ಕಲಕೇರಿ: ದುರ್ಗುಣಗಳು ವ್ಯಕ್ತಿತ್ವವನ್ನು ಕ್ಷೀಣಿಸುತ್ತವೆ. ಶಿಸ್ತು, ಸಂಯಮ ಹಾಗೂ ಕಲಿಕಾಸಕ್ತಿ, ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ಸಕ್ರೀಯವಾಗಿ ಭಾಗಿಯಾಗುವದರಿಂದ ವಿದ್ಯಾರ್ಥಿಗಳ ಬದುಕು ಸುಂದರ ಮತ್ತು ಸದೃಡಗೊಳ್ಳುತ್ತದೆ ಎಂದು ಕಲಕೇರಿ ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಹೇಳಿದರು.
ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ೧೦ ಘಂಟೆಗೆ ನಡೆದ ೨೦೨೪-೨೫ ನೇ ಸಾಲಿನ ಸಾಂಸ್ಕೃತಿಕ ಮತ್ತು ಶಾರೀರಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿಧ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ತಮ್ಮ ಪಾಲಕರ ಪೋಷಕರ ಕ್ಷದ ಅರಿವು ಇಟ್ಟುಕೊಳ್ಳಬೇಕು, ಮನೆಯಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳ ಮಧ್ಯೆಯೂ ತಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಅವರು ನೊಡಿಕೊಳ್ಳುತ್ತಾರೆ ಆದರೆ ಇಂದು ಅದೆಷ್ಟೋ ವಿಧ್ಯಾರ್ಥಿಗಳು ಮೋಬೈಲ್ ಚಾಳಿಗೆ ಬಿದ್ದು ತಮ್ಮ ಉಜ್ವಲ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಇದು ವಿಷಾದನೀಯ. ಇದೆಲ್ಲವನ್ನು ಬದಿಗೊತ್ತಿ ವಿದ್ಯಾಗುರುಗಳು ಮತ್ತು ಪಾಲಕರ ಮಾರ್ಗದರ್ಶನದಲ್ಲಿ ಮುನ್ನಡೆದು ಉತ್ತಮ ಪ್ರಜೆಗಳಾಗಿ ಹೊರಹೊಮ್ಮುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಿಂದಗಿಯ ಎಚ್ ಜಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ ಆರ್ ಹೆಗ್ಗಣದೊಡ್ಡಿ, ಕಲಕೇರಿ ಪಿಎಸ್‌ಐ ಸುರೇಶ ಮಂಟೂರ ವಿಶೇಷ ಉಪನ್ಯಾಸ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು.
ಸಂಸ್ಥೆಯ ಹಿರಿಯ ನಿರ್ಧೇಶಕ ಷಣ್ಮುಕಪ್ಪ ಝಳಕಿ, ಮಲಕಾಜಪ್ಪಗೌಡ ಬಿರಾದಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಾಚಾರ್ಯ ಸಿ ಎಸ್ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಟಿಇಎಂ ಪ್ರೌಡಶಾಲೆಯ ಮುಖ್ಯಗುರು ಬಿ ಡಿ ಭಾಣಕಾರ ಮತ್ತು ದ್ವಿತಿಯ ದರ್ಜೆ ಸಹಾಯಕ ನಬಿಲಾಲ್ ಬಡೆಮಗೋಳ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪುಷ್ಪಗಳನ್ನು ನೀಡಿ ಕಾಲೇಜಿಗೆ ಸ್ವಾಗತಿಸಿದರು. ಈ ವೇಳೆ ಕಾಲೇಜಿನ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ, ಮನೊರಂಜನಾ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ಧೇಶಕರಾದ ಸಿದ್ದಣ್ಣ ಚಳ್ಳಗಿ, ವೀರಪ್ಪ ಝಳಕಿ, ಅಪ್ಪಾಸಾಬ ಗುಮಶೇಟ್ಟಿ, ಎಸ್ ಬಿ ಪಾಟೀಲ, ದೇವಿಂದ್ರ ಹುಲೆಂಕಿ, ಸಾಂತವೀರ ಧುರ್ಗಿ, ಎಸ್ ಎಸ್ ಕಲಶೇಟ್ಟಿ, ಬಿ ಜಿ ಚನಗೊಂಡ, ಜಿ ಜಿ ಮಡೆದಾರ, ರವಿಕುಮಾರ ಗುಮಶೇಟ್ಟಿ, ಬಸವರಾಜ್ ಕುಂಬಾರ, ವಿರೇಶ ಝಳಕಿ, ಶಿವಕುಮಾರ ಚಿಕ್ಕಮಠ, ಭೋರಮ್ಮ ಗೋಟಗುಣಕಿ, ಸ್ವಪ್ನ ಸಜ್ಜನ್, ಮಡಿವಾಳಪ್ಪ ಹಯ್ಯಾಳ, ಕಾವೇರಿ ಪತ್ತಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ದುರ್ಗುಣಗಳು ವ್ಯಕ್ತಿತ್ವವನ್ನು ಕ್ಷೀಣಿಸುತ್ತವೆ :ಸಿದ್ದರಾಮ ಶ್ರೀಗಳು
Related Posts
Add A Comment

