Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಸವಾದಿ ಶರಣರು ನುಡಿದಂತೆ ನಡೆದವರು :ಡಾ.ಪಡಶೆಟ್ಟಿ
(ರಾಜ್ಯ ) ಜಿಲ್ಲೆ

ಬಸವಾದಿ ಶರಣರು ನುಡಿದಂತೆ ನಡೆದವರು :ಡಾ.ಪಡಶೆಟ್ಟಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಮಡಿವಾಳ ಮಾಚಿದೇವ ಹಾಗೂ ಬಸವಾದಿ ಶರಣರು ನುಡಿದಂತೆ ನಡೆದವರು. ನಡೆದದನ್ನೇ ನುಡಿದವರು. ಅವರ ನಂಬಿಕೆ ಮತ್ತು ಆಚರಣೆಯಲ್ಲಿ ಯಾವುದೇ ಅಂತರವಿರಲಿಲ್ಲ. ಬಸವಾದಿ ಶರಣರು ಸತ್ಯ ಶುದ್ಧ ಕಾಯಕಕ್ಕೆ ಎಷ್ಟು ಮಹತ್ವವನ್ನು ನೀಡಿದರೋ ಅಷ್ಟೇ ಮಹತ್ವವನ್ನು ದಾಸೋಹಕ್ಕೆ ನೀಡಿದರು ಎಂದು ಹಿರಿಯ ಜಾನಪದ ಸಾಹಿತಿ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.
ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಹೊರವಲಯದ ಶರಣೆ ಶ್ರೀಮತಿ ಗುರುಬಾಯಿ ಡಾ. ಶ್ರೀ ರಾಮಲಿಂಗಪ್ಪ ಮಡಿವಾಳರ ತೋಟದ ಮನೆಯಲ್ಲಿ ತಾಲೂಕು ವಚನೋತ್ಸವ ಸಮಿತಿ 248 ನೇ ವಚನೋತ್ಸವದಲ್ಲಿ ಅವರು ಮಾತನಾಡಿ ೧೨ ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ , ಜಾತೀಯತೆ, ಮೇಲು -ಕೀಳು ತಾರತಮ್ಯ, ಅಸ್ಪ್ರುಶ್ಯತೆ , ಮೂಢ ನಂಬಿಕೆಗಳ ಸೃಷ್ಟಿ , ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ- ಮಡಿವಾಳ ಮಾಚಿದೇವ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರ ಗಣ್ಯ ಬಳಗದಲ್ಲಿ ‘ ಮಡಿವಾಳ ಮಾಚಿದೇವ’ ಅತ್ಯಂತ ಪ್ರಕಾಶಮಾನವಾಗಿ ಕಂಡುಬರುವರು ಎಂದರು.
ವಚನೋತ್ಸವ ಸಮಿತಿಯ ಹಿರಿಯರಾದ ಚನ್ನಪ್ಪ ಕತ್ತಿ, ಶಿವಪ್ಪ ಗವಸಾನೆ, ಪ್ರೋ ಬಸವರಾಜ ಹನಮಶೇಟ್ಟಿ, ಸಿದ್ದಬಸವ ಕುಂಬಾರ, ವೈದ್ಯ ರಾಮಲಿಂಗಪ್ಪ ಮಡಿವಾಳರ ಮಾತನಾಡಿ ಶರಣರು ತಮ್ಮ ಅನುಭವದ ನುಡಿಗಳನ್ನೇ ವಚನಗಳನ್ನಾಗಿ ರಚಿಸಿ ಮೇಲು, ಕೀಳು, ಜ್ಞಾನಿ, ಅಜ್ಞಾನಿ ಎಂಬ ಭೇದಭಾವ ಮಾಡದೇ ಮಾನವ ಕುಲ ಒಂದೇ ಎಂದು ಸಾರಿ ಸಮಾನತೆಯ ಹಾಗೂ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ್ದಾರೆ ಎಂದು ಹೇಳಿದರು.
ಸಾಹಿತಿ ಅಶೋಕ ಬಿರಾದಾರ ಮಾತನಾಡಿ ಮಡಿವಾಳರ ಮನೆಯಲ್ಲಿ ಮಡಿವಾಳ ಮಾಚಿದೇವ ಶರಣರ ವಚನೋತ್ಸವ ಮಾಡುವ ಬದಲು ನಾವು ಶರಣರಿಗೆ ಜಾತಿಗೆ ಹೋಲಿಸದೆ ಅವರನ್ನು ಪ್ರತಿ ಜನಾಂಗದವರು ಸರ್ವ ಶರಣರ ವಚನಗಳು ಓದುವಂತಾಗಬೇಕು ಎಂದರು .
ಸಾಹಿತಿ ಶಿವಕುಮಾರ ಶಿವಶಿಂಪಿ, ಶಿಕ್ಷಣ ಸಂಯೋಜಕ ಎಸ್.ಎಸ್.ಅಂಬಲಿ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಪತ್ರಕರ್ತ ಸಾಹಿತಿ ನಾಗೇಶ, ಮಲ್ಲು ಪಟ್ಟಣಶೆಟ್ಟಿ, ರಾಜಶೇಖರ ಶೆಟ್ಟಿ, ಅಶೋಕ ಅಲ್ಲಾಪೂರ, ಶ್ರೀಶೈಲ ಯಳಮೇಲಿ, ಶರಣ ಮಡಿವಾಳ ಮಾಚಿದೇವ ವಚನ ಪಠಣ ಮಾಡಿದರು.
ಸಂಗಣ್ಣ ಕತ್ತಿ, ಶರಣಗೌಡ ಪಾಟೀಲ, ಸಂಗಮೇಶ ಕುಂಬಾರ, ನಿಂಗನಗೌಡ ಪಾಟೀಲ, ಮಲ್ಲು ಶ ಅಗಸರ ಬಂದಾಳ, ಗುರಪ್ಪ ಅಗಸರ, ಮಹೇಶ ಅರಳಗುಂಡಗಿ, ಬಸವರಾಜ ಅಗಸರ, ಶಂಕರ ಅಗಸರ, ಶಿಕ್ಷಕ ಸಾಹಿತಿ ಗುಂಡಣ್ಣ ಮೋರಟಗಿ, ಈರಣ್ಣ ಅಗಸರ. ಡಾ.ವಿಜಯಕುಮಾರ ಸಗರ, ಪತ್ರಕರ್ತ ವಿನಯಕುಮಾರ ಅಗಸರ, ಗುಂಡು ಅಗಸರ ಬೂದಿಹಾಳ ಇದ್ದರು.
ಶಿಕ್ಷಕ ಶಂಕರ ಕಟ್ಟಿಮನಿ ನಿರೂಪಿಸಿದರು. ಶಿಕ್ಷಕರಾದ ಚಂದ್ರಶೇಖರ ಬುಯ್ಯಾರ, ಪಿ.ವ್ಹಿ.ಕುಲಕರ್ಣಿ ವಚನಗಾಯನ ಮಾಡಿದರು.
ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಸ್ವಾಗತಿಸಿದರು. ಡಾ ಸಂಗಮೇಶ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ

ಪತ್ರಕರ್ತರು ವಸ್ತುನಿಷ್ಠವಾಗಿ, ಶೋಧನೆ ಮಾಡಿ ಬರೆಯಬೇಕು

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು
    In (ರಾಜ್ಯ ) ಜಿಲ್ಲೆ
  • ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!
    In (ರಾಜ್ಯ ) ಜಿಲ್ಲೆ
  • ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತರು ವಸ್ತುನಿಷ್ಠವಾಗಿ, ಶೋಧನೆ ಮಾಡಿ ಬರೆಯಬೇಕು
    In (ರಾಜ್ಯ ) ಜಿಲ್ಲೆ
  • ಅಧ್ಯಕ್ಷರಾಗಿ ಮಹೇಶ್, ಉಪಾಧ್ಯಕ್ಷರಾಗಿ ಜಯ ಅವಿರೋಧ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಸಿ.ವಿ.ರಾಮನ್ ಪ.ಪೂ ಕಾಲೇಜ್ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಗುರು ಸಂಗನಬಸವ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ & ಅಗ್ನಿ ಪ್ರವೇಶ
    In (ರಾಜ್ಯ ) ಜಿಲ್ಲೆ
  • ಬೊಗಸೆಯಲ್ಲಿ ಅರಳುವ ನಿನ್ನಂದದ ಮುಖಕೆ
    In ವಿಶೇಷ ಲೇಖನ
  • ಕಲಕೇರಿ ಬಸವೇಶ್ವರ ಪ.ಪೂ ಕಾಲೇಜು ಅತ್ಯುತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಕಬ್ಬಡ್ಡಿ ಪಂದ್ಯಾವಳಿ: ಬಂಜಾರಾ ಕಾಲೇಜಿಗೆ ಪ್ರಥಮ ಸ್ಥಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.