ಮುದ್ದೇಬಿಹಾಳ: ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ ಎಂದು ಬೇಸರಗೊಂಡ ದೈಹಿಕ ಶಿಕ್ಷಕರು ಕೈಗೆ ಕಪ್ಪು ಪಟ್ಟಿ ಧರಿಸಿ ಕ್ರೀಡಾಕೂಟದಲ್ಲಿ ಭಾಗಿಯಾಗಿ ಆಕ್ರೋಶವನ್ನು ಹೊರಹಾಕಿದ್ದಾರೆ.
ಪಟ್ಟಣದ ಶಾಂತಲಾ ಪ್ರೌಢಶಾಲಾ ಮೈದಾನದಲ್ಲಿ ನಡೆದ ತಾಲೂಕಿನ ಪ್ರಾಥಮಿಕ ಶಾಲೆಗಳ ಉತ್ತರ ವಲಯದ ಕ್ರೀಡಾಕೂಟದಲ್ಲಿ ಕೈಗೆ ಪಕ್ಕು ಪಟ್ಟಿ ಧರಿಸಿ ಭಾಗಿಯಾದ ದೈಹಿಕ ಶಿಕ್ಷಕರು, ತಮ್ಮನ್ನು ಸಹಶಿಕ್ಷಕರನ್ನಾಗಿ ಪರಿಗಣಿಸಬೇಕು, ಸಹ ಶಿಕ್ಷಕರಿಗೆ ಸಿಗುವ ಸೌಲಭ್ಯಗಳಾದ ಮುಖ್ಯ ಶಿಕ್ಷಕರಾಗಿ ಬಡ್ತಿ, ಸಿ ಅಂಡ್ ಆರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಿ.ಆರ್.ಪಿ, ಬಿ.ಆರ್.ಪಿ, ಹುದ್ದೆಗಳನ್ನು ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಗಾಗಿ ಹಲವು ಬಾರಿ ಮನವಿ ಮಾಡಿಕೊಂಡಿದ್ದು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಬೇಡಿಕೆಗಳು ಈಡೇರುವವರಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆಯೊಂದಿಗೆ ಕ್ರೀಡಾಕೂಟವನ್ನು ನಡೆಸುವದಾಗಿ ತಿಳಿಸಿದರು.
ಈ ವೇಳೆ ತಾಲೂಕಿನ ಪ್ರೌಢಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಶೇಖರ ಲಮಾಣಿ, ಗೌರವಾಧ್ಯಕ್ಷ ಚಂದ್ರಕಾAತ ಮನಗೂಳಿ, ಖಜಾಂಚಿಗಳಾದ ಗುರು ಸಾಲಿಮಠ ಮತ್ತು ಎ.ಸಿ.ಕೆರೂರ, ಬಸವರಾಜ ಭಜಂತ್ರಿ, ಶರಣು ಇದ್ದಲಗಿ, ಬಸವರಾಜ ರಾಮೋಡಗಿ, ನಾಗರಾಜ ಮುದಗಲ್ಲ, ಬಿ.ಎಸ್.ಫಣೇದಕಟ್ಟಿ, ಬಿ.ಜಿ.ತಾಳಿಕೋಟಿ, ಎಸ್.ಕೆ.ಬಿರಾದಾರ, ಆರ್.ವೈ.ಪಾಟೀಲ, ಸಾಗರ ಜಾದವ, ರಾಮನಗೌಡ ಬಿರಾದಾರ, ಯಮನೂರಿ ಹರಿಜನ್, ಎಸ್.ಎ.ಗಂಗನಗೌಡರ, ಐ.ಎಂ.ಕೆಂಭಾವಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಬಸವರಾಜ ಕೋರಿ, ಆರ್.ಡಿ.ಬಿರಾದಾರ, ಮುಖ್ಯ ಗುರುಗಳಾದ ಎಸ್.ಎಸ್.ಆಳ್ವಿ, ಎಸ್.ಕೆ.ಹರನಾಳ, ಶೋಭಾ ಬಲಕುಂದಿ, ಎ.ಆರ್.ಪಾಟೀಲ, ಈರಣ್ಣ ಬಿಜ್ಜೂರ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

