ಕೆಂಭಾವಿ: ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕ್ರೆಡಿಟ್ ಎಕ್ಸಿಸ್ ಗ್ರಾಮೀಣ ಲಿಮಿಟೆಡ್ ಸಹಯೋಗದಲ್ಲಿ ಮಂಗಳವಾರ ಜರುಗಿದ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್, ಪದವಿ ಓದುತ್ತಿರುವಾಗಲೇ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಿಕೊಂಡು ಬರುತ್ತಿದ್ದು, ಇಂತಹ ಉದ್ಯೋಗ ಮೇಳ ನಿರುದ್ಯೋಗ ನಿವಾರಣೆಗೆ ಸಹಕಾರಿಯಾಗಲಿದೆ ಈ ಸೌಲಭ್ಯ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರವಿದೆ, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.
ಸಂಸ್ಥೆಯ ಮ್ಯಾನೇಜರ್ ಸುಧೀಂದ್ರ ಮಾತನಾಡಿ, ಸುಮಾರು 20 ವರ್ಷಗಳಿಂದ ಆರಂಭವಾದ ನಮ್ಮ ಸಂಸ್ಥೆ 17 ರಾಜ್ಯಗಳಲ್ಲಿ 19 ಸಾವಿರ ಉದ್ಯೋಗಿಗಳನ್ನು ಹೊಂದಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ, ಆರ್ಥಿಕ ಧನ ಸಹಾಯ ನೀಡಿ ಸ್ವಂತ ಉದ್ಯೋಗ ಕೈಗೊಳ್ಳಲು ನೆರವು ನೀಡಲಾಗುತ್ತಿದೆ ಎಂದವರು. ಉದ್ಯೋಗ ಕೈಕೊಳ್ಳಲು ಮುಂದೆ ಬಂದು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಆರಂಭದಲ್ಲಿ ರೂಪಾಯಿ 13500/- ಮಾಸಿಕ ವೇತನ, 6 ತಿಂಗಳೊಳಗೆ ಉದ್ಯೋಗ ಕಾಯಂ ಆಗಿ, ಇಪಿಎಫ್, ಪಿಎಫ್, ಇನ್ಸೂರೆನ್ಸ್, ಗ್ರಾಚ್ಯೂಟಿ, ಹಾಗೂ ಇನ್ನಿತರ ಸೇವಾ ಸೌಲಭ್ಯಗಳೊಂದಿಗೆ ರೂಪಾಯಿ 15000/- ಸಂಬಳ ಪಡೆಯಬಹುದು ಎಂದರು.
ಪ್ರಾಸ್ತಾವಿಕ ಮಾತನಾಡಿದ ಕಾಲೇಜಿನ ಉದ್ಯೋಗ ಕೋಶಾಧಿಕಾರಿ ನಸ್ರೀನ್ ತಾಜ್, ಉದ್ಯೋಗ ಅರಸಿ ದೂರದ ಊರುಗಳಿಗೆ ಹೋಗುವ ಅಗತ್ಯವಿಲ್ಲ, ನಮ್ಮ ಸುತ್ತ ಮುತ್ತ ಅನೇಕ ಉದ್ಯೋಗ ಅವಕಾಶಗಳಿವೆ ವಿದ್ಯಾರ್ಥಿಗಳು ಉದ್ಯೋಗ ಮೇಳದ ಪ್ರಯೋಜನ ಪಡೆದುಕೊಳ್ಳಲು ತಿಳಿಸಿದರು.
ಉಪನ್ಯಾಸಕರಾದ ಡಾ ನಂದಾ ವಾರದ, ಡಾ ಪ್ರಸಾದ್ ಭಂಡಾರಿ, ಡಾ ಬಸಮ್ಮ ಎಸ್, ಡಾ ಸಿದ್ದಲಿಂಗ ರಾಠೋಡ್, ಡಾ ಪೂಜಾ ಹೊನ್ನುಟಗಿ, ಡಾ ಯಂಕನಗೌಡ ಪಾಟೀಲ, ಮಲ್ಲಣ್ಣ ಬಿಳೇಬಾವಿ, ಮಾಸುಮ ಅಲಿ ನಾಶಿ, ಹಾಗೂ ಸಂಸ್ಥೆಯ ಸಿಬ್ಬಂದಿಗಳಾದ ಪ್ರಕಾಶ, ಪ್ರಮೋದ, ಪ್ರಲ್ಹಾದ ಉಪಸ್ಥಿತರಿದ್ದರು ನಂತರ ಬಿಎ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿನಿಯರಾದ ನಾಗರತ್ನ, ಕನಕಾ, ಗುರಮ್ಮ, ತಬಸುಮ, ನಂದಮ್ಮ, ಕಾವೇರಿ, ಸೇರಿದಂತೆ ಅನೇಕರು ಉದ್ಯೋಗ ಬಯಸಿ ತಮ್ಮ ಪರಿಚಯ ಪತ್ರ ಕಾಲೇಜಿನ ಉದ್ಯೋಗ ಕೋಶಾಧಿಕಾರಿಗೆ ಸಲ್ಲಿಸುವುದಾಗಿ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

