ಬಸವನಬಾಗೇವಾಡಿ: ಪಟ್ಟಣದ ನಂದಿ ಬಡಾವಣೆಯಲ್ಲಿರುವ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಹಡಪದ ಸಮಾಜ ಬಾಂಧವರು ಶನಿವಾರ ಸಭೆ ಸೇರಿ ನೂತನವಾಗಿ ರಚಿಸಲಾದ ಹಡಪದ ಅಪ್ಪಣ್ಣ ಸೇವಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷರನ್ನಾಗಿ ಮಹಾಂತೇಶ ಹಡಪದ, ಉಪಾಧ್ಯಕ್ಷರನ್ನಾಗಿ ಮಹೇಶ ನಾಗೂರ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಹಡಪದ, ಖಜಾಂಚಿಯಾಗಿ ಮಲ್ಲು ಹಡಪದ, ಕಾರ್ಯದರ್ಶಿಯಾಗಿ ಬಸವರಾಜ ಮುತ್ತಗಿ, ಸಂಘಟನಾ ಕಾರ್ಯದರ್ಶಿಯಾಗಿ ರಾಜು ಹಡಪದ, ಸದಸ್ಯರಾಗಿ ನಾಗೇಶ ನಾಗೂರ, ಮಂಜುನಾಥ ಹಡಪದ, ಮಹಾಂತೇಶ ಹಡಪದ, ಸಂಜು ಹಡಪದ, ರವಿ ಹಡಪದ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಿತು. ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ನಂತರ ಸಮಾಜದಿಂದ ಸನ್ಮಾನಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಸಮಾಜದ ಮುಖಂಡರಾದ ಗುರಲಿಂಗ ಹಡಪದ, ಸುಭಾಸ ಹಡಪದ, ಚನ್ನು ಹಡಪದ ಮಾತನಾಡಿ, ನೂತನವಾಗಿ ರಚಿಸಿರುವ ಹಡಪದ ಅಪ್ಪಣ್ಣ ಸೇವಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಮಾಡುವ ಮೂಲಕ ಸಮಾಜದ ಸಂಘಟನೆ ಮಾಡುವ ಜೊತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಸಮುದಾಯ ಭವನ ಇನ್ನಷ್ಟು ವಿಶಾಲವಾಗಿ ನಿರ್ಮಾಣಕ್ಕೆ ಎಲ್ಲರೂ ಒಂದಾಗಿ ಸರ್ಕಾರದ ಸಹಾಯ ಪಡೆದುಕೊಳ್ಳಬೇಕಿದೆ. ಇದಕ್ಕಾಗಿ ಜನಪ್ರತಿನಿಧಿಗಳನ್ನು ಮುಂದಿನ ದಿನಗಳಲ್ಲಿ ಭೇಟಿ ಮಾಡುವದು ಅಗತ್ಯವಿದೆ. ಸಮಾಜದ ಶ್ರೇಯೋಭಿವೃದ್ಧಿಗೆ ಸಮಾಜದ ಎಲ್ಲ ಬಾಂಧವರು ಸಹಕಾರ ನೀಡಬೇಕೆಂದರು.
ಸಭೆಯಲ್ಲಿ ಮುತ್ತಪ್ಪ ಹಡಪದ, ಮಲ್ಲಿಕಾರ್ಜುನ ಹಡಪದ, ಈರಣ್ಣ ದವಾಖಾನೆ, ಅಶೋಕ ಬಾಗೇವಾಡಿ, ಅಮಿತ ಇವಣಗಿ, ಮಲಕಾಜಿ ಇವಣಗಿ, ಕಲ್ಲಪ್ಪ ಹಡಪದ, ಶಿವಾನಂದ ಹಡಪದ, ಪ್ರಲ್ಹಾದ ಹಡಪದ, ಶಿವಪ್ಪ ಹಡಪದ, ಚನ್ನಪ್ಪ ಹಡಪದ, ಸುರೇಶ ಹಡಪದ, ಉಮೇಶ ಹಡಪದ, ಪರಮಾನಂದ ಹಡಪದ, ಮಲ್ಲಿಕಾರ್ಜುನ ಹಡಪದ, ರಾಮು ಚಿಕ್ಕೂರ, ಶ್ರೀಶೈಲ ಹಡಪದ, ಸಂಗು ಹಡಪದ, ಕಿರಣ ನಾಗೂರ,ರಾಚು ಹಡಪದ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

