Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕವು ೨೦೨೪ ನೇ ಸಾಲಿನಲ್ಲಿ ಕೊಡಮಾಡುವ ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಬಸವನಬಾಗೇವಾಡಿ ತಾಲೂಕಿನ ಕನ್ನಡಪ್ರಭ ವರದಿಗಾರ, ಹಿರಿಯ ಪತ್ರಕರ್ತ ಬಸವರಾಜ ನಂದಿಹಾಳ, ವಿಜಯವಾಣಿ, ಉದಯವಾಣಿ ತಾಲೂಕು ವರದಿಗಾರ, ಹಿರಿಯ ಪತ್ರಕರ್ತ ಪ್ರಕಾಶ ಬೆಣ್ಣೂರ ಹಾಗೂ ಮನಗೂಳಿ ತಾಲೂಕಿನ ಪತ್ರಿಕಾ ವಿತರಕ ಶಿವಾಜಿ ಮೋರೆ ಅವರು ಆಯ್ಕೆಯಾಗಿದ್ದಾರೆ.ಜು.೨೮ ರಂದು ವಿಜಯಪುರದ ಸೋಲಾಪುರ ರಸ್ತೆಯಲ್ಲಿರುವ ಪೊಲೀಸ್ ಪರೇಡ್ ಮೈದಾನದ ಎದುರು ಇರುವ ಪೊಲೀಸ್ ಸಮುದಾಯ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕವು ಮಧ್ಯಾನ್ಹ 3 ಗಂಟೆಗೆ ಹಮ್ಮಿಕೊಂಡಿರುವ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜೀಜ ಬಳಬಟ್ಟಿ ತಿಳಿಸಿದ್ದಾರೆ.
ಮುದ್ದೇಬಿಹಾಳ: ಜು.೨೮ ರಂದು ಪ್ರತೀ ಭಾನುವಾರದಂತೆ ಬೆಳಿಗ್ಗೆ ೭ಗಂಟೆಯಿಂದ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮ ನಡೆಲಿದೆ. ಬಳಿಕ ಶ್ರಾವಣ ಮಾಸದ ಮೊದಲ ಸೋಮುವಾರ ದಿನದಂದು ಸೂಕ್ಷೇತ್ರ ಕೂಡಲ ಸಂಗಮನಾಥನ ದರ್ಶನಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುವ ಕುರಿತು ಚರ್ಚಿಸಲಿದ್ದು ಸಮಾಜದ ಎಲ್ಲ ಬಾಂಧವರು ಪಾಲ್ಗೊಳ್ಳುವಂತೆ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಮಡಿವಾಳ ಮಾಚಿದೇವ ಹಾಗೂ ಬಸವಾದಿ ಶರಣರು ನುಡಿದಂತೆ ನಡೆದವರು. ನಡೆದದನ್ನೇ ನುಡಿದವರು. ಅವರ ನಂಬಿಕೆ ಮತ್ತು ಆಚರಣೆಯಲ್ಲಿ ಯಾವುದೇ ಅಂತರವಿರಲಿಲ್ಲ. ಬಸವಾದಿ ಶರಣರು ಸತ್ಯ ಶುದ್ಧ ಕಾಯಕಕ್ಕೆ ಎಷ್ಟು ಮಹತ್ವವನ್ನು ನೀಡಿದರೋ ಅಷ್ಟೇ ಮಹತ್ವವನ್ನು ದಾಸೋಹಕ್ಕೆ ನೀಡಿದರು ಎಂದು ಹಿರಿಯ ಜಾನಪದ ಸಾಹಿತಿ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಹೊರವಲಯದ ಶರಣೆ ಶ್ರೀಮತಿ ಗುರುಬಾಯಿ ಡಾ. ಶ್ರೀ ರಾಮಲಿಂಗಪ್ಪ ಮಡಿವಾಳರ ತೋಟದ ಮನೆಯಲ್ಲಿ ತಾಲೂಕು ವಚನೋತ್ಸವ ಸಮಿತಿ 248 ನೇ ವಚನೋತ್ಸವದಲ್ಲಿ ಅವರು ಮಾತನಾಡಿ ೧೨ ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ , ಜಾತೀಯತೆ, ಮೇಲು -ಕೀಳು ತಾರತಮ್ಯ, ಅಸ್ಪ್ರುಶ್ಯತೆ , ಮೂಢ ನಂಬಿಕೆಗಳ ಸೃಷ್ಟಿ , ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ- ಮಡಿವಾಳ ಮಾಚಿದೇವ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು.…
ಬ್ರಹ್ಮದೇವನಮಡು: ಸಮೀಪದ ಕಡಕೋಳ ಮಡಿವಾಳೇಶ್ವರ ಮಹಾಮಠದ ವೀರೇಶ್ವರ ಶಿವಯೋಗಿಗಳ ೩೫ನೇ ಪುಣ್ಶರಾಧನೆ ಮಹೋತ್ಸವ ನಿಮಿತ್ಶ ಜು.೨೮ ರಂದು ಶ್ರೀಮಠದಲ್ಲಿ ವಿವಿಧ ಧಾಮಿ೯ಕ ಕಾಯ೯ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಮಠದ ಡಾ.ರುದ್ರಮುನಿ ಶಿವಾಚಾಯ೯ರು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ೭ಕ್ಕೆ ಶ್ರೀ ಮಡಿವಾಳೇಶ್ವರರ ಕತೃ೯ ಗದ್ದುಗೆಗೆ ರುದ್ರಾಭಿಷೇಕ,ಸಹಸ್ರ ಬಿಲ್ವಾಚ೯ನೆ ಹಾಗೂ ಸಂಜೆ ೪ ಗಂಟೆಗೆ ಶ್ರೀ ವೀರೇಶ್ವರ ಶಿವಯೋಗಿಗಳ ಕತೃ೯ ಮೂತಿ೯ಗೆ ರುದ್ರಾಭಿಷೇಕ,ಸಹಸ್ರ ಬಿಲ್ವಾಚ೯ನೆ ಮಹಾಮಂಗಳಾರತಿ ನಂತರ ಮಹಾ ಪ್ರಸಾದ ನಡೆಯಲಿದೆ. ರಾತ್ರಿ ೮ಕ್ಕೆ ಶ್ರೀಮಠದ ಆವರಣದಲ್ಲಿ ಗುರುವಂದನಾ ಕಾಯ೯ಕ್ರಮ,ಧಮ೯ಸಭೆ ಹಾಗೂ ಮಹಾಪುರಾಣ ದ್ವಿತೀಯ ಮುದ್ರಣ ಲೋಕಾಪ೯ಣೆ ಸಮಾರಂಭ ನಡೆಯುವದು. ಕಾಯ೯ಕ್ರಮದಲ್ಲಿ ವಿವಿಧ ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳು ಸೇರಿದಂತೆ ಮತ್ತಿತ್ತರರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಶೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಡಿ: ಕಾರ್ಗಿಲನಲ್ಲಿ ಹೋರಾಡಿ ಮಡಿದ ವೀರ ಯೋಧರನ್ನು ಸ್ಮರಿಸಬೇಕು. ಶಿಕ್ಷಕರು ಪಾಠದ ಜೊತೆಗೆ ವೀರ ಯೋಧರ ಕಥೆಗಳನ್ನು ಹೇಳಬೇಕು ಇದರಿಂದ ಮಕ್ಕಳಲ್ಲಿ ದೇಶಾಭಿಮಾನ, ಹಾಗೂ ದೇಶಭಕ್ತಿಯನ್ನು ಬೆಳಸಲು ಸಾಧ್ಯಎಂದು ಪ್ರಾಚಾರ್ಯ ಡಾ ಸುಧಾ ಸುಣಗಾರ ಹೇಳಿದರು.ಪಟ್ಟಣದ ಕರ್ನಾಟಕ ಟೀಚರ್ಸ್ ಬಿ.ಈಡಿ ಕಾಲೇಜ್ ಕಾರ್ಗಿಲ್ ವಿಜಯೋತ್ಸವ ೨೫ನೇ ವರ್ಷದ ರಜತ ಮಹೋತ್ಸವವನ್ನು ಆಚರಿಣೆಯಲ್ಲಿ ಮಾತನಾಡಿದರು.ಪ್ರೊ ಸಿ ಎಸ್ ಪೂಜಾರಿ, ಪ್ರಶಿಕ್ಷಣಾರ್ಥಿಯಾದ ತುಕಾರಾಮ ಹೊನ್ನಕೋರೆ, ಕಾವ್ಯ, ರುದ್ರಯ್ಯ ಹಿರೇಮಠ, ಯಾಸಿನ್ ಉಮ್ಮಾಪುರ, ಆನಂದ ಬಲಗೇರಿ, ಅರ್ಚನಾ ಮಾತನಾಡಿದರು.ಉಪನ್ಯಾಸಕರಾದ ಪ್ರೊ ಬಿ. ಕೆ ಉಕುಮನಾಳ. ಪ್ರೊ ಸಿ ಎಸ್ ಪೂಜಾರಿ. ಎಸ್ ಎಸ್ ಉಟಗಿ ಪ್ರೊ ಡಿ ಎಸ್ ಮಠಪತಿ.ಉಪಸ್ಥಿತರಿದ್ದರು ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು. ಕಾರ್ಯಕ್ರಮದಲ್ಲಿ ಬಾಗವಹಿಸಿದರು. ದೇಶಭಕ್ತಿಯ ಗೀತೆ ಯೊಂದಿಗೆ ಯೋಧರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಆಲಮಟ್ಟಿ: ಆಲಮಟ್ಟಿ ಜಲಾಶಯದಿಂದ ಜಲಾವೃತಗೊಂಡ ಜಮೀನಿನ ಬೆಳೆ ಸಮೀಕ್ಷೆ ನಡೆಸಲು ತಹಶೀಲ್ದಾರ್ ಗೆ ಸೂಚಿಸಿದ್ದು, ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದರು.ಆಲಮಟ್ಟಿಯಲ್ಲಿ ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಈಗ ಜಲಾವೃತಗೊಂಡ ಜಮೀನಿನಲ್ಲಿ ಈಗಾಗಲೇ ಭೂಸ್ವಾಧೀನ ಜಮೀನು ಹೆಚ್ಚಿದೆ, ಕೆಲ ಪ್ರಮಾಣದಲ್ಲಿ ಖಾಸಗಿ ಜಾಗ ಇದೆ, ಆಲಮಟ್ಟಿ ಜಲಾಶಯದಿಂದ ೫ ಲಕ್ಷ ಕ್ಯುಸೆಕ್ ನೀರು ಬಿಟ್ಟಾಗ ಜಿಲ್ಲೆಯ ಕೃಷ್ಣಾ ತೀರದ ೧೭ ಗ್ರಾಮಗಳ ಜನವಸತಿ ಪ್ರದೇಶಕ್ಕೆ ನೀರು ನುಗ್ಗಲಿದೆ. ಸದ್ಯಕ್ಕೆ ಆಲಮಟ್ಟಿಯಿಂದ ೩ ಲಕ್ಷ ಕ್ಯುಸೆಕ್ ನೀರು ಬಿಟ್ಟ ಕಾರಣ ಅಪಾಯದ ಮುನ್ಸೂಚನೆ ಇಲ್ಲ ಎಂದರು. ಜನವಸತಿ ಪ್ರದೇಶಕ್ಕೆ ನೀರು ಹೊಕ್ಕರೆ, ಕಾಳಜಿ ಕೇಂದ್ರ ತೆರೆಯಲು ಶಾಲೆ, ಸಮುದಾಯ ಭವನವನ್ನು ಗುರುತಿಸಲಾಗಿದೆ, ಗ್ರಾಮ ಆಡಳಿತಾಧಿಕಾರಿಯ ಮೂಲಕ ಗ್ರಾಮಗಳಲ್ಲಿ ಡಂಗುರ ಸಾರಿಸಲಾಗಿದ್ದು, ನಿರಂತರ ಮುನ್ಸೂಚನೆ ನೀಡಲಾಗುತ್ತದೆ, ಮುನ್ಸೂಚನೆಗೆ ಜನ ಸ್ಪಂದಿಸಬೇಕು ಎಂದರು.೨೦೧೯ ರಲ್ಲಿ ಪ್ರವಾಹ ಸ್ಥಿತಿ ಉಂಟಾದಾಗ ಮಸೂತಿ ಗ್ರಾಮದ ಸುಮಾರು ೨೦ ಕ್ಕೂ ಅಧಿಕ ಮನೆಗಳು…
ಮುದ್ದೇಬಿಹಾಳ: ತನ್ನ ದೇಶಕ್ಕೆ ಮತ್ತು ದೇಶ ಕಾಯುವ ಸೈನಿಕರಿಗೆ ಗೌರವ ಕೊಡುವ ಜನತೆ ಇರುವವರೆಗೂ ಆ ದೇಶ ಎಂದಿಗೂ ಸೋಲುವದಿಲ್ಲ ಎಂದು ತಾಲೂಕಿನ ಢವಳಗಿ ಗ್ರಾಮದ ನಿವೃತ್ತ ನೌಕಾಪಡೆಯ ಪ್ರಥಮ ಮಹಿಳಾ ಅಧಿಕಾರಿ ಮತ್ತು ಸಧ್ಯ ಮಹಾರಾಷ್ಟ್ರ ಸಿವಿಲ್ ಡಿಫೆನ್ಸ್ ಅಧಿಕಾರಿಯಾಗಿ ಸೇವೆಯಲ್ಲಿರುವ ರಾಜೇಶ್ವರಿ ಕೋರಿ ಹೇಳಿದರು.ಪಟ್ಟಣದ ಹಳೆಯ ತಹಶೀಲ್ದಾರ ಕಚೇರಿಯ ಬಳಿ ಇರುವ ಸೈನಿಕ ಮೈದಾನದಲ್ಲಿ ಕಾರ್ಗಿಲ್ ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಸಮಾರಂಭದ ಅತಿಥಿಯಾಗಿ ಅವರು ಮಾತನಾಡಿದರು.ಈ ವೇಳೆ ತಾಲೂಕಿನ ಬಳವಾಟ ಗ್ರಾಮದ ಲೆಫ್ಟಿನಂಟ್ ಕರ್ನಲ್ ಆಗಿ ಸೇವೆಯಲ್ಲಿರುವ ಶಿವಾನಂದ ಬಿರಾದಾರ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ ವೀರಯೋಧ ದವಲಸಾಬ ಕಂಬಾರ ಅವರ ಸ್ಮಾರಕ ನಿರ್ಮಿಸಿದ ಸಮಿತಿಯವರ ದೇಶಪ್ರೇಮ ಮೆಚ್ಚುವಂಥದ್ದು. ದೇಶಕ್ಕಾಗಿ ಪ್ರಾಣ ನೀಡಿದ ವೀರ ಯೋಧರ ಕುಟುಂದವರು ಸರ್ಕಾರದಿಂದ ವಿವಿಧ ಯೋಜನೆಗಳನ್ನು ನೀಡಲಾಗುತ್ತದೆ. ಅವುಗಳ ಸದ್ಬಳಕೆಗೆಯಾಗಬೇಕು ಎಂದರು.ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ ಗಡಿಯಲ್ಲಿ…
ಬಸವನಬಾಗೇವಾಡಿ: ಪಟ್ಟಣದ ನಂದಿ ಬಡಾವಣೆಯಲ್ಲಿರುವ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಹಡಪದ ಸಮಾಜ ಬಾಂಧವರು ಶನಿವಾರ ಸಭೆ ಸೇರಿ ನೂತನವಾಗಿ ರಚಿಸಲಾದ ಹಡಪದ ಅಪ್ಪಣ್ಣ ಸೇವಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷರನ್ನಾಗಿ ಮಹಾಂತೇಶ ಹಡಪದ, ಉಪಾಧ್ಯಕ್ಷರನ್ನಾಗಿ ಮಹೇಶ ನಾಗೂರ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಹಡಪದ, ಖಜಾಂಚಿಯಾಗಿ ಮಲ್ಲು ಹಡಪದ, ಕಾರ್ಯದರ್ಶಿಯಾಗಿ ಬಸವರಾಜ ಮುತ್ತಗಿ, ಸಂಘಟನಾ ಕಾರ್ಯದರ್ಶಿಯಾಗಿ ರಾಜು ಹಡಪದ, ಸದಸ್ಯರಾಗಿ ನಾಗೇಶ ನಾಗೂರ, ಮಂಜುನಾಥ ಹಡಪದ, ಮಹಾಂತೇಶ ಹಡಪದ, ಸಂಜು ಹಡಪದ, ರವಿ ಹಡಪದ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಿತು. ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ನಂತರ ಸಮಾಜದಿಂದ ಸನ್ಮಾನಿಸಲಾಯಿತು.ಸಭೆಯನ್ನು ಉದ್ದೇಶಿಸಿ ಸಮಾಜದ ಮುಖಂಡರಾದ ಗುರಲಿಂಗ ಹಡಪದ, ಸುಭಾಸ ಹಡಪದ, ಚನ್ನು ಹಡಪದ ಮಾತನಾಡಿ, ನೂತನವಾಗಿ ರಚಿಸಿರುವ ಹಡಪದ ಅಪ್ಪಣ್ಣ ಸೇವಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಮಾಡುವ ಮೂಲಕ ಸಮಾಜದ ಸಂಘಟನೆ ಮಾಡುವ ಜೊತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಸಮುದಾಯ ಭವನ ಇನ್ನಷ್ಟು…
ಬಸವನಬಾಗೇವಾಡಿ: ಜಿಲ್ಲೆಯಲ್ಲಿ ಬಂಥನಾಳ ಲಿಂ. ಸಂಗನಬಸವ ಸ್ವಾಮೀಜಿ, ಡಾ.ಫ.ಗು.ಹಳಕಟ್ಟಿ, ದಿ.ಬಿ.ಎಂ.ಪಾಟೀಲ ಅವರು ಬಿಎಲ್ಡಿಇ ಸಂಸ್ಥೆಯ ಕಟ್ಟುವ ಮೂಲಕ ಈ ಭಾಗದಲ್ಲಿ ಶಿಕ್ಷಣ ಕೈಂಕರ್ಯ, ಆರೋಗ್ಯ ಸೇವೆ, ಅನೇಕರಿಗೆ ಉದ್ಯೋಗ ನೀಡುವ ಮೂಲಕ ಜಿಲ್ಲೆಯ ಕಾಮಧೇನು ಕಲ್ಪವೃಕ್ಷದಂತೆ ತ್ರಿವಳಿ ಪುರುಷರು ಕಂಗೊಳಿಸುತ್ತಿದ್ದಾರೆ. ಇವರ ಮಾಡಿರುವ ಕಾರ್ಯ ಸದಾ ಸ್ಮರಣೀಯವಾಗಿದೆ ಎಂದು ಬಸವೇಶ್ವರ ಕಲಾ ಮತ್ತು ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರಗೌಡ ಕೆ. ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಂಥನಾಳದ ಲಿಂ. ಸಂಗನಬಸವ ಸ್ವಾಮೀಜಿ, ಡಾ.ಫ.ಗು.ಹಳಕಟ್ಟಿ, ದಿ.ಬಿ.ಎಂ.ಪಾಟೀಲ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಬಿಎಲ್ಡಿಇ ಸಂಸ್ಥೆಯ ಬಹುಎತ್ತರಕ್ಕೆ ಬೆಳೆಯುವಲ್ಲಿ ಈ ಮಹನೀಯರ ಪಾತ್ರ ಮರೆಯುವಂತಿಲ್ಲ. ಗ್ರಾಮೀಣ ಬಡ ಹಾಗೂ ಜನಸಾಮಾನ್ಯರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ಸಂಸ್ಥೆಯು ಎಲ್ಲ ರೀತಿಯಿಂದಲೂ ಸದಾ ನೆರವು ನೀಡುತ್ತಿದೆ. ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಜನರು ಸೇರಿದಂತೆ ಜಿಲ್ಲೆಯ ಜನರು ಇವರ…
ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾಮಾರುಕಟ್ಟೆಯ ಕೊಲ್ಹಾರ ಮುಖ್ಯ ರಸ್ತೆಯಲ್ಲಿರುವ ಆವರಣ ಗೋಡೆಗೆ ಹೊಂದಿಕೊಂಡಂತೆ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡುತ್ತಿದ್ದ ವ್ಯಾಪಾರಿಗಳು ನಮಗೆ ಬೇರೆಡೆ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಟಿಪ್ಪು ಕ್ರಾಂತಿ ಸೇನೆಯ ನೇತೃತ್ವದಲ್ಲಿ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಶನಿವಾರವೂ ಮುಂದುವರಿಯಿತು.ಪಟ್ಟಣದ ಮಾರುತಿ ದೇವಸ್ಥಾನದ ಹತ್ತಿರದಿಂದ ನಾಗೂರ ಕ್ರಾಸ್ವರೆಗೆ ಇದ್ದ ಆವರಣಗೋಡೆಯನ್ನು ಪುರಸಭೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದ್ದರಿಂದ ನಾವು ಆವರಣಗೋಡೆ ಹೊಂದಿಕೊಂಡು ಹಲವಾರು ತಿಂಗಳುಗಳಿಂದ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವ ಮೂಲಕ ನಮ್ಮ ಜೀವನ ನಿರ್ವಹಣೆ ಮಾಡುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ಈಗ ದಿಢೀರ್ ಪುರಸಭೆಯ ಅಧಿಕಾರಿಗಳು ಆವರಣಗೋಡೆ ತೆರವು ಗೊಳಿಸಿದ್ದರಿಂದ ನಮ್ಮ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ನಮ್ಮ ವ್ಯಾಪಾರ ನಿಂತು ಹೋಗಿದೆ. ಅಧಿಕಾರಿಗಳು ಕೂಡಲೇ ನಮಗೆ ವ್ಯಾಪಾರ ಮಾಡಲು ಜನನಿ ಬಿಡ ಪ್ರದೇಶದಲ್ಲಿ ಸ್ಥಳಾವಕಾಶ ಮಾಡಿಕೊಟ್ಟರೆ ನಾವು ಜೀವನ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ. ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಿನ್ನೆಯಿಂದ…
