ಮುದ್ದೇಬಿಹಾಳ: ತಾಲೂಕಿನ ಗೋನಾಳ ಪಿ.ಎನ್ ಗ್ರಾಮದ ಪವಾಡಬಸವೇಶ್ವರ ಜಾತ್ರಾ ಮಹೋತ್ಸವ ಪ್ರತೀ ವರ್ಷದಂತೆ ಈ ವರ್ಷವೂ ಆ.೭ ರಿಂದ ನಡೆಯಲಿದೆ.
ಅಂದು ರಾತ್ರಿ ೧೦ಗಂಟೆಯಿಂದ ಅಹೋರಾತ್ರಿ ಶಿವ ಭಜನೆ, ೮ರಂದು ಬೆಳಿಗ್ಗೆ ೮ಕ್ಕೆ ಕಾಶಿ ವಿಶ್ವನಾಥಲಿಂಗಕ್ಕೆ ರುದ್ರಾಭಿಷೇಕ, ೯ ಗಂಟೆಗೆ ಪುಟ್ಟಿಗಾಡಿ ರೇಸ್ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯನ್ನು ಜಂಬಗಿ-ಮನ್ಯಾಳದ ಪ.ಪೂ ಶಂಕರಲಿಂಗ ಮಹಾರಾಜರು ಉದ್ಘಾಟಿಸುವರು. ಮಧ್ಯಾಹ್ನ ಮಂಗಳಾರತಿ ಮತ್ತು ಮಹಾಪ್ರಸಾದ ಇರಲಿದ್ದು ಎಲ್ಲ ಕಾರ್ಯಕ್ರಮಗಳು ಪೂಜ್ಯ ಶ್ರೀ ಚನ್ನಮಲ್ಲಪ್ಪ ಶರಣರ ನೇತೃತ್ವದಲ್ಲಿ ನಡೆಯಲಿವೆ ಎಂದು ದೇವಸ್ಥಾನದ ಸಮಸ್ತ ದೈವ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

