ ಅನುಷ್ಠಾನ, ಅಪರಾಧಗಳ…
ಕೆಂಭಾವಿ: ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕ್ರೆಡಿಟ್ ಎಕ್ಸಿಸ್ ಗ್ರಾಮೀಣ ಲಿಮಿಟೆಡ್ ಸಹಯೋಗದಲ್ಲಿ ಮಂಗಳವಾರ ಜರುಗಿದ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್, ಪದವಿ ಓದುತ್ತಿರುವಾಗಲೇ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಿಕೊಂಡು ಬರುತ್ತಿದ್ದು, ಇಂತಹ ಉದ್ಯೋಗ ಮೇಳ ನಿರುದ್ಯೋಗ ನಿವಾರಣೆಗೆ ಸಹಕಾರಿಯಾಗಲಿದೆ ಈ ಸೌಲಭ್ಯ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರವಿದೆ, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.ಸಂಸ್ಥೆಯ ಮ್ಯಾನೇಜರ್ ಸುಧೀಂದ್ರ ಮಾತನಾಡಿ, ಸುಮಾರು 20 ವರ್ಷಗಳಿಂದ ಆರಂಭವಾದ ನಮ್ಮ ಸಂಸ್ಥೆ 17 ರಾಜ್ಯಗಳಲ್ಲಿ 19 ಸಾವಿರ ಉದ್ಯೋಗಿಗಳನ್ನು ಹೊಂದಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ, ಆರ್ಥಿಕ ಧನ ಸಹಾಯ ನೀಡಿ ಸ್ವಂತ ಉದ್ಯೋಗ ಕೈಗೊಳ್ಳಲು ನೆರವು ನೀಡಲಾಗುತ್ತಿದೆ ಎಂದವರು. ಉದ್ಯೋಗ ಕೈಕೊಳ್ಳಲು ಮುಂದೆ ಬಂದು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಆರಂಭದಲ್ಲಿ ರೂಪಾಯಿ 13500/- ಮಾಸಿಕ ವೇತನ, 6 ತಿಂಗಳೊಳಗೆ ಉದ್ಯೋಗ ಕಾಯಂ…
ಇಂಡಿ: ಪಟ್ಟಣದ ಶ್ರೀಕಾಂತ ಸಾಲೋಟಗಿಯವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪಿ.ಎಚ್.ಡಿ ಪ್ರಧಾನ ಮಾಡಿ ಗೌರವಿಸಿದೆ.ಅವರು ಆಪ್ಟಿಮೈಜೇಷನ್ ಆಫ್ ರಿಸರ್ಚ ಅಲೋಕೆಷನಿನ್ ಇಂಟರ್ ನೆಟ್ ಆಫ್ ಥಿಂಗ್ಸ ಅಪ್ಲಿಕೇಷನ್ ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದರು.ಅವರಿಗೆ ಡಾ. ಜಯಶ್ರೀ ಮಲ್ಲಾಪುರ ಮಾರ್ಗದರ್ಶಕ ರಾಗಿದ್ದರು.ಇವರು ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಅಧ್ಯಯನ ಮಾಡಿದ್ದಾರೆ.
ವಿಜಯಪುರ: ಪ್ರತೀ ವರ್ಷದಂತೆ ಈ ವರ್ಷವೂ ನಗರದ ಇಬ್ರಾಹಿಂಪುರದಲ್ಲಿ ಮಾತಾ ಶ್ರೀ ಮರಗಮ್ಮ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.ಜಾತ್ರೆಯ ಪ್ರಯುಕ್ತ ಶ್ರೀ ಮರಗಮ್ಮದೇವಿ ದೇವಸ್ಥಾನಕ್ಕೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಿ ಮುಂಭಾಗದಲ್ಲಿ ಭವ್ಯ ಶಾಮೀಯಾನ ನಿರ್ಮಿಸಿ ಬಾಳೆಗಿಡ, ತಳಿರು-ಹೂವಿನ ತೋರಣ ಕಟ್ಟಲಾಗಿತ್ತು.ದೇವಿಗೆ ಹೂವಿನದಂಡೆ, ಹಾರಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.ಬೆಳಗ್ಗೆ ದೇವಿಗೆ ಅಭಿಷೇಕ, ಆರತಿ, ವಿಶೇಷ ಪೂಜೆ ನಡೆಯಿತು. ದೇವಿಯ ದರ್ಶನಕ್ಕೆ ಜಿಟಿ-ಜಿಟಿ ಮಳೆಯ ನಡುವೆಯೇ ಭಕ್ತರು ಬೆಳಗಿನ ಜಾವದಿಂದಲೇ ದೇವಸ್ಥಾನಕ್ಕೆ ತೆರಳುತ್ತಿದ್ದುದು ಕಂಡುಬಂತು. ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿತ್ತು.ಇಬ್ರಾಹಿಂಪುರ ಹಾಗೂ ಸುತ್ತಮುತ್ತಲಿನ ವಿವಿಧ ಬಡಾವಣೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿಗೆ ನೀರೆರೆದು ಹೂವು, ಕಾಯಿ, ನೈವೇದ್ಯ ಸಮರ್ಪಿಸಿ ಭಕ್ತಿಭಾವದಿಂದ ನಮಿಸಿದರು.ಮಧ್ಯಾಹ್ನ ಗ್ರಾಮದಲ್ಲಿ ಡೊಳ್ಳು ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಮರಗಮ್ಮ ದೇವಿಯ ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಿತು.ಪಲ್ಲಕ್ಕಿ ಉತ್ಸವದ ಬಳಿಕ ಸಂಜೆ ಮರಗಮ್ಮ ದೇವಿ ದೇವಸ್ಥಾನದ ಮುಂದೆ ಪ್ರತೀ ವರ್ಷದ…
ಆಮ್ ಆದ್ಮಿ ಪಕ್ಷದ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆರೋಪ ವಿಜಯಪುರ: ಬಜೆಟ್ 2024 ” ಪ್ರಧಾನ ಮಂತ್ರಿ ಸರ್ಕಾರ ಬಚಾವೋ” ಬಜೆಟ್ ಎಂದು ಆಮ್ ಆದ್ಮಿ ಪಕ್ಷ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆರೋಪ ಮಾಡಿದ್ದಾರೆ.ವಿಫಲವಾದ ಸರ್ಕಾರದ ವಿಫಲ ಹಣಕಾಸು ಸಚಿವರಿಂದ ಪ್ರಸ್ತುತಪಡಿಸಲಾದ ಶೂನ್ಯ ವಾರಂಟಿಯೊಂದಿಗೆ ಈ ಬಜೆಟ್ ಸಂಪೂರ್ಣ ವಿಫಲವಾಗಿದೆ. ನಿರುದ್ಯೋಗ, ಏರುತ್ತಿರುವ ಬೆಲೆಗಳು ಮತ್ತು ಹೆಚ್ಚುತ್ತಿರುವ ಹಣದುಬ್ಬರದಂತಹ ತುರ್ತು ಸಮಸ್ಯೆಗಳನ್ನು ನಿಭಾಯಿಸುವ ಬದಲು, ಬಿಜೆಪಿಯು ತನ್ನ ಸಮ್ಮಿಶ್ರ ಪಾಲುದಾರರಿಗೆ ಲಂಚ ನೀಡಲು ಈ ಬಜೆಟ್ ರೂಪಿಸಿದೆ. ಬಜೆಟ್ 2024 ಒಕ್ಕೂಟ ವ್ಯವಸ್ಥೆಯ ವಿರೋಧಿ, ಕರ್ನಾಟಕ ವಿರೋಧಿ ಬಜೆಟ್ ಆಗಿದೆ.ಬಿಜೆಪಿಯು ತನ್ನ ಸರ್ಕಾರವನ್ನು ಉಳಿಸಲು ಬಯಸುತ್ತಿದೆ ಮತ್ತು ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್‌ನ ದೊಡ್ಡ ಮೊತ್ತವನ್ನು ನೀಡುತ್ತಿದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.ಆದರೆ ಕರ್ನಾಟಕದ ತಪ್ಪೇನು? ನಾವು ಅತಿ ಹೆಚ್ಚು ತೆರಿಗೆ ಕಟ್ಟುತ್ತೇವೆ. ನಾವು ಕೊಡುಗೆ ನೀಡುವುದರ ಬದಲಾಗಿ ನಾವು ಏನು ಪಡೆದುಕೊಂಡಿದ್ದೇವೆ?ಬಜೆಟ್‌ನಲ್ಲಿ ಕರ್ನಾಟಕದ ಬಗ್ಗೆ ಒಮ್ಮೆಯಾದರೂ ಪ್ರಸ್ತಾಪಿಸಲಾಗಿದೆಯೇ? ಬಿಜೆಪಿಯವರು…
” ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಸಂಪೂರ್ಣ ಜನವಿರೋಧಿಯಾಗಿದ್ದು, ಯಾವುದೇ ಅಭಿವೃದ್ಧಿ ಯೋಜನೆಗೆ ಮಹತ್ವ ನೀಡಿಲ್ಲ. ಕಳೆದ ಹತ್ತು ವರ್ಷಗಳಿಂದ ಕೇವಲ ಬಜೆಟ್ ಮಂಡನೆಯಾಗುತ್ತಿದೆ ಅಷ್ಟೇ, ಅದರ ಅನುಷ್ಠಾನವಾಗುತ್ತಿಲ್ಲ. ಜನರಿಗೆ ಕೇವಲ ಮಾತಿನಿಂದಲೇ ಮರಳು ಮಾಡುತ್ತ ಮೋಡಿ ಮಾಡುತ್ತಿದ್ದಾರೆ. ಮದ್ಯಮ ಕೆಳವರ್ಗದ ಸಂಪೂರ್ಣ ವಿರೋಧಿ ಬಜೆಟ್ ಆಗಿದ್ದು, ಶ್ರೀಮಂತರ ಪರವಾಗಿದೆ. ಇವರ ಒಂದು ಯೋಜನೆಗಳು ಪೂರ್ಣಗೊಂಡಿಲ್ಲ. ಇರುವ ಯೋಜನೆಗಳೆಲ್ಲ ಕಳಪೆ ಮಟ್ಟದ್ದಾಗಿದ್ದು, ಇದ್ದ ವಸ್ತುಗಳಿಗೆಲ್ಲ ಜಿಎಸ್‌ಟಿ ಮೂಲಕ ಬೆಲೆ ಹೆಚ್ಚಳ ಮಾಡಿದ್ದು, ಜನಸಮಾನ್ಯರಿಗೆ ಹೊರೆಯಾಗಿದೆ. ವಿಶೇಷವಾಗಿ ನಮ್ಮ ಕರ್ನಾಟಕಕ್ಕೆ ಯಾವುದೇ ಹೇಳಿಕೊಳ್ಳುವಂತ ಯೋಜನೆಗಳನ್ನು ನೀಡದೆ ಮಲತಾಯಿ ಧೋರಣೆ ಮುಂದುವರೆಸಿದ್ದಾರೆ.” – ಅಬ್ದುಲ್‌ಹಮೀದ ಮುಶ್ರೀಫ್ಕಾಂಗ್ರೆಸ್ ಮುಖಂಡರು, ವಿಜಯಪುರ
” ಪ್ರಸ್ತುತ ಬಜೆಟ್ಟಿನಲ್ಲಿ ಮೀನುಗಾರಿಕಾ ಇಲಾಖೆಗೆ ೨೫೮೪. ೫೦ ಕೋಟಿ ರೂ ಮೀಸಲಾಗಿಟ್ಟಿರುವುದು ಸ್ವಾಗತಾರ್ಹ.ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಆಕ್ವಾಕಲ್ಚರ್ ಉತ್ಪಾದನೆಯನ್ನು ಹೆಚ್ಚಿಸಲು, ರಫ್ತುಗಳನ್ನು ೧ ಲಕ್ಷ ಕೋಟಿಗೆ ದ್ವಿಗುಣಗೊಳಿಸಲು ಮತ್ತು ೫೫ ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮಾಡಿರುವ ಪ್ರಯತ್ನ , ಹವಾಮಾನ ಸ್ಥಿತಿಸ್ಥಾಪಕ ಚಟುವಟಿಕೆಗಳನ್ನು ಉತ್ತೇಜಿಸಲು ನೀಲಿ ಆರ್ಥಿಕತೆ ೨.0 ಆರಂಭಿಸುವ ಯೋಜನೆ, ಸಮಗ್ರ ಮತ್ತು ಬಹುವಲಯ ವಿಧಾನದೊಂದಿಗೆ ಕರಾವಳಿ ಜಲಕೃಷಿ ಮತ್ತು ಮಾರಿಕಲ್ಚರ್ ಅಭಿವೃದ್ಧಿ ಮಾಡುವ ಯೋಜನೆಗಳು ಶ್ಲಾಘನೀಯ.ಮತ್ತೊಮ್ಮೆ ಮೀನುಗಾರರ ಆರೋಗ್ಯ ವಿಮೆ ಮತ್ತು ಮೀನುಗಾರಿಕೆಯ ಸಂಧರ್ಭದಲ್ಲಿ ಆಗುವ ಅವಘಡ ಅಪಘಾತಗಳಿಗೆ ಪರಿಹಾರ ಪ್ರಸ್ತಾಪಿಸದೆ ಇರುವುದು ಬೇಸರ ತಂದಿದೆ.” ಡಾ.ಗೌತಮ್ ಆರ್ ಚೌಧರಿರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ
” ಕೇಂದ್ರ ವಿತ್ತ ಸಚಿವೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಬಡವರ ಹಿತ, ಯುವಕರಿಗೆ ಆರ್ಥಿಕ ಸಬಲೀಕರಣ, ರೈತ ಹಿತರಕ್ಷಣೆಯ ತ್ರಿವೇಣಿ ಸಂಗಮವಾಗಿದೆ.ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೩ ಕೋಟಿ ಮನೆ ನಿರ್ಮಾಣ ಬಡವರಿಗೆ ಸ್ವಂತ ಸೂರಿನ ಕನಸನ್ನು ನನಸು ಮಾಡಿದರೆ, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಮೂಲಕ ಉಚಿತ ವಿದ್ಯುತ್ ಪ್ರತಿಯೊಬ್ಬ ನಿವಾಸಿಗಳಿಗೆ ವರದಾನವಾಗಿದೆ.ಮಹಿಳಾ ಕಲ್ಯಾಣಕ್ಕೆ ೩ ಲಕ್ಷ ಕೋಟಿ ರೂ.ಗಳ ಬೃಹತ್ ಅನುದಾನ, ಸಣ್ಣ ಕೈಗಾರಿಕಾ ಸಾಲ ಖಾತ್ರಿ ಯೋಜನೆ ಹಾಗೂ ಮುದ್ರಾ ಸಾಲ ಯೋಜನೆಯನ್ನು ೨೦ ಲಕ್ಷಕ್ಕೆ ಏರಿಕೆ, ೩೦ ಲಕ್ಷ ಯುವಕರಿಗೆ ಉದ್ಯೋಗ ಭರವಸೆ ಹೀಗೆ ಅನೇಕ ಮಹತ್ವದ ಯೋಜನೆಗಳ ಮೂಲಕ ಜನಸ್ನೇಹಿ, ಜನರ ಪ್ರಗತಿಗೆ ಪೂರಕವಾದ ಬಜೆಟ್ ಮಂಡನೆಯಾಗಿದೆ.” – ಉಮೇಶ ಕಾರಜೋಳರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಎಸ್.ಸಿ. ಮೋರ್ಚಾ
