ಬಸವನಬಾಗೇವಾಡಿ: ಜಿಲ್ಲೆಯಲ್ಲಿ ಬಂಥನಾಳ ಲಿಂ. ಸಂಗನಬಸವ ಸ್ವಾಮೀಜಿ, ಡಾ.ಫ.ಗು.ಹಳಕಟ್ಟಿ, ದಿ.ಬಿ.ಎಂ.ಪಾಟೀಲ ಅವರು ಬಿಎಲ್ಡಿಇ ಸಂಸ್ಥೆಯ ಕಟ್ಟುವ ಮೂಲಕ ಈ ಭಾಗದಲ್ಲಿ ಶಿಕ್ಷಣ ಕೈಂಕರ್ಯ, ಆರೋಗ್ಯ ಸೇವೆ, ಅನೇಕರಿಗೆ ಉದ್ಯೋಗ ನೀಡುವ ಮೂಲಕ ಜಿಲ್ಲೆಯ ಕಾಮಧೇನು ಕಲ್ಪವೃಕ್ಷದಂತೆ ತ್ರಿವಳಿ ಪುರುಷರು ಕಂಗೊಳಿಸುತ್ತಿದ್ದಾರೆ. ಇವರ ಮಾಡಿರುವ ಕಾರ್ಯ ಸದಾ ಸ್ಮರಣೀಯವಾಗಿದೆ ಎಂದು ಬಸವೇಶ್ವರ ಕಲಾ ಮತ್ತು ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರಗೌಡ ಕೆ. ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಂಥನಾಳದ ಲಿಂ. ಸಂಗನಬಸವ ಸ್ವಾಮೀಜಿ, ಡಾ.ಫ.ಗು.ಹಳಕಟ್ಟಿ, ದಿ.ಬಿ.ಎಂ.ಪಾಟೀಲ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಬಿಎಲ್ಡಿಇ ಸಂಸ್ಥೆಯ ಬಹುಎತ್ತರಕ್ಕೆ ಬೆಳೆಯುವಲ್ಲಿ ಈ ಮಹನೀಯರ ಪಾತ್ರ ಮರೆಯುವಂತಿಲ್ಲ. ಗ್ರಾಮೀಣ ಬಡ ಹಾಗೂ ಜನಸಾಮಾನ್ಯರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ಸಂಸ್ಥೆಯು ಎಲ್ಲ ರೀತಿಯಿಂದಲೂ ಸದಾ ನೆರವು ನೀಡುತ್ತಿದೆ. ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಜನರು ಸೇರಿದಂತೆ ಜಿಲ್ಲೆಯ ಜನರು ಇವರ ಸೇವೆಯನ್ನು ಸದಾ ಸ್ಮರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಡಾ.ವೈ.ಬಿ.ನಾಯಕ, ಪ್ರೊ.ಡಿ.ಎಸ್.ಲಗಳಿ,ಪ್ರೊ.ಡಿ.ಎನ್.ಕೊನಂತಲಿ, ಡಾ.ಎಸ್.ಬಿ.ಜನಗೊಂಡ, ಎಂ.ಕೆ.ಯಾಧವ, ಎಸ್.ಜೆ.ಸೂರ್ಯವಂಶಿ, ಪಿ.ಎಸ್.ಹೊರಕೇರಿ, ಪಿ.ಎಸ್.ನಾಟೀಕಾರ, ಎಂ.ಆರ್.ಮಮದಾಪುರ, ಜಯರಾಮರೆಡ್ಡಿ, ಆರ್.ಎನ್. ರಾಠೋಡ, ರುಕ್ಷನಾ ಮುಜಾವರ, ಜಲಪುರ ಸೇರಿದಂತೆ ಇತರರು ಇದ್ದರು.
ಸಂಸ್ಥೆಯ ಔಷಧ, ಪಪೂ ವಿದ್ಯಾಲಯದಲ್ಲಿ ಪುಣ್ಯಸ್ಮರಣೆಃ ಬಿಎಲ್ಡಿಇ ಸಂಸ್ಥೆಯ ಔಷಧ ಮಹಾವಿದ್ಯಾಲಯ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿಯೂ ಡಾ.ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಸ್ವಾಮೀಜಿ, ದಿ.ಬಿ.ಎಂ.ಪಾಟೀಲ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಪ್ರೊ.ಮಹಾಂತೇಶ ಕವಟೇಕರ ಮಾತನಾಡಿ, ಉನ್ನತ ಶಿಕ್ಷಣಕ್ಕಾಗಿ ದೂರ ಧಾರವಾಡ, ಮುಂಬೈ, ಪುಣೆಗೆ ಹೋಗುವ ಪರಿಸ್ಥಿತಿ ಈ ಭಾಗದ ಜನರಿಗೆ ಇತ್ತು. ಇಂದು ಮೂರು ಮಹಾನುಭಾವರ ಅವಿರತ ಪ್ರಯತ್ನದ ಫಲವಾಗಿ ಈ ಭಾಗದ ಜನರು ಬಿಎಲ್ಡಿಇ ಸಂಸ್ಥೆಯಲ್ಲಿಯೆ ಉನ್ನತ ಶಿಕ್ಷಣ ಪಡೆಯುವಂತಾಗಿದೆ. ಇವರಿಗೆ ಜಿಲ್ಲೆಯ ಜನತೆ ಸದಾ ಋಣಿಯಾಗಿರಬೇಕೆಂದರು.
ಈ ಸಂದರ್ಭದಲ್ಲಿ ಎರಡು ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಇದ್ದರು.
Subscribe to Updates
Get the latest creative news from FooBar about art, design and business.
ಬಂಥನಾಳ ಶ್ರೀ, ಹಳಕಟ್ಟಿ, ಬಿ.ಎಂ.ಪಾಟೀಲರು ಜಿಲ್ಲೆಯ ಕಾಮಧೇನು ಕಲ್ಪವೃಕ್ಷವಿದ್ದಂತೆ
Related Posts
Add A Comment

