ಚುನಾಯಿತ ಮಹಿಳೆಯರ ಕುಟುಂಬ ಸದಸ್ಯರ ಮದ್ಯಸ್ಥಿಕೆಗೆ ಕಡಿವಾಣಕ್ಕೆ ಕೆಆರೆಸ್ ಆಗ್ರಹ
ವಿಜಯಪುರ: ಚುನಾಯಿತ ಮಹಿಳೆಯರ ಸದಸ್ಯರ ಕುಟುಂಬ ವರ್ಗದಿಂದ ಮದ್ಯಸ್ಥಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ. ವಿಜಯಪುರ ಇವರ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ನಗರ ಅಧ್ಯಕ್ಷರಾದ ಅಬ್ದುಲ ಹಮೀದ ಎಸ್. ಇನಾಮದಾರ ಮಾತನಾಡಿ, ವಿಜಯಪುರ ಜಿಲ್ಲೆಯ, ಮಹಾನಗರ ಪಾಲಿಕೆ, ಪುರಸಭೆ, ಹಾಗೂ ಪಂಚಾಯತ್ ರಾಜ್ ಚುನಾಯಿತ ಮಹಿಳೆಯರ ಗಂಡ ಹಾಗೂ ಮಕ್ಕಳು ಮಧ್ಯಸ್ಥಿಕೆಯು ದಿನನಿತ್ಯ ಹೆಚ್ಚಾಗುತ್ತಿದೆ. ಚುನಾಯಿತ ಮಹಿಳೆಯರ ಗಂಡ ಮಕ್ಕಳು ಹಾಗೂ ಇವರ ಕುಟುಂಬದ ಸದಸ್ಯರಿಂದ ಮಹಾನಗರ ಪಾಲಿಕೆ ಕಾರ್ಮಿಕರ ಜೊತೆ ಅವಾಚ್ಯ ಶಬ್ದಗಳು ಹಾಗೂ ಮಹಾನಗರ ಪಾಲಿಕೆ ಹಾಗೂ ಪಂಚಾಯತಿಯ ಸಭೆಗಳಲ್ಲಿ ಇವರ ಭಾಗಿಯಾಗಿ ಕಚೇರಿಗಳಲ್ಲಿ ಚುನಾಯಿತ ಮಹಿಳೆಯರ ಸ್ಥಾನಕ್ಕೆ ಇವರು ಬಳಸುವುದು ಮತ್ತು ಸಭೆ ಹಾಗೂ ಸಮಾರಂಭಗಳಲ್ಲಿ ಮಹಿಳೆಯರೇ ಬದಲಾಗಿ ಮಕ್ಕಳು ಹಾಗೂ ಅವರ ಮನೆಯವರು ಶಾಮೀಲಾಗುವುದು ಹಾಗೂ ಮಾಧ್ಯಮಯದಿಂದ ಸಂದರ್ಶನಗಳು ಮೌಖಿಕ ಮಾಹಿತಿಯ ಪ್ರಕಾರ ಕೆಲವೊಂದು ಸಮಯದಲ್ಲಿ ಪತ್ರಗಳಿಗೆ ಸಹಿ ಮಾಡಿದ್ದಾರೆ ಎಂದು ಮಾಹಿತಿ ಬಂದಿದೆ. ಹಾಗೂ ಚುನಾಯಿತ ಮಹಿಳೆಯರ ಸ್ಥಾನದ ದುರುಪಯೋಗ ಪಡೆದುಕೊಂಡು ತಮ್ಮ ದರ್ಪವನ್ನು ಪಾಲಿಕೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಮಾಡುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಈ ಕುರಿತು ಸರಕಾರವು ಸುತ್ತೋಲೆಯ ಮೂಲಕ ಸುತ್ತೋಲೆ ಹೊರಡಿಸಿ ನಿರ್ಣಯವನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಪ್ರಕಾಏ ಎಸ್.ಕೆ., ಕಾಂತುಗೌಡ ಬೆಂಡವಾಡ, ದುರ್ಗಪ್ಪ ಬೂದಿಹಾಳ, ವಿಕ್ರಮ ವಾಗಮೋರೆ ಇನ್ನಿತರರು ಉಪಸ್ಥಿತರಿದ್ದರು.

