Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚುನಾಯಿತ ಮಹಿಳೆಯರ ಕುಟುಂಬ ಸದಸ್ಯರ ಮದ್ಯಸ್ಥಿಕೆಗೆ ಕಡಿವಾಣಕ್ಕೆ ಕೆಆರೆಸ್ ಆಗ್ರಹ ವಿಜಯಪುರ: ಚುನಾಯಿತ ಮಹಿಳೆಯರ ಸದಸ್ಯರ ಕುಟುಂಬ ವರ್ಗದಿಂದ ಮದ್ಯಸ್ಥಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ. ವಿಜಯಪುರ ಇವರ ಮುಖಾಂತರ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಪಕ್ಷದ ನಗರ ಅಧ್ಯಕ್ಷರಾದ ಅಬ್ದುಲ ಹಮೀದ ಎಸ್. ಇನಾಮದಾರ ಮಾತನಾಡಿ, ವಿಜಯಪುರ ಜಿಲ್ಲೆಯ, ಮಹಾನಗರ ಪಾಲಿಕೆ, ಪುರಸಭೆ, ಹಾಗೂ ಪಂಚಾಯತ್ ರಾಜ್ ಚುನಾಯಿತ ಮಹಿಳೆಯರ ಗಂಡ ಹಾಗೂ ಮಕ್ಕಳು ಮಧ್ಯಸ್ಥಿಕೆಯು ದಿನನಿತ್ಯ ಹೆಚ್ಚಾಗುತ್ತಿದೆ. ಚುನಾಯಿತ ಮಹಿಳೆಯರ ಗಂಡ ಮಕ್ಕಳು ಹಾಗೂ ಇವರ ಕುಟುಂಬದ ಸದಸ್ಯರಿಂದ ಮಹಾನಗರ ಪಾಲಿಕೆ ಕಾರ್ಮಿಕರ ಜೊತೆ ಅವಾಚ್ಯ ಶಬ್ದಗಳು ಹಾಗೂ ಮಹಾನಗರ ಪಾಲಿಕೆ ಹಾಗೂ ಪಂಚಾಯತಿಯ ಸಭೆಗಳಲ್ಲಿ ಇವರ ಭಾಗಿಯಾಗಿ ಕಚೇರಿಗಳಲ್ಲಿ ಚುನಾಯಿತ ಮಹಿಳೆಯರ ಸ್ಥಾನಕ್ಕೆ ಇವರು ಬಳಸುವುದು ಮತ್ತು ಸಭೆ ಹಾಗೂ ಸಮಾರಂಭಗಳಲ್ಲಿ ಮಹಿಳೆಯರೇ ಬದಲಾಗಿ ಮಕ್ಕಳು ಹಾಗೂ ಅವರ ಮನೆಯವರು ಶಾಮೀಲಾಗುವುದು…
ವಿಜಯಪುರ: ೨೦೨೪-೨೫ನೇ ಸಾಲಿಗೆ ನಗರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ, ಶಿಕ್ಷಣ ಹಾಗೂ ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲು ರೂ.೬೦ ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ನಗರ ಮತಕ್ಷೇತ್ರ ವ್ಯಾಪ್ತಿಯ ವಾರ್ಡ ನಂ.೭ ರ ಡೋಬಳೆ ಗಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ರೂ.೧೦ ಲಕ್ಷ, ವಾರ್ಡ ನಂ. ೨೧ರ ಗಣೇಶ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ರೂ.೧೦ ಲಕ್ಷ, ವಾರ್ಡ ನಂ.೩ರ ಗ್ಯಾಂಗ್ ಬಾವಡಿ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.೭ಕ್ಕೆ ರೂ.೧೦ ಲಕ್ಷ, ವಾರ್ಡ ನಂ.೬ರ ಕೆ.ಎಚ್.ಬಿ ಕಾಲೊನಿಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ರೂ.೧೦ ಲಕ್ಷ ಹಾಗೂ ವಿಕಲಚೇತನರ ಅಭಿವೃದ್ಧಿ/ಕಲ್ಯಾಣ ಕಾರ್ಯಕ್ರಮಕ್ಕಾಗಿ ರೂ.೨೦ ಲಕ್ಷ ಅನುದಾನ ಮಂಜೂರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಲಮಟ್ಟಿ ಪ.ಪೂ.ಡಿಗ್ರಿ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಸಮಾರಂಭ ಆಲಮಟ್ಟಿ: ಶಿಕ್ಷಣ ಜ್ಞಾನವೇ ಶ್ರೇಷ್ಠ. ಅದು ಎಲ್ಲಕ್ಕಿಂತಲೂ ಮಿಗಿಲು. ಸತತ ಓದು, ನಿರಂತರ ಅಧ್ಯಯನದಿಂದ ಭವಿಷ್ಯತ್ತಿನ ಕನಸನ್ನು ನನಸಾಗಿಸಿಕೊಳಬೇಕು. ಆಸಕ್ತಿದಾಯಕ ಕಲಿಕೆಯಿಂದ ಜ್ಞಾನದ ಬೆಳಕಿನಲ್ಲಿ ಹೆಜ್ಜೆ ಗುರುತು ಮೂಡಿಸಬೇಕು ಎಂದು ಕರ್ನಾಟಕ ಪ್ರದೇಶ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸಂಯುಕ್ತಾ ಪಾಟೀಲ ಯುವಜನತೆಗೆ ಸಲಹೆ ನೀಡಿದರು. ಸ್ಥಳೀಯ ಎಸ್.ವ್ಹಿ.ವ್ಹಿ ಸಂಸ್ಥೆಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪ.ಪೂ ಹಾಗೂ ಪ್ರಥಮ ದರ್ಜೆ ಕಲಾ,ವಾಣಿಜ್ಯ ಮಹಾವಿದ್ಯಾಲಯದ ೨೦೨೪-೨೫ ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪುಸ್ತಕಗಳೇ ಒಡನಾಡಿಗಳಾಗಬೇಕು. ಅವೇ ನಿಜ ಸ್ನೇಹಿಗಳು. ಕಾರಣ ಪುಸ್ತಕ ಸಂಗಮದಲ್ಲಿ ಬೆಸೆದು ಮಿಂದೆಳಬೇಕು. ಜ್ಞಾನ ಸಂಪತ್ತಿನ ಗರಿಮೆಯಲ್ಲಿ ಮಿನುಗಬೇಕು ಎಂದರು. ಇಂದಿನ ದಿನಗಳಲ್ಲಿ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಬೇಕು. ಇವುಗಳಲ್ಲಿ ಬದುಕಿನ ಸಂತಸ ಹುದುಗಿದೆ. ಪಠ್ಯೇತರ ಚಟುವಟಿಕೆಗಳು…
ಮುದ್ದೇಬಿಹಾಳ: ತಾಲೂಕಿನ ಗೋನಾಳ ಪಿ.ಎನ್ ಗ್ರಾಮದ ಪವಾಡಬಸವೇಶ್ವರ ಜಾತ್ರಾ ಮಹೋತ್ಸವ ಪ್ರತೀ ವರ್ಷದಂತೆ ಈ ವರ್ಷವೂ ಆ.೭ ರಿಂದ ನಡೆಯಲಿದೆ.ಅಂದು ರಾತ್ರಿ ೧೦ಗಂಟೆಯಿಂದ ಅಹೋರಾತ್ರಿ ಶಿವ ಭಜನೆ, ೮ರಂದು ಬೆಳಿಗ್ಗೆ ೮ಕ್ಕೆ ಕಾಶಿ ವಿಶ್ವನಾಥಲಿಂಗಕ್ಕೆ ರುದ್ರಾಭಿಷೇಕ, ೯ ಗಂಟೆಗೆ ಪುಟ್ಟಿಗಾಡಿ ರೇಸ್ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯನ್ನು ಜಂಬಗಿ-ಮನ್ಯಾಳದ ಪ.ಪೂ ಶಂಕರಲಿಂಗ ಮಹಾರಾಜರು ಉದ್ಘಾಟಿಸುವರು. ಮಧ್ಯಾಹ್ನ ಮಂಗಳಾರತಿ ಮತ್ತು ಮಹಾಪ್ರಸಾದ ಇರಲಿದ್ದು ಎಲ್ಲ ಕಾರ್ಯಕ್ರಮಗಳು ಪೂಜ್ಯ ಶ್ರೀ ಚನ್ನಮಲ್ಲಪ್ಪ ಶರಣರ ನೇತೃತ್ವದಲ್ಲಿ ನಡೆಯಲಿವೆ ಎಂದು ದೇವಸ್ಥಾನದ ಸಮಸ್ತ ದೈವ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಲಕೇರಿ: ದುರ್ಗುಣಗಳು ವ್ಯಕ್ತಿತ್ವವನ್ನು ಕ್ಷೀಣಿಸುತ್ತವೆ. ಶಿಸ್ತು, ಸಂಯಮ ಹಾಗೂ ಕಲಿಕಾಸಕ್ತಿ, ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ಸಕ್ರೀಯವಾಗಿ ಭಾಗಿಯಾಗುವದರಿಂದ ವಿದ್ಯಾರ್ಥಿಗಳ ಬದುಕು ಸುಂದರ ಮತ್ತು ಸದೃಡಗೊಳ್ಳುತ್ತದೆ ಎಂದು ಕಲಕೇರಿ ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಹೇಳಿದರು.ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ೧೦ ಘಂಟೆಗೆ ನಡೆದ ೨೦೨೪-೨೫ ನೇ ಸಾಲಿನ ಸಾಂಸ್ಕೃತಿಕ ಮತ್ತು ಶಾರೀರಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿಧ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳಿಗೆ ತಮ್ಮ ಪಾಲಕರ ಪೋಷಕರ ಕ್ಷದ ಅರಿವು ಇಟ್ಟುಕೊಳ್ಳಬೇಕು, ಮನೆಯಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳ ಮಧ್ಯೆಯೂ ತಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಅವರು ನೊಡಿಕೊಳ್ಳುತ್ತಾರೆ ಆದರೆ ಇಂದು ಅದೆಷ್ಟೋ ವಿಧ್ಯಾರ್ಥಿಗಳು ಮೋಬೈಲ್ ಚಾಳಿಗೆ ಬಿದ್ದು ತಮ್ಮ ಉಜ್ವಲ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಇದು ವಿಷಾದನೀಯ. ಇದೆಲ್ಲವನ್ನು ಬದಿಗೊತ್ತಿ ವಿದ್ಯಾಗುರುಗಳು ಮತ್ತು ಪಾಲಕರ ಮಾರ್ಗದರ್ಶನದಲ್ಲಿ ಮುನ್ನಡೆದು…
ಮುದ್ದೇಬಿಹಾಳ: ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ ಎಂದು ಬೇಸರಗೊಂಡ ದೈಹಿಕ ಶಿಕ್ಷಕರು ಕೈಗೆ ಕಪ್ಪು ಪಟ್ಟಿ ಧರಿಸಿ ಕ್ರೀಡಾಕೂಟದಲ್ಲಿ ಭಾಗಿಯಾಗಿ ಆಕ್ರೋಶವನ್ನು ಹೊರಹಾಕಿದ್ದಾರೆ.ಪಟ್ಟಣದ ಶಾಂತಲಾ ಪ್ರೌಢಶಾಲಾ ಮೈದಾನದಲ್ಲಿ ನಡೆದ ತಾಲೂಕಿನ ಪ್ರಾಥಮಿಕ ಶಾಲೆಗಳ ಉತ್ತರ ವಲಯದ ಕ್ರೀಡಾಕೂಟದಲ್ಲಿ ಕೈಗೆ ಪಕ್ಕು ಪಟ್ಟಿ ಧರಿಸಿ ಭಾಗಿಯಾದ ದೈಹಿಕ ಶಿಕ್ಷಕರು, ತಮ್ಮನ್ನು ಸಹಶಿಕ್ಷಕರನ್ನಾಗಿ ಪರಿಗಣಿಸಬೇಕು, ಸಹ ಶಿಕ್ಷಕರಿಗೆ ಸಿಗುವ ಸೌಲಭ್ಯಗಳಾದ ಮುಖ್ಯ ಶಿಕ್ಷಕರಾಗಿ ಬಡ್ತಿ, ಸಿ ಅಂಡ್ ಆರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಿ.ಆರ್.ಪಿ, ಬಿ.ಆರ್.ಪಿ, ಹುದ್ದೆಗಳನ್ನು ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಗಾಗಿ ಹಲವು ಬಾರಿ ಮನವಿ ಮಾಡಿಕೊಂಡಿದ್ದು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಬೇಡಿಕೆಗಳು ಈಡೇರುವವರಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆಯೊಂದಿಗೆ ಕ್ರೀಡಾಕೂಟವನ್ನು ನಡೆಸುವದಾಗಿ ತಿಳಿಸಿದರು.ಈ ವೇಳೆ ತಾಲೂಕಿನ ಪ್ರೌಢಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಶೇಖರ ಲಮಾಣಿ, ಗೌರವಾಧ್ಯಕ್ಷ ಚಂದ್ರಕಾAತ ಮನಗೂಳಿ, ಖಜಾಂಚಿಗಳಾದ ಗುರು ಸಾಲಿಮಠ ಮತ್ತು ಎ.ಸಿ.ಕೆರೂರ, ಬಸವರಾಜ ಭಜಂತ್ರಿ, ಶರಣು ಇದ್ದಲಗಿ, ಬಸವರಾಜ ರಾಮೋಡಗಿ, ನಾಗರಾಜ ಮುದಗಲ್ಲ, ಬಿ.ಎಸ್.ಫಣೇದಕಟ್ಟಿ,…
ದೇವರಹಿಪ್ಪರಗಿ: ವಿದ್ಯಾರ್ಥಿಗಳು ಭವಿಷ್ಯದ ಕನಸನ್ನು ಸಾಕರಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಆಗ ಕನಸು ನನಸಾಗಲು ಸಾಧ್ಯ ಎಂದು ವಿಶ್ರಾಂತ ದೈಹಿಕ ನಿರ್ದೇಶಕ ಅಶೋಕಕುಮಾರ ಜಾಧವ ಹೇಳಿದರು.ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಜರುಗಿದ ೨೦೨೩-೨೪ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಸ್ಕೌಟ್‌ಗೈಡ್ಸ್ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವಿದ್ಯಾರ್ಥಿ ಭವಿಷ್ಯದ ಕುರಿತು ಕನಸು ಹೊಂದಿ ತನ್ನ ಕನಸಿನ ಕುರಿತು ಹುಚ್ಚಾಗಬೇಕು ಆಗ ಮಾತ್ರ ಕನಸು ಸಾಕಾರಗೊಳ್ಳುವುದು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಡಿಯಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಅಂತರ ಕಾಲೇಜು ಮಹಿಳೆಯರ ಕಬಡ್ಡಿ ಪಂದ್ಯಾವಳಿ, ಅಂತರ ಮಹಾವಿದ್ಯಾಲಯಗಳ ೮ನೇ ಅಥ್ಲೇಟಿಕ್ ಕ್ರೀಡಾಕೂಟ, ಕ್ರಿಕೆಟ್ ಪಂದ್ಯಾವಳಿಗಳನ್ನು ಏರ್ಪಡಿಸುವುದರ ಮೂಲಕ ಮೂವರು ವಿದ್ಯಾರ್ಥಿಗಳು ಯೂನಿವರ್ಸಿಟಿ ಬ್ಲೂಗಳಾಗಿದ್ದು ಹಾಗೂ ೨೦ ಕಿ.ಮೀಗಳ ಮ್ಯಾರಥಾನ್ ಸ್ಪರ್ಧೆಯಲ್ಲಿ ಕಾಲೇಜಿನ ನೀಲಮ್ಮ ಪೂಜಾರಿ ಹಾಗೂ…
ದೇವರಹಿಪ್ಪರಗಿ: ಆ.೭ರಂದು (ಇಂದು) ಪಟ್ಟಣದ ಇಂಡಿ ರಸ್ತೆಯಲ್ಲಿ ಅಗಲೀಕರಣ ಕಾರಣವಾಗಿ ವಿದ್ಯುತ್ ಕಂಬಗಳ ಸ್ಥಳಾಂತರ ಕೈಗೊಂಡಿರುವುದರಿಂದ ತಹಶೀಲ್ದಾರ ಕಚೇರಿ, ಶ್ರೀಸಿದ್ಧೇಶ್ವರ ಪ್ರೌಢಶಾಲೆಯ ಸುತ್ತಮುತ್ತಲಿನ ಬಡಾವಣೆಗಳ ವಿದ್ಯುತ್ ಮಾರ್ಗಗಳಲ್ಲಿ ಬೆಳಿಗ್ಗೆ ೯ ಘಂಟೆಯಿಂದ ಸಾಯಂಕಾಲ ೪ ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ದೇವರಹಿಪ್ಪರಗಿ ಇವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ದೇವರಹಿಪ್ಪರಗಿ: ಪುರಾಣ ಪ್ರವಚನಗಳಿಂದ ಆದರ್ಶ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಆಲಮೇಲ ಸಂಸ್ಥಾನ ಹಿರೇಮಠದ ಚಂದ್ರಶೇಖರಶ್ರೀಗಳು ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದ ಮಹಾಂತೇಶ್ವರ ಹಿರೇಮಠದಲ್ಲಿ ಸೋಮವಾರ ಆರಂಭಗೊಂಡ ಶ್ರೀಬಸವ ಪುರಾಣ ಹಾಗೂ ಇಷ್ಟಲಿಂಗ ಮಹಾಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಇಂದಿನ ಆಧುನಿಕತೆಯ ದಿನಗಳಲ್ಲಿ ಪುರಾಣ, ಪ್ರವಚನಗಳು ಹೆಚ್ಚು ಪ್ರಸ್ತುತವಾಗಿವೆ. ಪವಿತ್ರ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಳ್ಳುವ ಇಂಥ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮದ ಎಲ್ಲರೂ ಭಾಗವಹಿಸಬೇಕು ಎಂದರು.ಸ್ಥಳೀಯ ಮಹಾಂತೇಶ್ವರ ಹಿರೇಮಠದ ಬಸವಲಿಂಗಶ್ರೀಗಳು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ, ಶ್ರಾವಣ ಮಾಸದಲ್ಲಿ ಇಷ್ಟಲಿಂಗ ಶಾಸ್ತೋಕ್ತ ಪೂಜೆಯ ಅಗತ್ಯತೆ, ಮಹತ್ವದ ಕುರಿತು ತಿಳಿಸಿದರು. ನಿಲ್ಲೂರ ಶಿವಬಸವಶ್ರೀಗಳು, ಗುಳೇದಗುಡ್ಡದ ರೇವಣಸಿದ್ಧದೇವರು ಮಾತನಾಡಿದರು.ಪುರಾಣಿಕ ಪುಟ್ಟರಾಜಶಾಸ್ತ್ರಿ ಹಿರೇಮಠ, ಸಂಗೀತಗಾರ ಶರಣಕುಮಾರ ಯಾಳಗಿ, ತಬಲಾವಾದಕ ಅಡವೀಶಕುಮಾರ, ಡಾ.ಎಸ್.ಎ.ಹಿರೇಮಠ, ಬಸವಣ್ಣ ಜಾಲವಾದಿ, ಗ್ರಾಮದ ಸಂಗಪ್ಪಗೌಡ ಬಿರಾದಾರ ಗುಂಡಪ್ಪಗೌಡ ಬೋರಾವತ್, ಮಾಂತಯ್ಯ ಹಿರೇಮಠ, ರಾಜಶೇಖರ ಛಾಯಾಗೋಳ, ಸಂಗಯ್ಯ ಮೇಲಿನಮಠ, ನಾನಾಗೌಡ ಬೋರಾವತ್, ಸೋಮಶೇಖರ ಹಿರೇಮಠ, ಮಲ್ಲನಗೌಡ ಖೇಮಶೆಟ್ಟಿ, ಚನ್ನಪ್ಪಗೌಡ ಬಿರಾದಾರ, ಗುರುಪಾದ ಹುಣಸಗಿ, ಮಾಂತಗೌಡ ಸುಂಬಡ…
ಹೊನವಾಡ: ಶ್ರಾವಣ ಮಾಸ ಪವಿತ್ರ ಮಾಸ, ಈ ಮಾಸದಲ್ಲಿ ನಾವೆಲ್ಲರೂ ಒಳ್ಳೆಯ ವಿಚಾರಗಳನ್ನು ಶ್ರವಣ ಮಾಡಿದರೆ ನಮ್ಮಲ್ಲಿ ಸದ್ಗುಣಗಳು ಬೆಳೆಯುತ್ತವೆ ಎಂದು ಡಿ ಬಿ ಡೆಂಬ್ರೆ ಮಾತನಾಡಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನ ಅಭಿವೃದ್ಧಿ ಮಂಡಳಿ ಹಾಗೂ ಮಾತೊಶ್ರೀ ಈರಮ್ಮ ಶರಣಮ್ಮನವರ ಅಕ್ಕನ ಬಳಗದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಬಸವ ಪುರಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಂಗಾರದ ಕಿರೀಟವನ್ನು ಇಳಿಸಿ ಶರಣರಿಗೆ ಆಶ್ರಯ ನೀಡಿ ನಾವೆಲ್ಲರೂ ಒಂದೇ ಎಂಬ ತತ್ವಗಳನ್ನು ಸಾರಿದರು. ಹಣದಲ್ಲಿ ಶ್ರೀಮಂತಿಕೆಗಿಂತ ಗುಣದಲ್ಲಿ ಶ್ರೀಮಂತರಿರಬೇಕು ಎಂದು ಹೇಳಿದರು.ನಮ್ಮ ದೇಶ ಭಕ್ತಿ ಪ್ರಧಾನ ದೇಶ, ಸಾಧು ಸಂತರು ಶರಣರ ತಪಸ್ವಿನ ಫಲ ಪ್ರದವಾಗಿರುವಂತದ್ದು ಸಾಹಿತಿಕವಾಗಿ ಆಧ್ಯಾತ್ಮಿಕವಾಗಿ ಶ್ರೀಮಂತವಾಗಿರುವಂತ ದೇಶ, ಮೊಟ್ಟ ಮೊದಲು ಅನುಭವ ಮಂಟಪ ಸ್ಥಾಪಿಸಿರುವ ಮೊದಲಿಗರಲ್ಲಿ ಬಸವಣ್ಣನವರು ಬಸವ ಪುರಾಣವನ್ನು ಜನರಿಗೆ ತಲುಪಿಸುವಲ್ಲಿ ಪರಿಚಯಿಸುವಲ್ಲಿ ಬಂಥನಾಳ ಶಿವಯೋಗಿಗಳು ಮೊದಲಿಗರು ಎಂದು ರೇ ಸಿ ಪಾಟೀಲ ಮಾತನಾಡಿದರು.ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶೂದ್ರರಿಗೆ,…
