ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೀರಶೈವ ಲಿಂಗಾಯತರು ಬಸವಣ್ಣ ಕಂಡಂತಹ ಸಮುದಾಯವಿದೆ. ಅವರ ವಿಚಾರಧಾರೆ ಮೆಚ್ಚುವಂತಹದ್ದು. ದಾಸೋಹ, ದಾನಧರ್ಮ ಸಂಸ್ಕೃತಿ ಸಂಸ್ಕಾರ ಇರುವುದೇ ವೀರಶೈವ ಲಿಂಗಾಯತರಲ್ಲಿ. ಸಂಪ್ರದಾಯ, ಅನ್ನಪ್ರಸಾದ ಶಿಕ್ಷಣದ ಮಹತ್ವ ಮೂಲಕ ಸಮಾಜದ ಜನರಿಗೆ ಒಳ್ಳೆಯದನ್ನು ಮಾಡಬೇಕು ಹಿತವನ್ನು ಬಯಸುವ ನಮ್ಮ ವೀರಶೈವ ಲಿಂಗಾಯತರು ಒಂದಾಗಬೇಕು. ಒಗ್ಗೂಡಬೇಕು ಅಂದಾಗ ಮಾತ್ರ ಸಮಾಜ ಸಮೃದ್ಧಿಯಾಗಲು ಸಾಧ್ಯ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕ ವಿಜಯಪುರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಎರಡನೇ ದಿನದ ಕಾರ್ಯಾಗಾರದಲ್ಲಿ ಅವರು ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದರು.
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಸದ್ಗುರು ಅಭಿನವ ಸಿದ್ದಾರೂಢ ಸ್ವಾಮಿಗಳು ಆಶೀರ್ವಚನ ನೀಡಿ ವೀರಶೈವ ಲಿಂಗಾಯತ ಸಮಾಜದಲ್ಲಿ ಒಗ್ಗೂಡುವ ಕಾರ್ಯವಾಗಬೇಕು. ಮತ್ತೊಬ್ಬರ ಮನ್ಸನ್ನು ಮುರಿಯುವಂತಹ ಕೆಲಸವಾಗಬಾರದು. ಅಭಿಯಾನ, ಸ್ವಾಭಿಮಾನ ದೊಡ್ಡದು, ಸದೃಢ ಸಮಾಜವಾಗಬೇಕು ವೀರಶೈವ ತತ್ವ ಸಿದ್ದಾಂತದಂತೆ ಎಲ್ಲರೂ ಕೂಡಿ ನಡೆಯಬೇಕು ಎಂದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ನಾಲ್ಕನೇ ಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ. ರೇಣುಕ ಪ್ರಸನ್ನ ಮಹಾಸಭೆಯ ಸಂವಿಧಾನ ಮತ್ತು ಸಂಘಟನೆ ಕುರಿತು ವಿಶೆಷ ಉಪನ್ಯಾಸ ನೀಡಿದರು.
ರಾಜ್ಯ ಯುವ ಅಧ್ಯಕ್ಷ ಮನೋಹರ ಅಬ್ಬಿಗೆರೆ , ಎಂ.ಜಿ. ಯಾದವಾಡ, ಆರ್.ಎಮ. ತೋಟದ, ಕಮಲಾ ಗೆಜ್ಜಿ ವಿಜಯಕುಮಾರ ಹುಂಡೇಕಾರ ಸಹದೇವ ನಾಡಗೌಡರ ಡಾ. ಸಂಗಮೇಶ ಮೇತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಐದನೇ ಗೋಷ್ಠಿಯಲ್ಲಿ ಪ್ರಸ್ತುತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗುಉ ಜಿ.ಎಸ್.ಟಿ. ಸವಾಲುಗಳು ಕುರಿತು ಬಿ.ಎನ್. ಬಿರಾದಾರ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಕಾರ್ಯಸ್ವರೂಪದ ಪರಿಚಯ ಕುರಿತು ಬಿರಾದಾರ ಉಪನ್ಯಾಸ ನೀಡಿದರು.
ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಇವರ ಅಧ್ಯಕ್ಷತೆಯಲ್ಲಿ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಹಾಗೂ ಇತರ ವಿಭಾಗಗಳ ಪದಾಧಿಕಾರಿಗಳು ಸಂಯುಕ್ತ ಸಭೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಘಟಕದ ಅಧ್ಯಕ್ಷರಿಂದ ಸಮಾರೋಪ ನುಡಿ ಸಲ್ಲಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಸಾಹುಕಾರ, ಎನ್. ಕುಮಸಗಿ, ಉಪಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಸವರಜ ಅಪ್ಪು ಇಟ್ಟಂಗಿ, ಬಸವರಾಜ ಒಂಟಿಗೂಡಿ ಡಾ. ವಿ.ಡಿ. ಐಹೊಳ್ಳಿ, ಮಲ್ಲಿಕಾರ್ಜುನ ಅಮರಣ್ಣವರ, ಮಹಾದೇವ ಹಾಲಳ್ಳಿ ಸುಬಾಸ ಬೇಟಗೇರಿ, ಈರಣ್ಣ ತೊಂಡಿಕಟ್ಟಿ, ಜಗದೀಶ ಮೋಟಗಿ, ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಿಂದ ಅಗಮಿಸಿದ್ದ ವೀರಶೈವ ಸಮಾಜದ ಮುಖಂಡರು ಮಹಿಳಾ ಪ್ರತಿನಿಧಿಗಳು ಯುವಕರು ಹಾಗೂ ನೂರಾರು ಕಾರ್ಯಕರ್ತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಸಂಗಮೇಶ ಬದಾಮಿ ಸುಭಾಸ ಕನ್ನೂರ ಕಾರ್ಯಕ್ರಮ ನಿರೂಪಿಸಿದರು. ವಿ.ಎಸ್. ತೇಲಿ ವಂದಿಸಿದರು.

