ಹೊನವಾಡ: ಶ್ರಾವಣ ಮಾಸ ಪವಿತ್ರ ಮಾಸ, ಈ ಮಾಸದಲ್ಲಿ ನಾವೆಲ್ಲರೂ ಒಳ್ಳೆಯ ವಿಚಾರಗಳನ್ನು ಶ್ರವಣ ಮಾಡಿದರೆ ನಮ್ಮಲ್ಲಿ ಸದ್ಗುಣಗಳು ಬೆಳೆಯುತ್ತವೆ ಎಂದು ಡಿ ಬಿ ಡೆಂಬ್ರೆ ಮಾತನಾಡಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನ ಅಭಿವೃದ್ಧಿ ಮಂಡಳಿ ಹಾಗೂ ಮಾತೊಶ್ರೀ ಈರಮ್ಮ ಶರಣಮ್ಮನವರ ಅಕ್ಕನ ಬಳಗದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಬಸವ ಪುರಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಗಾರದ ಕಿರೀಟವನ್ನು ಇಳಿಸಿ ಶರಣರಿಗೆ ಆಶ್ರಯ ನೀಡಿ ನಾವೆಲ್ಲರೂ ಒಂದೇ ಎಂಬ ತತ್ವಗಳನ್ನು ಸಾರಿದರು. ಹಣದಲ್ಲಿ ಶ್ರೀಮಂತಿಕೆಗಿಂತ ಗುಣದಲ್ಲಿ ಶ್ರೀಮಂತರಿರಬೇಕು ಎಂದು ಹೇಳಿದರು.
ನಮ್ಮ ದೇಶ ಭಕ್ತಿ ಪ್ರಧಾನ ದೇಶ, ಸಾಧು ಸಂತರು ಶರಣರ ತಪಸ್ವಿನ ಫಲ ಪ್ರದವಾಗಿರುವಂತದ್ದು ಸಾಹಿತಿಕವಾಗಿ ಆಧ್ಯಾತ್ಮಿಕವಾಗಿ ಶ್ರೀಮಂತವಾಗಿರುವಂತ ದೇಶ, ಮೊಟ್ಟ ಮೊದಲು ಅನುಭವ ಮಂಟಪ ಸ್ಥಾಪಿಸಿರುವ ಮೊದಲಿಗರಲ್ಲಿ ಬಸವಣ್ಣನವರು ಬಸವ ಪುರಾಣವನ್ನು ಜನರಿಗೆ ತಲುಪಿಸುವಲ್ಲಿ ಪರಿಚಯಿಸುವಲ್ಲಿ ಬಂಥನಾಳ ಶಿವಯೋಗಿಗಳು ಮೊದಲಿಗರು ಎಂದು ರೇ ಸಿ ಪಾಟೀಲ ಮಾತನಾಡಿದರು.
ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮೊದಲ ಬಾರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು ಎಂದು ನಚಿಕೇತ ಹಿರೇಮಠ್ ಸ್ವಾಮಿಗಳು ಹೇಳಿದರು.
ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ.ಶರಣರ ವಚನಗಳು ಮತ್ತು ತತ್ತ್ವ ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂದು ಪ್ರವಚನಕಾರರಾದ ಭೀಮಾಶಂಕರ ಶರಣರು ಹೇಳಿದರು.
ಕಾರ್ಯಕ್ರಮದಲ್ಲಿ ವಿಜಯಕುಮಾರ್ ಹಿರೇಮಠ್, ಸದಾನಂದ ಮಾಡಗಾಳ ಅರಟಾಳ, ಚಿದಾನಂದಸ್ವಾಮಿ ಮಠಪತಿ, ಸಂಘದ ಅಧ್ಯಕ್ಷ ಬಸವಂತರಾಯ ಮಸಳಿ ಮಲ್ಲಪ್ಪ ಲವಗಿ ಶ್ರೀಶೈಲ ಅರಮೋತಿ ಹೊನವಾಡದ ಶರಣ ಶರಣೆಯರು ಇದ್ದರು.
ಕಾರ್ಯಕ್ರಮವನ್ನು ಆರ್ ಎಂ ಸಕ್ರಿ ನಿರೂಪಿಸಿದರು, ಕಾವ್ಯಾ ಕೋಟಿ ಸಂಗಡಿಗರು ಪ್ರಾರ್ಥನೆಯನ್ನು ಮಾಡಿದರು, ಎನ್ ಬಿ ಕೋಟಿ ಸ್ವಾಗತಿಸಿದರು ಧರೆಪ್ಪ ಸಿದ್ನಾಥ ,
Subscribe to Updates
Get the latest creative news from FooBar about art, design and business.
Related Posts
Add A Comment

