ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ನಬಿರೋಶನ್ ಪ್ರಕಾಶನ ವತಿಯಿಂದ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಈ ಪ್ರಶಸ್ತಿ ಇದೆ ಮೊದಲ ಬಾರಿಗೆ ನೀಡುತ್ತಿದ್ದು, ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಯ ಮುಖ್ಯಸ್ಥ ಎನ್.ಎಂ.ಬಿರಾದಾರ ಇವರಿಗೆ ಆಯ್ಕೆ ಮಾಡಲಾಗಿದೆ.
ಆ.೯ರಂದು ಬೆಳಿಗ್ಗೆ ೧೧ಗಂಟೆಗೆ ಬೆಂಗಳೂರಿನ ಕೆ.ಎಸ್.ಆರ್.ಪಿ ೪ನೇ ಬೆಟಾಲಿಯನ್ ಕೋರಮಂಗಲದಲ್ಲಿ ಕನ್ನಡ ಚಲನಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಹಿನ್ನೆಲೆ: ಎನ್.ಎಂ.ಬಿರಾದಾರ ಅವರು ಕಳೆದ ಹಲವು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅನಾಥ, ಬಡ ಮಕ್ಕಳಿಗೆ ಆರ್ಥಿಕ ಸಹಕಾರ ನೀಡುವ ಜೊತೆಗೆ ಉಚಿತ ತರಬೇತಿ ನೀಡಿ ಸಾವಿರಾರು ಬಡ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿ ಸಮಾಜಕ್ಕೆ ಮಾದರಿ ಮತ್ತು ಆದರ್ಶ ವ್ಯಕ್ತಿತ್ವ ಹೊಂದಿದವರೆನಿಸಿದ್ದಾರೆ. ಅಲ್ಲದೇ ಹಾದಿ ತಪ್ಪಿದ್ದ ಅದೆಷ್ಟೋ ಯುವ ಜನಾಂಗ ಇವರ ಸ್ಪೂರ್ತಿದಾಯಕ ಮಾತುಗಳಿಂದ ಬದಲಾವಣೆ ಹೊಂದಿ ಸಮಾಜದ ಉನ್ನತ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎನ್.ಎಂ.ಬಿರಾದಾರ ಇವರ ಈ ಶೈಕ್ಷಣಿಕ ಸೇವೆಯನ್ನು ಗುರುತಿಸಿ ನಬಿರೋಶನ್ ಪ್ರಕಾಶನ, ಬೋರಗಿ ಅಪ್ಪ ರಾಜ್ಯ ಪ್ರಶಸ್ತಿ, ಜೊತೆಗೆ ೫ಸಾವಿರ ನಗದು ನೀಡಿ ಗೌರವಿಸುತ್ತಿದೆ. ಈ ಪ್ರಶಸ್ತಿಯನ್ನು ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಹರೀಶಖರನ್ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿಪಿ ಹಮ್ಜಾಹುಸೇನ್, ಡಿವೈಎಸ್ಪಿ ಉಮಾರಾಣಿ, ಇನ್ಸ್ಪೆಕ್ಟರ್ ಎಸ್.ಎಸ್.ಮೇಟಿ, ಕೆ.ವಿಶ್ವನಾಥ, ಭೈರ್, ಜ್ಯೋತಿರ್ಲಿಂಗ ಹೊನಹಟ್ಟಿ, ವೆಂಕಟೇಶ, ವೀರಲೋಕ ಬುಕ್ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಆಯೋಜಕ ಮೌಲಾಲಿ ಆಲಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

