ದೇವರಹಿಪ್ಪರಗಿ: ಪುರಾಣ ಪ್ರವಚನಗಳಿಂದ ಆದರ್ಶ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಆಲಮೇಲ ಸಂಸ್ಥಾನ ಹಿರೇಮಠದ ಚಂದ್ರಶೇಖರಶ್ರೀಗಳು ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದ ಮಹಾಂತೇಶ್ವರ ಹಿರೇಮಠದಲ್ಲಿ ಸೋಮವಾರ ಆರಂಭಗೊಂಡ ಶ್ರೀಬಸವ ಪುರಾಣ ಹಾಗೂ ಇಷ್ಟಲಿಂಗ ಮಹಾಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಇಂದಿನ ಆಧುನಿಕತೆಯ ದಿನಗಳಲ್ಲಿ ಪುರಾಣ, ಪ್ರವಚನಗಳು ಹೆಚ್ಚು ಪ್ರಸ್ತುತವಾಗಿವೆ. ಪವಿತ್ರ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಳ್ಳುವ ಇಂಥ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮದ ಎಲ್ಲರೂ ಭಾಗವಹಿಸಬೇಕು ಎಂದರು.
ಸ್ಥಳೀಯ ಮಹಾಂತೇಶ್ವರ ಹಿರೇಮಠದ ಬಸವಲಿಂಗಶ್ರೀಗಳು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ, ಶ್ರಾವಣ ಮಾಸದಲ್ಲಿ ಇಷ್ಟಲಿಂಗ ಶಾಸ್ತೋಕ್ತ ಪೂಜೆಯ ಅಗತ್ಯತೆ, ಮಹತ್ವದ ಕುರಿತು ತಿಳಿಸಿದರು. ನಿಲ್ಲೂರ ಶಿವಬಸವಶ್ರೀಗಳು, ಗುಳೇದಗುಡ್ಡದ ರೇವಣಸಿದ್ಧದೇವರು ಮಾತನಾಡಿದರು.
ಪುರಾಣಿಕ ಪುಟ್ಟರಾಜಶಾಸ್ತ್ರಿ ಹಿರೇಮಠ, ಸಂಗೀತಗಾರ ಶರಣಕುಮಾರ ಯಾಳಗಿ, ತಬಲಾವಾದಕ ಅಡವೀಶಕುಮಾರ, ಡಾ.ಎಸ್.ಎ.ಹಿರೇಮಠ, ಬಸವಣ್ಣ ಜಾಲವಾದಿ, ಗ್ರಾಮದ ಸಂಗಪ್ಪಗೌಡ ಬಿರಾದಾರ ಗುಂಡಪ್ಪಗೌಡ ಬೋರಾವತ್, ಮಾಂತಯ್ಯ ಹಿರೇಮಠ, ರಾಜಶೇಖರ ಛಾಯಾಗೋಳ, ಸಂಗಯ್ಯ ಮೇಲಿನಮಠ, ನಾನಾಗೌಡ ಬೋರಾವತ್, ಸೋಮಶೇಖರ ಹಿರೇಮಠ, ಮಲ್ಲನಗೌಡ ಖೇಮಶೆಟ್ಟಿ, ಚನ್ನಪ್ಪಗೌಡ ಬಿರಾದಾರ, ಗುರುಪಾದ ಹುಣಸಗಿ, ಮಾಂತಗೌಡ ಸುಂಬಡ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

