Author: editor.udayarashmi@gmail.com

ದೇವರಹಿಪ್ಪರಗಿ: ವ್ಯಸನಮುಕ್ತ ಬದುಕಿನಿಂದ ಮಾತ್ರ ನಾವೆಲ್ಲ ಸುಂದರ ಜೀವನ ಹಾಗೂ ಸಮಾಜ ಕಟ್ಟಿಕೊಳ್ಳಬಹುದಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಎಸ್.ಎನ್.ಬಸವರೆಡ್ಡಿ ಹೇಳಿದರು.ತಾಲ್ಲೂಕಿನ ಜಾಲವಾದ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇಗೀಗ ಶಾಲಾ ವಿದ್ಯಾರ್ಥಿಗಳ ಬ್ಯಾಗಗಳಲ್ಲಿ ಗುಟುಕಾ ಚಿಟ್ಸ್ ದೊರೆಯುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಇಂಥ ವ್ಯಸನಗಳ ಕುರಿತು ಯುವಕರು, ವಿದ್ಯಾರ್ಥಿಗಳು ಜಾಗೃತರಾಗಬೇಕು. ಕರ್ನಾಟಕ ತಂಬಾಕು ಮುಕ್ತ ನಾಡಾಗಬೇಕು. ಅದಕ್ಕಾಗಿ ತಂಬಾಕು ಉತ್ಪನ್ನಗಳಾದ ಗುಟುಕಾ, ಮಾವಾ, ನಿಕೋಟಿನ್ ಮಿಶ್ರಿತ ಕಿಮಾಮ್‌ಗಳ ಸೇವನೆಯಿಂದ ಯುವಪೀಳಿಗೆ ಹೊರಬರಬೇಕು. ಅದಕ್ಕಾಗಿ ಮನೆಯಲ್ಲಿ ಮಾತೆಯರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪಿ.ಎಸ್.ಮಿಂಚನಾಳ ಮಾತನಾಡಿ, ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳ ಕುರಿತು ಸಮಗ್ರ ಮಾಹಿತಿ ನೀಡಿ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನ ತಂಬಾಕು ಸೇವನೆಯ ವ್ಯಸನದಿಂದ ದೂರ ಉಳಿಯಬೇಕು ಎಂದರು. ವಲಯ ಮೇಲ್ವಿಚಾರಕ ಬಾಬುರಾವ್ ಗೋಣಿ…

Read More

ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಾಗೂ ಭವನಕ್ಕೆ ಹೆಚ್ಚುವರಿ ಜಾಗ ನೀಡಲು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ನಗರ ಮಂಡಲ ಪದಾಧಿಕಾರಿಗಳು ಶನಿವಾರ ಭೇಟಿ ನೀಡಿ ಬೆಂಬಲ ಸೂಚಿಸಿದರು.ಮಹಾನಗರ ಪಾಲಿಕೆ ಸದಸ್ಯರಾದ ವಿಠ್ಠಲ ಹೊಸಪೇಟೆ, ಜವಾಹಾರ ಗೋಸಾವಿ, ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಮಹೇಶ ಒಡೆಯರ, ವಿಡಿಎ ಮಾಜಿ ಸದಸ್ಯ ಮಡಿವಾಳ ಯಾಳವಾರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಚವ್ಹಾಣ ಸೇರಿದಂತೆ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ಮತ್ತಿತರರು ಇದ್ದರು.

Read More

ಸಿಂದಗಿ: ಪಟ್ಟಣದ ಅಖಿಲ ಭಾರತೀಯ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಟ್ರಸ್ಟ್ (ನಾಸಿಕನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಿಂದಗಿ ನಗರದ ಹಿರಿಯ ನ್ಯಾಯವಾದಿ ಅಶೋಕ ಗಾಯಕವಾಡ ಅವರನ್ನು ಜ್ವಾಜಾ ಸೈಫನ್ ಮುಲ್ಕ್ ಟ್ರಸ್ಟ್ ಹಾಗೂ ಹಿರೋಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ನಾಸಿಕನ ಅಖಿಲ ಭಾರತೀಯ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಟ್ರಸ್ಟ್ (ನಾಸಿಕ) ನ ಉಪಾಧ್ಯಕ್ಷರಾಗಿ ಸಮಾಜದ ಟ್ರಸ್ಟ್ಗೆ ಅವಿರೋಧವಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಸಮಾಜದ ಹಿತ ರಕ್ಷಣೆಗೆ ಸದಾ ಬೆನ್ನುಲುಬಾಗಿ ನಿಲ್ಲುವೆ. ಕ್ಷತ್ರೀಯ ಸಮಾಜವನ್ನು ಶೈಕ್ಷಣಿಕ, ಸಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸುವೆ ಎಂದರು.ಈ ವೇಳೆ ದರ್ಗಾದ ಅಧ್ಯಕ್ಷ ಮಹಾದೇವಪ್ಪ ಗಾಯಕವಾಡ, ಅಂಬಾಜಿ ಗಾಯಕವಾಡ, ಅಶೋಕ ಸುಲ್ಪಿ, ಸೇರಿದಂತೆ ಸಿಂದಗಿಯ ಸೋಮವಂಶ ಕ್ಷತ್ರೀಯ ಸಮಾಜ ಬಾಂಧವರು ಮತ್ತು ಇತರರು ಇದ್ದರು.

Read More

ಸಿಂದಗಿ: ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರು ಶೋಷಿತ ವರ್ಗಗಳ ಧ್ವನಿಯಾಗಿ ದಿನದಲಿತರ, ಅಲ್ಪ ಸಂಖ್ಯಾತರ ಜೊತೆಗೂಡಿ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ ಎಂದು ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಮಹಿಬೂಬ್ ಸಿಂದಗಿಕರ ಹೇಳಿದರು.ಪಟ್ಟಣದ ದಲಿತ ಸೇನೆ ತಾಲೂಕ ಕಾರ್ಯಾಲಯದಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರ ಹುಟ್ಟುಹಬ್ಬದ ನಿಮಿತ್ಯವಾಗಿಪೌರ ಕಾರ್ಮಿಕರಿಗೆ ಹಣ್ಣು ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಈ ವೇಳೆ ೨೦ಕ್ಕೂ ಅಧಿಕ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಶೇಖ್, ದಲಿತ ಸೇನೆ ಜಿಲ್ಲಾಧ್ಯಕ್ಷ ಖಾಜು ಹೊಸಮನಿ, ಜಿಲ್ಲಾ ಉಪಾಧ್ಯಕ್ಷ ಸುಭಾಷ್ ತಳವಾರ್, ತಾಲೂಕ ಉಪಾಧ್ಯಕ್ಷ ಶಾಹಾನೂರ ಬುಕ್ಕದ್ದ, ಜಾವಿದ್ ಕರ್ಜಗಿ, ಸಯ್ಯದ್ ಕರ್ಜಗಿವ ಸೇರಿದಂತೆ ದಲಿತ ಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಮತ ಎಣಿಕೆ ಸಿಬ್ಬಂದಿ ಕಡ್ಡಾಯವಾಗಿಗುರುತಿನ ಚೀಟಿ ಧರಿಸಲು ಜಿಲ್ಲಾಧಿಕಾರಿ ಸೂಚನೆ ವಿಜಯಪುರ: ಮತ ಎಣಿಕೆ ಸಿಬ್ಬಂದಿ ಮತ ಎಣಿಕೆ ಕೇಂದ್ರದ ಒಳಗಡೆ ಮೊಬೈಲ್ ಪೋನ್, ಸ್ಮಾರ್ಟ್ ವಾಚ್, ಟ್ಯಾಬ್, ವೈರಲೆಸ್ ಉಪಕರಣಗಳನ್ನು ತರುವುದು ನಿಷೇಧಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಜಿಲ್ಲಾಡಳಿತ ನೀಡಿರುವ ಗುರುತಿನ ಚೀಟಿ ಧರಿಸಿಕೊಂಡು ಬರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರುನಗರದ ಸೈನಿಕ್ ಶಾಲೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಮತ ಎಣಿಕೆ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಮತಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲಕ್ಕೆ ಕಾರಣವಾಗಬಾರದು ಎಂಬ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತಎಣಿಕೆ ಕೇಂದ್ರಗಳಲ್ಲಿ ಮೊಬೈಲ್ನೊಂದಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೆಲವು ಅಗತ್ಯತೆ ಅನುಗುಣವಾಗಿ ಸಹಾಯಕ ಚುನಾವಣೆ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು ಅವಶ್ಯವಿದ್ದಲ್ಲಿ ಮತ ಎಣಿಕೆಯ ಹಾಲ್‌ನ ಹೊರಗಡೆ ಮಾತ್ರ ಬಳಸಬಹುದು ಎಂದು ತಿಳಿಸಿದರು.ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯುವ ಸೈನಿಕ ಶಾಲೆಯ ಸುತ್ತಲೂ ೨೦೦ ಮೀಟರ್ ಅಳತೆಯಲ್ಲಿ ನಿಷೇಧಾಜ್ಞೆ…

Read More

ಚಡಚಣ: ಕನ್ನಡ ಜಾನಪದ ಪರಿಷತ್‌ ಚಡಚಣ ತಾಲೂಕು ಘಟಕದ ಅಧ್ಯಕ್ಷರಾಗಿ ಆನಂದಪ್ಪ ಚನ್ನಪ್ಪ ಹುಣಸಗಿ ಅವರನ್ನು ಆಯ್ಕೆ ಮಾಡಿ ರಾಜ್ಯಧ್ಯಕ್ಷ ಡಾ. ಎಸ್‌ ಬಾಲಾಜಿ ಆದೇಶ ಹೊರಡಿಸಿದ್ದಾರೆ.ಜಾನಪದ ಕಲೆಗಳ ಕ್ಷೇತ್ರ ಕಾರ್ಯ, ಧಾಖಲೀಕರಣ, ತರಬೇತಿ ಮೂಲಕ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಮತ್ತು ಪ್ರಮಾಣಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಗತ್ತಿನ‌ ಖ್ಯಾತ ಬ್ರಿಟಿಷ ವೈದ್ಯಕೀಯ ಪ್ರಕಾಶನ ಸಂಸ್ಥೆಯ ಬಿ ಎಂ ಜೆ ಕೇಸ ರಿಪೋರ್ಟ ವೈದ್ಯಕೀಯ ವಿಜ್ಞಾನ ಮಾಸಿಕ ನಿಯತಕಾಲಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ ಆಯ್ಕೆ ಆಗಿದ್ದಾರೆ.ಈ ಮೂಲಕ ವಿಶ್ವದ ಪ್ರತಿಷ್ಠಿತ ನಿಯತಕಾಲಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಆಯ್ಜೆಯಾದ ಭಾರತದ ಮೊದಲ‌ ಚರ್ಮರೋಗ ತಜ್ಞ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇಂದಿನಿಂದ ಅಂದರೆ ಜೂನ್ 01, 2024 ರಿಂದ ಅವರು ನಿಯತಕಾಲಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.ಚರ್ಮರೋಗ ವೈದ್ಯಕೀಯ ಕ್ಷೇತ್ರದಲ್ಲಿ ಅವರದೇ ಆದ ಕೊಡುಗೆ ನೀಡುತ್ತಿರುವ ಡಾ. ಅರುಣ ಚಂ. ಇನಾಮದಾರ ಅವರಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಾಧಿಪತಿ ಎಂ. ಬಿ. ಪಾಟೀಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ವಿಜಯಪುರ: 2023-24 ನೇ ಸಾಲಿನಲ್ಲಿ ನಡೆದ NMMS ಪರೀಕ್ಷೆಯಲ್ಲಿ ಜಮಖಂಡಿ ತಾಲೂಕಿನಿಂದ ಒಟ್ಟು 121 ಮಕ್ಕಳು ಆಯ್ಕೆಯಾಗಿದ್ದಾರೆ.ಆಯ್ಕೆಯಾದ ಮಕ್ಕಳಿಗೆ ಪ್ರತಿವರ್ಷ ಒಂದು ಸಾವಿರ ರೂಪಾಯಿಯಂತೆ, ವರ್ಷಕ್ಕೆ 12000 ರೂಪಾಯಿ ಸ್ಕಾಲರ್ಶಿಪ್ ಹಣ ಮಗುವಿನ ಖಾತೆಗೆ ಜಮಾ ಆಗುತ್ತದೆ. ಈ ರೀತಿ ಒಟ್ಟು ನಾಲ್ಕು ವರ್ಷಗಳವರೆಗೆ ಅಂದರೆ PUC 2ND ವರ್ಷದವರೆಗೆ ಮಗುವಿನ ಖಾತೆಗೆ ಸ್ಕಾಲರ್ಶಿಪ್ ಜಮಾ ಆಗುತ್ತದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು NMMS ಪಾಸಾದ ತಾಲೂಕು ಜಮಖಂಡಿ ಆಗಿದೆ. ಅದರಲ್ಲಿ 125 ಅಂಕಗಳನ್ನು ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಕುಮಾರಿ ಪ್ರಜ್ಞಾ ಪಾಟೀಲ, 121 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆದ ಕುಮಾರಿ ಸ್ನೇಹ ಜಾಧವ & 120 ಅಂಕಗಳನ್ನು ಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಪಡೆದ ಶ್ವೇತ ಜಾಧವ ಇವರಿಗೆ ಮಾನ್ಯ ಶ್ರೀಯುತ ಎ ಕೆ ಬಸಣ್ಣವರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ಅವರ ಅಧ್ಯಕ್ಷತೆಯಲ್ಲಿ, ಶ್ರೀಮತಿ ಸಮೀನಾಕೌಸರ ಸೌದಾಗರ NMMS ನೋಡಲ್ ಜಮಖಂಡಿ ಅವರ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್ ನಿವೃತ್ತರೇ ಗಮನಿಸಿ.. ಪ್ರವೃತ್ತಿಗೆ ಇದು ಸಕಾಲ ಪ್ರತಿ ವರ್ಷ ಜೂನ್ ತಿಂಗಳು ಬಂತೆಂದರೆ ಸಾಲು ಸಾಲಾಗಿ ಹುಟ್ಟು ಹಬ್ಬಗಳ ಆಚರಣೆ. ಅದೂ ಜೂನ್ ತಿಂಗಳ ಮೊದಲನೇ ದಿನವೇ ಹೆಚ್ಚಾಗಿ ಈ ಸಾಲು ಸಾಲು ಹುಟ್ಟುಹಬ್ಬಗಳ ಹಿಂದಿನ ಗುಟ್ಟೇನು ? ಮತ್ತೇನೂ ಇಲ್ಲ. ಅಂದು ವಾರ, ತಿಥಿ, ನಕ್ಷತ್ರಗಳ ಮೂಲಕ ದಿನಗಳನ್ನು ಗೊತ್ತು ಪಡಿಸುತ್ತಿದ್ದ ಕಾಲ. ಅಮಾವಾಸ್ಯೆಗೆ 3 ದಿನ ಮುಂಚೆ, ಹುಣ್ಣಿವೆಗೆ 4 ದಿನ ಹಿಂದೆ, ಬಸವ ಜಯಂತಿ, ಎಳ್ಳಮಾಸೆ ಹೀಗೆ ತಮ್ಮಮಕ್ಕಳ ಹುಟ್ಟುಹಬ್ಬ, ವಿಶೇಷ ದಿನಗಳನ್ನು, ಹಿರಿಯರ ಸಾವುಗಳನ್ನ ಗುರುತಿಸುತ್ತಿದ್ದ ಕಾಲ. ಆಗಿನ ಕಾಲದ ಮಕ್ಕಳನ್ನು ಶಾಲಾ ಪ್ರವೇಶಾತಿಗೆ ದಾಖಲು ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಶಿಕ್ಷಕರು ಜೂನ್ ಒಂದನೇ ತಾರೀಕು ಅವರ ಹುಟ್ಟಿದ ದಿನ ಎಂದು ಬರೆದುಕೊಂಡು ಬಿಡುತ್ತಿದ್ದರು. ಅದುವೇ ಇಂದು ಮೇ ತಿಂಗಳ ಕೊನೆಯ ದಿನಾಂಕದಲ್ಲಿ ನಿವೃತ್ತಿ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಲು ಕಾರಣ. ಜೂನ್ ತಿಂಗಳ ಮೊದಲ ದಿನ ಹುಟ್ಟಿದ…

Read More

ಬೆಂಗಳೂರು ಪದವೀಧರ ಮತಕ್ಷೇತ್ರದ ಸಾಕ್ಷಾತ್‌ ಸಮೀಕ್ಷೆ ಬೆಂಗಳೂರು: ಜಾಣವಂತರ ನಗರ ಬೆಂಗಳೂರಿನಲ್ಲಿ ನಡೆಯುತ್ತಿರುವ ಪದವೀಧರ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ-ಜೆಡಿಎಸ್‌ ಮಧ್ಯೆ ನೇರ ಹಣಾಹಣಿಯಿದ್ದು, ಪ್ರಚಾರ ಹಾಗೂ ಮತದಾರರ ಭೇಟಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿಗೌಡ ಮುಂದಿದ್ದಾರೆ.ರಾಮೋಜಿಗೌಡರ ವೈಯಕ್ತಿಕ ವರ್ಚಸ್ಸು, ಅವರು ಕಳೆದ ಒಂದು ದಶಕದಿಂದ ಕ್ಷೇತ್ರಾದ್ಯಂತ ಮತದಾರರಿಗೆ ಸ್ಪಂದಿಸುವ ಗುಣ ಜತೆಗೆ ಸ್ವತಃ ಉಪಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್‌ ಶಾಸಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರ ಜತೆಗೆ ಎರಡು ಸಲ ಸೋತಿರುವ ಅನುಕಂಪವೂ ರಾಮೋಜಿಗೌಡರ ಗೆಲುವಿಗೆ ಪ್ಲಸ್‌ ಪಾಯಿಂಟ್‌ ಆಗಿದೆ.ಬಿಜೆಪಿಯಲ್ಲಿ ಭಿನ್ನಮತ ಉಲ್ಭಣ:ಆರು ವರ್ಷದಿಂದ ವಿಧಾನಪರಿಷತ್‌ ಸದಸ್ಯರಾಗಿರುವ ಅ.ದೇವೇಗೌಡ ಕ್ಷೇತ್ರದಾದ್ಯಂತ ಒಮ್ಮೆಯೂ ಸಂಚರಿಸದ, ಕ್ರೀಯಾಶೀಲತೆಯಿಂದ ಇರದ ಕಾರಣ ಪದವೀಧರ ಮತದಾರರಲ್ಲಿ ಅವರ ಹೆಸರೇ ಗೊತ್ತಿಲ್ಲ. ಇದು ಅ. ದೇವೇಗೌಡರ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದು ರಾಜಾಜಿನಗರ ಪದವೀಧರ ಮತದಾರ ಚಂದ್ರಶೇಖರ ಅಭಿಪ್ರಾಯಪಟ್ಟರು.ಕ್ಷೇತ್ರದಾದ್ಯಂತ ಸಂಚರಿಸಿದಾಗ ಎಲ್ಲಿಯೂ ದೇವೇಗೌಡರ ಬಗ್ಗೆ ಒಲುವು ಕಂಡು ಬರಲಿಲ್ಲ. ಬಿಜೆಪಿಯಲ್ಲಿಯೇ ಮುಖಂಡರು ಸೇರಿದಂತೆ ಕಾರ್ಯಕರ್ತರಿಗೂ ಅವರ ಪರಿಚಯವಿಲ್ಲದಿರುವುದು ಅವರ ಮೈನಸ್‌. ಅಭ್ಯರ್ಥಿಯಾಗುವ ಉದ್ದೇಶದಿಂದ ಸಂಘ…

Read More